ಮೌನದಿಂದ ಮುಂಚೂಣಿಗೆ ಸ್ವಾತಂತ್ರ್ಯ ಹೋರಾಟದ ಪಯಣದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ

Main Article Content

ನಾಗರಾಜ ಎಸ್. ಬೆಳಗಾಂವಕರ
ಗಣಪತಿ ಗೌಡ ಎಸ್.

Abstract

ಭಾರತದ ಸ್ವಾತಂತ್ರ್ಯ ಚಳುವಳಿಯು ದೇಶದ ಪ್ರತಿಯೊಂದು ಭಾಗದಲ್ಲೂ ತನ್ನದೇ ಆದ ವಿಶಿಷ್ಟ ರೂಪದಲ್ಲಿ ಬೆಳವಣಿಗೆಯಾಯಿತು. ಕರ್ನಾಟಕವೂ ಈ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅದರೊಳಗಿನ ಬೆಳಗಾವಿ ಜಿಲ್ಲೆಯು ರಾಷ್ಟ್ರ ಭಾವನೆ, ಕ್ರಾಂತಿಸ್ಪೂರ್ತಿ ಮತ್ತು ಜನಜಾಗೃತಿಯ ಕೇಂದ್ರವಾಗಿತ್ತು. ಮಹಿಳೆಯರಿಂದ ವಿದ್ಯಾರ್ಥಿಗಳವರೆಗೆ, ರೈತರಿಂದ ಕಾರ್ಮಿಕರವರೆಗೆ ಎಲ್ಲರೂ ಸ್ವಾತಂತ್ರ್ಯದ ಕನಸಿಗಾಗಿ ತ್ಯಾಗಮಯ ಹೋರಾಟ ನಡೆಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕರ್ನಾಟಕದ ವಿಶೇಷವಾಗಿ ಬೆಳಗಾವಿ ಜಿಲ್ಲೆ ಅತ್ಯಂತ ಪ್ರಮುಖ ಪಾತ್ರವಹಿಸಿದೆ. 1757 ಮತ್ತು 1764ರ ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಪರಿಣಾಮದಿಂದ ಬ್ರಿಟಿಷ್ ಸಾಮ್ರಾಜ್ಯ ಭಾರತದಲ್ಲಿ ಭದ್ರವಾಗಿ ನೆಲೆಯೂರಿತು. ನಂತರ ವಿವಿಧ ಕಾಯ್ದೆಗಳ ಮೂಲಕ ಭಾರತೀಯರನ್ನು ಗುಲಾಮರನ್ನಾಗಿಸಿದ್ದನ್ನು ಕಾಣುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ 1857ರಲ್ಲಿ ಜರುಗಿದ ದಂಗೆಯು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ್ದನ್ನು ಕಾಣುತ್ತೇವೆ. ಈ 1857ರ ದಂಗೆಯು ವಿವಿಧ ಸ್ತರಗಳಲ್ಲಿ ಬದಲಾಗುತ್ತಾ ದೇಶಾದ್ಯಂತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದದ ಹೋರಾಟಕ್ಕೆ ಪ್ರೇರಣಾ ಶಕ್ತಿಯಾಗಿ ಮಾರ್ಪಟ್ಟಿತು. ಬ್ರಿಟಿಷರ ಶೋಷಣಾತ್ಮಕ ಆಡಳಿತದ ವಿರುದ್ಧ ಜನರಲ್ಲಿ ಹುಟ್ಟಿದ ಅಸಮಾಧಾನ, ಅಹಿಂಸಾ ಮತ್ತು ಸತ್ಯಾಗ್ರಹದ ತತ್ವಗಳಿಂದ ಪ್ರೇರಿತವಾಗಿ ಸಂಘಟಿತ ಚಳುವಳಿಯಾಗಿ ರೂಪಾಂತರಗೊಂಡಿತು. ಬೆಳಗಾವಿ ಜಿಲ್ಲೆಯು ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಯ ಕೇಂದ್ರವಾಗಿದ್ದು, ಅಸಹಕಾರ ಚಳುವಳಿ, ಖಾದಿ ಚಳುವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿತು. ಬೆಳಗಾವಿ ಜಿಲ್ಲೆಯ ಮಹಿಳೆಯರು, ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಸೇವೆಯಲ್ಲಿ ಪ್ರಮುಖ ಪಾತ್ರವಹಿಸಿ ಖಾದಿ ತಯಾರಿಕೆ, ಸಭೆ ಸಮಾವೇಶಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಪರಿವರ್ತನೆಗೆ ಕಾರಣರಾದರು. ಈ ಲೇಖನವು ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಪಯಣವನ್ನು ಪರಿಚಯಿಸಿ, ಅದರ ಯಶಸ್ಸಿಗೆ ಕಾರಣರಾದ ಹೋರಾಟಗಾರರನ್ನು ಪರಿಚಯಿಸಿ, ಇಂದಿನ ಅವರ ಪ್ರಸ್ತುತತೆಯನ್ನು ಸ್ಮರಿಸುವುದಾಗಿದೆ.

