ಕನ್ನಡ ಮಹಿಳಾ ಕಾವ್ಯದಲ್ಲಿ ಗಾಂಧಿ ಮತ್ತು ಅಂಬೇಡ್ಕರ್

Main Article Content

ಕುಮಾರ ಇಂದ್ರಬೆಟ್ಟ

Abstract

ಪ್ರಸ್ತುತ ಪ್ರಬಂಧವು ಕನ್ನಡದ ಹೊಸ ತಲೆಮಾರಿನ ಮಹಿಳಾ ಕವಯಿತ್ರಿಯರು ಚಾರಿತ್ರಿಕ ಪುರುಷರಾದ ಗಾಂಧಿ ಮತ್ತು ಅಂಬೇಡ್ಕರ್ ಅವರ ವ್ಯಕ್ತಿತ್ವಗಳನ್ನು ಕಾವ್ಯದ ಮೂಲಕ ಗ್ರಹಿಸಿರುವ ಭಿನ್ನ ದೃಷ್ಟಿಕೋನಗಳನ್ನು ಚರ್ಚಿಸುತ್ತದೆ. ಸಾಂಪ್ರದಾಯಿಕ ಇತಿಹಾಸವು ಈ ಮಹನೀಯರನ್ನು ಕೇವಲ ‘ಮಹಾತ್ಮ’ ಅಥವಾ ‘ದೇವ ಸಮಾನ’ ವ್ಯಕ್ತಿಗಳಾಗಿ ಚಿತ್ರಿಸಿದರೆ, ಮಹಿಳಾ ಕಾವ್ಯವು ಅವರ ತತ್ವಗಳನ್ನು ವರ್ತಮಾನದ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗಿಸುತ್ತದೆ. ಗಾಂಧೀಜಿಯ ಅಹಿಂಸೆಯ ತತ್ವವು ಇಂದಿನ ಹಿಂಸಾತ್ಮಕ ಜಗತ್ತಿನಲ್ಲಿ ಪ್ರತಿಮೆಯಾಗಿ ಸೀಮಿತಗೊಳ್ಳುತ್ತಿರುವುದನ್ನು ವ್ಯಂಗ್ಯವಾಡುವುದು ಮತ್ತು ಅಂಬೇಡ್ಕರ್ ಅವರ ಸಾಂವಿಧಾನಿಕ ಆಶಯಗಳು ಕೇವಲ ದಲಿತರಿಗೆ ಮಾತ್ರವಲ್ಲದೆ ಇಡೀ ಮಹಿಳಾ ಕುಲಕ್ಕೆ ಬಿಡುಗಡೆಯ ಹಾದಿಯಾಗಿದೆ ಎಂದು ಈ ಕಾವ್ಯಗಳು ಧ್ವನಿಸುತ್ತವೆ. ಇತಿಹಾಸವನ್ನು ಮರುಚಿಂತನೆಗೆ ಒಳಪಡಿಸುವ ಈ ಕ್ರಮವು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ.

Article Details

Section

Research Articles

Author Biography

ಕುಮಾರ ಇಂದ್ರಬೆಟ್ಟ

ಸಹಾಯಕ ಪ್ರಾಧ್ಯಾಪಕರು, ಸೈಂಟ್ ಕ್ಲಾರೆಟ್ ಕಾಲೇಜು ಸ್ವಾಯತ್ತ, ಜಾಲಹಳ್ಳಿ, ಬೆಂಗಳೂರು.

How to Cite

ಕುಮಾರ ಇಂದ್ರಬೆಟ್ಟ. (2026). ಕನ್ನಡ ಮಹಿಳಾ ಕಾವ್ಯದಲ್ಲಿ ಗಾಂಧಿ ಮತ್ತು ಅಂಬೇಡ್ಕರ್. ಅಕ್ಷರಸೂರ್ಯ (AKSHARASURYA), 13(03), 132 to 141. https://aksharasurya.com/index.php/latest/article/view/571

References

ಶ್ರೀನಿವಾಸರಾಜು ಚಿ. ಮತ್ತು ಸರ್ವಮಂಗಳ ಚ. (ಸಂ), (2012), ಬಿಡುಗಡೆಯ ಬೆಳಕು (1980-2000ರ ಆಯ್ದ ಕವನಗಳು), ಬೆಂಗಳೂರು: ಸಾಹಿತ್ಯ ಅಕಾಡೆಮಿ.

ಷರೀಫಾ ಕೆ. (ಸಂ), (2011), ಹೊಸ ಶತಮಾನದ ಕಾವ್ಯ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಮಾಧವಿ ಭಂಡಾರಿ ಕೆರೆಕೋಣ (ಸಂ), (2011), ನೀನುಂಟು ನಿನ್ನ ರೆಕ್ಕೆಯುಂಟು, ಬೆಂಗಳೂರು: ಚಿಂತನ ಪುಸ್ತಕ.

ಅನುಪಮಾ ಎಚ್.ಎಸ್. (ಸಂ), (2015), ಕಾವ್ಯಬೋಧಿ, ಹೊನ್ನಾವರ: ಕವಿ ಪ್ರಕಾಶನ.

ಸಬಿತಾ ಬನ್ನಾಡಿ (ಸಂ), (2017), ಅವಳ ಕವಿತೆ, ಹೊನ್ನಾವರ: ಕವಿ ಪ್ರಕಾಶನ.

ಸೌಮ್ಯ ಕೆ.ಆರ್., (2016) ಬೆಂಕಿಯಲ್ಲೂ ಬಾಡದ ಹೂವು, ಬೆಂಗಳೂರು: ಪ್ರಬುದ್ಧ ಪ್ರಕಾಶನ.

ಗಿರೀಶ್ ಹಂದಲಗೆರೆ, (2017), ಅರಿವೇ ಅಂಬೇಡ್ಕರ್, ಬೆಂಗಳೂರು: ಅವಿರತ ಪುಸ್ತಕ.

Most read articles by the same author(s)