ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕರ್ನಾಟಕ ಕವಿಚರಿತೆ

Main Article Content

ಸತೀಶ ಜಿ. ನಾಯ್ಕ

Abstract

ಭಾರತೀಯ ಭಾಷೆಗಳಲ್ಲಿ ದ್ರಾವಿಡ ಭಾಷೆಗಳು ಬಹುಹಿಂದಿನ ಹಳಮೆಯನ್ನು ಹೊಂದಿವೆ. ವಿಶೇಷವಾಗಿ ತಮಿಳು ಮತ್ತು ಕನ್ನಡ ಭಾಷೆಗೆ ರಾಮಾಯಣ-ಮಹಾಭಾರತ ಕಾಲದ ಉಲ್ಲೇಖಗಳು ದೊರೆಯುತ್ತವೆ. ದ್ರಾವಿಡ ಭಾಷೆಗಳಲ್ಲಿ ಸಾಹಿತ್ಯ ಚರಿತ್ರೆಗಳನ್ನು ಕಟ್ಟಿಕೊಟ್ಟಿರುವ ಮಾದರಿಗಳು ವಿಶಿಷ್ಟಶೈಲಿಯದ್ದಾಗಿವೆ. ಅದರಲ್ಲೂ ಕನ್ನಡದಲ್ಲಿ ಸಾಹಿತ್ಯ ಚರಿತ್ರೆಯ ಕಲ್ಪನೆಯನ್ನು ‘ಕವಿ ಚರಿತೆ’ಯ ಮಾದರಿಯಲ್ಲಿ ಮೊದಲು ರಚಿಸಿದರು. ಕನ್ನಡ ಸಾಹಿತ್ಯ ಚರಿತ್ರೆಯ ಮೇರು ಕೃತಿಯಾದ ‘ಕರ್ನಾಟಕ ಕವಿ ಚರಿತೆ’ ಸಂಪುಟಗಳು ಅನೇಕ ಸಾಂಸ್ಕೃತಿಕ ಮಹತ್ವಗಳಿಗೆ ಕಾರಣವಾಗಿವೆ. ಆರ್. ನರಸಿಂಹಾಚಾರ್ಯರು ರಚಿಸಿದ ‘ಕರ್ನಾಟಕ ಕವಿ ಚರಿತೆ’ಯು ಆಕರ ಶೋಧನೆಯ ಕೃತಿ. ಸಂಶೋಧನೆಯ ಆಧಾರದಲ್ಲಿ ಕವಿ ಚರಿತೆ ಎಂಬುವ ಕಲ್ಪನೆಯನ್ನು ಸ್ಥಾಪಿಸಿ, ಎಲ್ಲಾ ಹಿನ್ನೆಲೆಯ ಮಾಹಿತಿಗಳನ್ನು ಸಂಗ್ರಹಿಸಿ ವಿವಿಧ ಆಯಾಮಗಳಿಂದ ವ್ಯಾಖ್ಯಾನಿಸುವ ಶೈಲಿಗೆ ಅಳವಡಿಸಿ, ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯನ್ನು ನಿರೂಪಿಸಿದ ಮಹಾ ಹೆಗ್ಗಳಿಕೆಯೇ ಕರ್ನಾಟಕ ಕವಿ ಚರಿತೆ. ಈ ಮಹತ್ತಾದ ಕಾರ್ಯಕ್ಕೆ ಆರ್. ನರಸಿಂಹಾಚಾರ್ಯರು ತೊಡಗಿಸಿಕೊಂಡು ವಿಶೇಷವಾದ ರೀತಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊದಲು ಕಟ್ಟಿಕೊಟ್ಟವರು. ದೇಸಿಯ ನೆಲೆಯಲ್ಲಿ ಆಲೋಚಿಸಿ ಕವಿ-ಕಾವ್ಯ ಪರಿಚಯವನ್ನು ವಿವರಿಸಿ, ಬೃಹತ್ ಆಕರವಾಗಿ ಕನ್ನಡಕ್ಕೆ ನೀಡಿದ ಕಾಣಿಕೆ ಮುಂದಿನ ಬೌದ್ಧಿಕ ವಿವೇಚನೆಗೆ ದಾರಿಯಾಯಿತು. ಅದರಲ್ಲೂ ಸಾಹಿತ್ಯ ಚರಿತ್ರೆಯನ್ನು ರಚಿಸುವ ಅನೇಕ ವಿದ್ವಾಂಸರಿಗೆ ಆಕರ ಗ್ರಂಥವಾಯಿತು. ‘ಕವಿ-ಚರಿತೆ’ ಎಂಬುವ ವಿಚಾರ ಮೀಮಾಂಸೆಯು ದ್ರಾವಿಡ ಭಾಷೆಗಳಲ್ಲಿ ಕನ್ನಡದಲ್ಲೇ ಮೊದಲು ಎಂಬುದು ಬಹಳ ವಿಶೇಷ. ಪೂರ್ವದಲ್ಲಿ ತಮಿಳಿನಲ್ಲಿ ಸಾಹಿತ್ಯ ಚರಿತ್ರೆಯು ರಚನೆಯಾದರೂ; ಅದು ಕವಿಚರಿತೆ ಎಂಬುವ ಮಾದರಿಯಲ್ಲಿ ರಚನೆಯಾಗಲಿಲ್ಲ. ಇಲ್ಲಿ ಆರ್. ನರಸಿಂಹಾಚಾರ್ಯರ ‘ಕರ್ನಾಟಕ ಕವಿ ಚರಿತೆ’ಯ ಹಿನ್ನೆಲೆ ಮತ್ತು ಮಹತ್ವಗಳ ಚರ್ಚೆಯನ್ನು ಕೈಗೊಳ್ಳಲಾಗಿದೆ.

