ಶಿಕ್ಷಣದಲ್ಲಿ ಭಾಷಾ ವೈವಿಧ್ಯತೆ ಮತ್ತು ಸಾಹಿತ್ಯದ ಪ್ರಭಾವ

Main Article Content

ನಾಗರಾಜ ಎಸ್. ಬೆಳಗಾಂವಕರ

Abstract

ಭಾಷೆ ಮಾನವನ ಸಂವಹನದ ಅಸ್ತ್ರ ಮಾತ್ರವಲ್ಲದೆ ಅಭಿವ್ಯಕ್ತಿಯ ಮೂಲ ಸಾಧನವಾಗಿದ್ದು, ಅದು ಕೇವಲ ಸಂವಹನದ ಸಾಧನವಲ್ಲ, ವ್ಯಕ್ತಿಯ ಚಿಂತನೆ, ಸಂಸ್ಕೃತಿ ಮತ್ತು ಜ್ಞಾನವನ್ನು ರೂಪಿಸುವ ಶಕ್ತಿಯಾಗಿದೆ. ಭಾರತವು ಬಹುಭಾಷಾ ರಾಷ್ಟ್ರವಾಗಿರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿಯೂ ಭಾಷಾ ವೈವಿಧ್ಯತೆ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಸಾಹಿತ್ಯವು ಭಾಷೆಯ ಸೃಜನಾತ್ಮಕ ರೂಪವಾಗಿದ್ದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಭಾವನಾತ್ಮಕ ಬೆಳವಣಿಗೆ ಹಾಗೂ ನೈತಿಕ ಮೌಲ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯಾವುದೇ ಒಂದು ಪ್ರದೇಶದ ಇತರೆ ವ್ಯವಸ್ಥೆಗಳಂತೆ ನಮ್ಮ ಭಾವನೆಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳುವಾಗ ಪ್ರತಿಯೊಂದು ಭಾಷೆಗೂ ಅದರದೇ ಆದ ಒಂದು ವ್ಯವಸ್ಥಿತ ಕ್ರಮ ಇರುತ್ತದೆ. ವಿವಿಧ ಜನಾಂಗದವರು ಎಲ್ಲೇ ವಾಸಿಸುತ್ತಿದ್ದರೂ ನಿತ್ಯ ಬಳಸುವ ಭಾಷೆ ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೂ ಬಳಕೆಯ ಉಚ್ಚಾರ ಮತ್ತು ಬರವಣಿಗೆಯ ಪದ್ಧತಿ ಏಕರೂಪದ್ದಾಗಿರುತ್ತದೆ. ಸಮಾಜದ ಸದಸ್ಯರ ಮಧ್ಯೆ ಸಂಪರ್ಕ ಸಾಧಿಸುವುದೇ ಭಾಷೆಯ ಪ್ರಮುಖ ಉದ್ದೇಶವಾಗಿದೆ. ಭಾಷೆಯ ಮೂಲಕ ಮನುಷ್ಯ ಸಮಾಜದ ನಡುವೆಯೇ ಕರ್ತವ್ಯ ನಿರ್ವಹಿಸುತ್ತಾನೆ. ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸಂಪರ್ಕವನ್ನು ಬೆಸೆಯುವುದೇ ಭಾಷೆಯ ಪ್ರಮುಖ ಉದ್ದೇಶವಾಗಿದೆ. ಯಾವುದೇ ಒಂದು ಭಾಷೆ ಕಲಿಯಲು ವಯಸ್ಸಿನ ನಿರ್ಬಂಧವಿಲ್ಲ. ವರ್ತಕರು, ತಾವು ವ್ಯಾಪಾರಕ್ಕಾಗಿ ಹೋದ ಕಡೆ ನೆಲೆಸಿದ ಕಡೆ ಅಲ್ಲಿಯ ಭಾಷೆಯನ್ನು ಬಳಕೆಯಿಂದಲೇ ಕಲಿತು ವ್ಯವಹರಿಸುತ್ತಾರೆ. ಆದ್ದರಿಂದ ಭಾಷೆ ವಂಶದಿಂದ ಬರುವಂತಹದ್ದಲ್ಲ ಕಲಿಕೆಯಿಂದ ಬರುವಂತಹದ್ದು. ಆದ್ದರಿಂದ ಮಾನವ ತಾನಿರುವ ಮನೆಯ, ಪರಿಸರದ ಭಾಷೆಯನ್ನು ಸಹಜವಾಗಿ ಕಲಿಯಬಲ್ಲ, ಮಾತನಾಡಬಲ್ಲ ಎಂದು ಚಾಮ್‌ಸ್ಕಿ ಮತ್ತು ನಂತರದ ಭಾಷಾ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ಲೇಖನವು ಶಿಕ್ಷಣದಲ್ಲಿ ಭಾಷಾ ವೈವಿಧ್ಯತೆಯ ಅರ್ಥ, ಅದರ ಮಹತ್ವ, ಸಾಹಿತ್ಯದ ಪ್ರಭಾವ ಮತ್ತು ಭವಿಷ್ಯದ ಅವಕಾಶಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ ಶಿಕ್ಷಣದಲ್ಲಿ ಭಾಷಾ ವೈವಿಧ್ಯತೆ ವಿದ್ಯಾರ್ಥಿಗಳ ಚಿಂತನೆ, ಅಭಿವ್ಯಕ್ತಿ ಮತ್ತು ಸಂಸ್ಕೃತಿಯ ಅರಿವನ್ನು ವಿಸ್ತರಿಸುತ್ತದೆ. ಸಾಹಿತ್ಯವು ಭಾಷೆಯ ಸೌಂದರ್ಯ, ಮೌಲ್ಯಗಳು ಹಾಗೂ ಸಾಮಾಜಿಕ ಅನುಭವಗಳನ್ನು ಪರಿಚಯಿಸುತ್ತದೆ. ಭಾಷಾ ವೈವಿಧ್ಯತೆಯೊಂದಿಗೆ ಸಾಹಿತ್ಯ ಅಧ್ಯಯನವು ಸಮಾವೇಶಿತ ಶಿಕ್ಷಣ, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತದೆ.

