ತುಳು ನಾಟಕ ಆಧಾರಿತ ಚಲನಚಿತ್ರಗಳು: ಪ್ರೇರಣೆ ಮತ್ತು ಅನನ್ಯತೆ
Keywords:
ತುಳು ಸಿನಿಮಾಗಳು, ಪ್ರೇರಣೆ, ಅನನ್ಯತೆ, ಕಥಾ ಸಂವಿಧಾನ, ಗೀತ ಸಾಹಿತ್ಯ, ಭಾಷಿಕ ಸ್ವರೂಪ, ತುಳುನಾಟಕಗಳುAbstract
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಅತೀ ಪ್ರಾಚೀನ ಭಾಷೆ. ವರ್ತಮಾನದಲ್ಲಿ ವಿಶ್ಲೇಷಣೆ ಮಾಡಿದರೆ ತುಳು ಹೊರತಾಗಿ ಇತರ ನಾಲ್ಕು ದ್ರಾವಿಡ ಭಾಷೆಗಳಾದ ಕನ್ನಡ, ಮಲೆಯಾಳಂ, ತಮಿಳು ತೆಲುಗು ಭಾಷೆಗಳು ತಮ್ಮ ವ್ಯಾಪ್ತಿಯ ರಾಜ್ಯವನ್ನೇ ಹೊಂದಿವೆ. ಆದರೆ ತುಳು ಭಾಷೆಯು ಕನ್ನಡ ಭಾಷೆಯೊಂದಿಗೆ ಸೌಹಾರ್ದವಾಗಿದ್ದು ಆತ್ಮೀಯವಾಗಿದೆ. ಇತಿಹಾಸಕಾಲದ ತುಳುನಾಡಿನ ವಿಸ್ತಾರ ಕಾಲಕ್ರಮೇಣ ಕುಂದುತ್ತಾ ಬಂತು. ಈಗ ತುಳುನಾಡೆಂದರೆ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳೆಂದು ತಿಳಿಯಬಹುದು. ಈ ಭಾಗದಲ್ಲಿ ಭಾಷೆ, ಸಂಸ್ಕೃತಿ, ಉಡುಗೆ ತೊಡುಗೆ, ಹಬ್ಬ ಹರಿದಿನಗಳು, ತಿಂಡಿ-ತಿನಿಸುಗಳು ಕೌಟುಂಬಿಕ ಪದ್ಧತಿ, ಕೃಷಿ ಚಟುವಟಿಕೆಗಳು ಎಲ್ಲವೂ ಪರಂಪರೆಯೊಂದಿಗೆ ಸಾಗಿಬಂದಿದೆ. ಸಹಸ್ರಾರು ವರ್ಷಗಳಿಂದ ಪರಂಪರೆ, ಸಂಪ್ರದಾಯ ತಲೆಮಾರುಗಳೊಂದಿಗೆ ಅಂತರ್ಗತವಾಗಿದೆ. ಆಧುನಿಕತೆಯ ಪ್ರಭಾವಕ್ಕೊಳಗಾದರೂ ಸಂಪ್ರದಾಯದ ನೆಲೆಗಟ್ಟು ಭದ್ರವಾಗಿದೆ.
References
ಅಮೃತ ಸೋಮೇಶ್ವರ, (2007), ತುಳುವ ಜಾನಪದ: ಕೆಲವು ನೋಟಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ತಮ್ಮ ಲಕ್ಷ್ಮಣ, (2022), ತುಳು ಬೆಳ್ಳಿತೆರೆಯ ಸುವರ್ಣ ಯಾನ, ದೃಶ್ಯ, ಮಂಗಳೂರು.
ಮಹಾಬಲೇಶ್ವರ ಕಾಟ್ರಹಳ್ಳಿ, (1993), ಸಾಹಿತ್ಯ ಮತ್ತು ಸಿನಿಮಾ, ಕರ್ನಾಟಕ ಸಾಹಿತ್ಯ ಕಾಡೆಮಿ, ಬೆಂಗಳೂರು.
ಮುದ್ದು ಮೂಡುಬೆಳ್ಳೆ, (2005), ತುಳು ರಂಗಭೂಮಿ, ಸಾಹಿತ್ಯ, ಸಂಸ್ಕೃತಿ ವೇದಿಕೆ ಬೆಳ್ಳೆ, ಮಂಗಳೂರು.
ವಿವೇಕ ರೈ ಬಿ.ಎ. (ಪ್ರ, ಸಂ), (2007), ತುಳು ಸಾಹಿತ್ಯ ಚರಿತ್ರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.