‘ಶ್ರೀ ದೇವೀ ಮಹಾತ್ಮೆ’ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ

Authors

  • ಶ್ರೀದೇವಿ ಸಂಶೋಧನಾ ವಿದ್ಯಾರ್ಥಿನಿ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.
  • ಧನಂಜಯ ಕುಂಬ್ಳೆ ಸಹಾಯಕ ಪ್ರಾಧ್ಯಾಪಕರು, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.

Keywords:

ಶ್ರೀದೇವೀ ಮಹಾತ್ಮೆ, ಪ್ರಸಂಗ, ಹಾಸ್ಯ, ಹಾಸ್ಯಗಾರರು, ದೂತ, ಪಾತ್ರ, ಯಕ್ಷಗಾನ

Abstract

ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವು ವೈಶಿಷ್ಟ್ಯಪೂರ್ಣ ರಂಗಸ್ಥಳ, ಚೌಕಿ ಮತ್ತು ವೈವಿಧ್ಯಪೂರ್ಣ ಕುಣಿತ, ವೇಷಭೂಷಣ, ರಂಗಪ್ರಕ್ರಿಯೆಗಳಿಂದಾಗಿ ವಿಶ್ವದಾದ್ಯಂತ ವಿಶಿಷ್ಟ ಕಲೆಯಾಗಿ ಗುರುತಿಸಿಕೊಂಡಿದೆ. ಇಂತಹ ಯಕ್ಷಗಾನದಲ್ಲಿ ಪ್ರಮುಖ ಪಾತ್ರ ಅಥವಾ ಪಾತ್ರಧಾರಿ ಹಾಸ್ಯಗಾರರು. ಯಕ್ಷಗಾನದಲ್ಲಿ ನಿರ್ದೇಶಕನೆಂದೇ ಗುರುತಿಸಿಕೊಂಡಿರುವ ಭಾಗವತನ ನಂತರದ ಪ್ರಮುಖ ಸ್ಥಾನವನ್ನು ಹಾಸ್ಯಗಾರನು ಪಡೆದುಕೊಳ್ಳುತ್ತಾನೆ. ಚೌಕಿಯಲ್ಲಿ ದೇವರ ಪೀಠವನ್ನು ಇರಿಸಿದ್ದಕ್ಕೆ ಸಮಾನಾಂತರವಾಗಿ ಇನ್ನೊಂದು ಮೂಲೆಯಲ್ಲಿ ಹಾಸ್ಯಗಾರನು ಕುಳಿತುಕೊಳ್ಳುತ್ತಾನೆ. ಭಾಗವತರು ರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರೆ, ಹಾಸ್ಯಗಾರರು ಚೌಕಿ ನಿರ್ವಹಣೆ ಮಾಡುತ್ತಾರೆ. ಹಾಸ್ಯಗಾರನಿಗೆ ಪ್ರತೀ ಪ್ರಸಂಗವು ರಂಗದಲ್ಲಿ ಯಾವ ರೀತಿ ಬಳಕೆಯಾಗಬೇಕೆಂಬ ಅರಿವು ಇರಬೇಕು.


ಯಕ್ಷಗಾನದಲ್ಲಿ ಅತ್ಯಂತ ಹೆಚ್ಚು ಪ್ರದರ್ಶನಗೊಳ್ಳುತ್ತಿರುವ, ಜನಪ್ರಿಯವೂ, ಆರಾಧನಾ ಮಹತ್ವವನ್ನೂ ಒಳಗೊಂಡಿರುವ ಶ್ರೀದೇವೀ ಮಹಾತ್ಮೆ ಪ್ರಸಂಗದಲ್ಲಿ ಬರುವಂತಹ ಹಾಸ್ಯ ಪಾತ್ರಗಳು ಮತ್ತು ಹಾಸ್ಯಗಾರರು ನಿರ್ವಹಿಸುತ್ತಿದ್ದಂತಹ ಇತರ ಹಾಸ್ಯೇತರ ಪಾತ್ರಗಳನ್ನು ಅಧ್ಯಯನಕ್ಕೆ ಒಳಪಡಿಸುವುದು ಈ ಲೇಖನದ ಉದ್ದೇಶ.

References

ಉಪ್ಪಂಗಳ ಶಂಕರನಾರಾಯಣ ಭಟ್. (2017). ತೆಂಕನಾಡ ಯಕ್ಷಗಾನ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ. ಬೆಂಗಳೂರು.

ಬಲಿಪ ನಾರಾಯಣ ಭಾಗವತ. (2010). ಐದು ದಿನದ ಶ್ರೀದೇವೀ ಮಹಾತ್ಮೆ. ಕಜೆ ಸುಬ್ರಹ್ಮಣ್ಯ ಭಟ್. ಕಜೆ ಮನೆ, ವೇಣೂರು.

ಮೋಹನ ಕುಂಟಾರ್. (2014). ಯಕ್ಷಗಾನ ಆಹಾರ್ಯ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ. ಹಂಪಿ.

ಹಿರಣ್ಯ ವೆಂಕಟೇಶ್ವರ ಭಟ್ಟ (ಸಂ). (2013). ರಸಿಕರತ್ನ (ವಿಟ್ಲ ಗೋಪಾಲಕೃಷ್ಣ ಜೋಷಿ ಸಂಸ್ಮರಣ ಗ್ರಂಥ). ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ(ರಿ). ಪರ್ಕಳ.

Downloads

Published

07.09.2024

How to Cite

ಶ್ರೀದೇವಿ, & ಧನಂಜಯ ಕುಂಬ್ಳೆ. (2024). ‘ಶ್ರೀ ದೇವೀ ಮಹಾತ್ಮೆ’ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ. AKSHARASURYA, 4(06), 45 to 54. Retrieved from https://aksharasurya.com/index.php/latest/article/view/485

Issue

Section

ಸಂಶೋಧನಾ ಲೇಖನಗಳು. | RESEARCH ARTICLE.

Most read articles by the same author(s)