Article Details

Section

Research Articles

Author Biographies

ನಾಗರಾಜ ಎಸ್. ಬೆಳಗಾಂವಕರ

ಸಂಶೋಧನಾ ವಿದ್ಯಾರ್ಥಿ, ಇತಿಹಾಸ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟಾ, ಮಂಗಳೂರು.

ಗಣಪತಿ ಗೌಡ ಎಸ್.

ಪ್ರಾಧ್ಯಾಪಕರು, ಇತಿಹಾಸ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟಾ, ಮಂಗಳೂರು.

How to Cite

ನಾಗರಾಜ ಎಸ್. ಬೆಳಗಾಂವಕರ, & ಗಣಪತಿ ಗೌಡ ಎಸ್. (2025). ಮೌನದಿಂದ ಮುಂಚೂಣಿಗೆ ಸ್ವಾತಂತ್ರ್ಯ ಹೋರಾಟದ ಪಯಣದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ. ಅಕ್ಷರಸೂರ್ಯ (AKSHARASURYA), 9(06), 58 to 68. https://aksharasurya.com/index.php/latest/article/view/1701

References

ಶ್ರೀ. ಎಸ್. ವಾಯ್. ಹಂಜಿ : “ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಸವಪ್ರಭು ಕೋರೆಯವರು” ಪ್ರಸಾರಾಂಗ, ಕೆ.ಎಲ್.ಇ ಸಂಸ್ಥೆ, ಬೆಳಗಾವಿ. (2016)

ಶ್ರೀ. ಎಲ್. ಎಸ್. ಶಾಸ್ತ್ರಿ : “ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ” ಪ್ರಸಾರಾಂಗ, ಕೆ.ಎಲ್.ಇ ಸಂಸ್ಥೆ, ಬೆಳಗಾವಿ. (2016)

ಡಾ. ಸೂರ್ಯನಾಥ ಕಾಮತ್ : “ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು” ಗೀತಾ ಬುಕ್ ಹೌಸ್, ಮೈಸೂರು, 1980

ಪ್ರೊ. ಜಿ. ಬಿ. ನಾಯಕ : “ಕರ್ನಾಟಕ ಗ್ರಾಮ ಚರಿತ್ರೆ ಕೋಶ ಬೆಳಗಾವಿ ಜಿಲ್ಲಾ ಸಂಪುಟ ಭಾಗ-2” ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ(ಶಿಗ್ಗಾಂವಿ). (2017)

A Hand Book of KARNATAKA: Karnataka Gazetteer Department, Bengaluru. (2020)

Suryanath Kamath : “BELGAUM DISTRICT” Karnataka State Gazetteer, Bengaluru. (1987)

https://dssb.karnataka.gov.in/dssb/documents/docs/STATE%20FREEDOM%20FIGHTER%20JANUARY%202025%20BILLED%20PENSIONERS%20LIST.pdf

Most read articles by the same author(s)