Article Details

Section

Research Articles

Author Biography

ನಾಗರಾಜ ಎಸ್. ಬೆಳಗಾಂವಕರ

ಉಪನ್ಯಾಸಕರು, ಇತಿಹಾಸ ವಿಭಾಗ, ಕೆ.ಎಲ್.ಇ ಸಂಸ್ಥೆಯ ಜಿ. ಆಯ್. ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಪ್ಪಾಣಿ.

References

ಉಪಾಧ್ಯ ಜಿ.ಎನ್., (2024), ರಸಋಷಿ ರಾಷ್ಟ್ರಕವಿ ಕುವೆಂಪು, ಮುಂಬೈ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ.

ಚಿದಾನಂದಮೂರ್ತಿ ಎಂ., (1984), ಸಂಶೋಧನೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್.

ಆಮೂರ ಜಿ.ಎಸ್., (2013), ಯು. ಆರ್. ಅನಂತಮೂರ್ತಿ ವೈಚಾರಿಕತೆ ಹಾಗೂ ಸಾಹಿತ್ಯ, ಧಾರವಾಡ: ಮನೋಹರ ಗ್ರಂಥ ಮಾಲಾ.

ಮುಗಳಿ ರಂ.ಶ್ರೀ., (2011), ಬೇಂದ್ರೆ ಕಾವ್ಯ, ಬೆಂಗಳೂರು: ಅಭಿನವ ಪ್ರಕಾಶನ.

Kumar, K., (1981), Political agenda of education: A study of colonialist and nationalist ideas, New Delhi: Oxford University Press.

UNESCO, (2003), Education in a Multilingual world, Paris: UNESCO Publishing.

Government of India, (2020), National Education Policy 2020, New Delhi: Ministry of Human Resource Development.