Article Details

Section

Research Articles

Author Biography

ಸತೀಶ ಜಿ. ನಾಯ್ಕ

ಉಪನ್ಯಾಸಕ, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ನಿಪ್ಪಾಣಿ.

How to Cite

ಸತೀಶ ಜಿ. ನಾಯ್ಕ. (2026). ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕರ್ನಾಟಕ ಕವಿಚರಿತೆ. ಅಕ್ಷರಸೂರ್ಯ (AKSHARASURYA), 12(02), 206 to 215. https://aksharasurya.com/index.php/latest/article/view/362

References

ನರಸಿಂಹಾಚಾರ್ಯ ಆರ್., (1907-29), ಕರ್ನಾಟಕ ಕವಿಚರಿತೆ ಸಂಪುಟ 1,2,3, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಮುಗಳಿ ರಂ. ಶ್ರೀ., (1953), ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಗೀತಾ ಬುಕ್ ಹೌಸ್.

ಮುಗಳಿ ರಂ. ಶ್ರೀ., (1968), ಕನ್ನಡ ಸಾಹಿತ್ಯದ ಇತಿಹಾಸ, ನವದೆಹಲಿ: ಸಾಹಿತ್ಯ ಅಕಾಡೆಮಿ.

ರೈಸ್ ಈ.ಪಿ., (1916), ಕನ್ನಡ ಸಾಹಿತ್ಯ ಚರಿತ್ರೆ (ಅನು: ಸಂಗಮನಾಥ ಜಿ. ಹಂಡಿ, ಕುಮಾರಿ ಪೌಲಿನ ನಂದಗಾವ), ಮೈಸೂರು: ಶರತ್ ಪ್ರಕಾಶನ.

ಮುತ್ತಣ್ಣ ಐ.ಮಾ., (1987), ಭಾರತ ಸಾಹಿತ್ಯ ಸಂಸ್ಕೃತಿಗೆ ಪಾಶ್ಚಾತ್ಯ ವಿದ್ವಾಂಸರ ಸೇವೆ, ಭಾಗ 1-2, ಮೈಸೂರು: ಗೀತಾ ಬುಕ್ ಹೌಸ್.

ಮುಗಳಿ ರಂ.ಶ್ರೀ., (1964), ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ತ.ವೆಂ. ಸ್ಮಾರಕ ಗ್ರಂಥಮಾಲೆ.

ನರಸಿಂಹಾಚರ್ ಡಿ.ಎಲ್., (1971), ಪೀಠಿಕೆಗಳು ಲೇಖನಗಳು, ಮೈಸೂರು: ಡಿ.ವಿ.ಕೆ. ಪ್ರಕಾಶನ.

ಗೋಪಾಲಕೃಷ್ಣ ಅಡಿಗ, (1971), ಇತಿಹಾಸ ಚಕ್ರ, ಸಾಗರ: ಅಕ್ಷರ ಪ್ರಕಾಶನ.

ಶ್ರೀನಿವಾಸ ಹಾವನೂರ, (1974), ಹೊಸಗನ್ನಡದ ಅರುಣೋದಯ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

Most read articles by the same author(s)