ಹರಿದಾಸರು: ಆತ್ಮಶೋಧನೆ ಹಾಗೂ ತತ್ವ ಪ್ರತಿಪಾದನೆ

Main Article Content

ಮಹಾಂತೇಶ ದುರಗಣ್ಣವರ

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹರಿದಾಸ ಸಾಹಿತ್ಯವು ಭಕ್ತಿ ಆಂದೋಲನವಾಗಿ ಮಾತ್ರವಲ್ಲದೆ, ಸಾಮಾಜಿಕ ಮತ್ತು ವೈಚಾರಿಕ ಕ್ರಾಂತಿಯ ಪ್ರಬಲ ಮಾಧ್ಯಮವಾಗಿದೆ. ಹರಿದಾಸರು ಕೇವಲ ದೈವಸ್ತುತಿಗೆ ಸೀಮಿತವಾಗದೆ, ಮನುಷ್ಯನ ಅಂತರಂಗದ ಶುದ್ಧೀಕರಣ ಮತ್ತು ಆತ್ಮಶೋಧನೆಯ ಮಾರ್ಗವನ್ನು ಸ್ಪಷ್ಟವಾಗಿ ತೋರಿದ್ದಾರೆ. ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗೂ ಜಗನ್ನಾಥದಾಸರು ತಮ್ಮ ಕೀರ್ತನೆಗಳ ಮೂಲಕ ಅರಿಷಡ್ವರ್ಗಗಳನ್ನು ಗೆದ್ದು, ಅಹಂಕಾರವನ್ನು ತ್ಯಜಿಸಿ ಪರಮಾತ್ಮನಿಗೆ ಶರಣಾಗುವ ಬಗೆಯನ್ನು ವಿವರಿಸಿದ್ದಾರೆ. ಮಧ್ವಾಚಾರ್ಯರ ದ್ವೈತ ಸಿದ್ಧಾಂತ ಮತ್ತು ವೇದೋಪನಿಷತ್ತುಗಳ ಕ್ಲಿಷ್ಟಕರ ಸಾರವನ್ನು ಜನಸಾಮಾನ್ಯರ ಭಾಷೆಯಲ್ಲಿ ಸರಳೀಕರಿಸಿರುವುದು ಇವರ ವೈಶಿಷ್ಟ್ಯವಾಗಿದೆ. ಬಾಹ್ಯ ಆಚರಣೆಗಿಂತ ಅಂತರಂಗದ ನಿಷ್ಕಾಮ ಭಕ್ತಿ, ಗುರುಭಕ್ತಿ ಹಾಗೂ ನೈತಿಕ ಮೌಲ್ಯಗಳೇ ಮೋಕ್ಷಕ್ಕೆ ದಾರಿ ಎಂದು ದಾಸರು ಪ್ರತಿಪಾದಿಸಿದ್ದಾರೆ. ಈ ಸಾಹಿತ್ಯವು ಮನುಷ್ಯನನ್ನು ಲೌಕಿಕ ಮೌಢ್ಯದಿಂದ ಪಾರುಮಾಡಿ, ಆಧ್ಯಾತ್ಮಿಕ ಮತ್ತು ನೈತಿಕ ಉನ್ನತಿಯತ್ತ ಕೊಂಡೊಯ್ಯುವಲ್ಲಿ ದಾರಿದೀಪವಾಗಿದೆ.

Article Details

Section

Research Articles

Author Biography

ಮಹಾಂತೇಶ ದುರಗಣ್ಣವರ

ಕನ್ನಡ ಅತಿಥಿ ಉಪನ್ಯಾಸಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

How to Cite

ಮಹಾಂತೇಶ ದುರಗಣ್ಣವರ. (2026). ಹರಿದಾಸರು: ಆತ್ಮಶೋಧನೆ ಹಾಗೂ ತತ್ವ ಪ್ರತಿಪಾದನೆ. ಅಕ್ಷರಸೂರ್ಯ (AKSHARASURYA), 13(02), 107 to 118. https://aksharasurya.com/index.php/latest/article/view/531

References

ನಾಗರತ್ನ ಟಿ.ಎನ್., (2005), ದಾಸ ಸಾಹಿತ್ಯ ಪ್ರವೇಶಿಕೆ, ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ.

ನಾಗರತ್ನ ಟಿ.ಎಸ್., (1988), ದಾಸ ಸಾಹಿತ್ಯ ಸೌರಭ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ಬ್ರಹ್ಮಾನಂದ ಎಚ್.ಎಸ್., (2000), ದಾಸ ಸಾಹಿತ್ಯ ದರ್ಶನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಮುಗಳಿ ರಂ.ಶ್ರೀ., (1964), ಹರಿದಾಸ ಸಾಹಿತ್ಯ, ಮೈಸೂರು: ಉಷಾ ಸಾಹಿತ್ಯ ಮಾಲೆ.

ಶಿವರಾಮ ಕಾರಂತ ಕೆ., (1990), ಸಿರಿಗನ್ನಡ ಅರ್ಥಕೋಶ (ಕನ್ನಡ-ಕನ್ನಡ), ಬೆಂಗಳೂರು: ಎಸ್.ಬಿ.ಎಸ್. ಪ್ರಕಾಶನ.

Most read articles by the same author(s)