ಯಕ್ಷಗಾನ: ಕುಮಟಾ ಗೋವಿಂದ ನಾಯ್ಕರ ʼಹನುಮಂತನʼ ಪಾತ್ರದ ಸಾಂಸ್ಕೃತಿಕ ಮಹತ್ವ

Main Article Content

ಸತೀಶ ಜಿ. ನಾಯ್ಕ

Abstract

ಯಕ್ಷಗಾನದಲ್ಲಿ ಕುಮಟಾ ಗೋವಿಂದ ನಾಯ್ಕರ ಸಾಧನೆ ಬಹಳ ದೊಡ್ಡದು. ರಾಮಾಯಣ, ಮಹಾಭಾರತ ಪ್ರಸಂಗಗಳ ಹನುಮಂತನ ಪಾತ್ರಗಳ ನಿರ್ವಹಣೆಯ ಮೂಲಕ ಗೋವಿಂದ ನಾಯ್ಕರನ್ನು “ಅಭಿನವ ಹನುಮಂತ”, “ಕಲಿಯುಗದ ಹನುಮಂತ” ಎಂದೆಲ್ಲ ಕರೆಯುವಂತೆ ಮಾಡಿತು. ಯಕ್ಷಗಾನ ರಾಮಾಯಣ ಮತ್ತು ಭಾರತ ಪ್ರಸಂಗಗಳಾದ ಮಾರುತಿ ಪ್ರತಾಪ, ವೀರಮಣಿ ಕಾಳಗ, ರಾಮಾಂಜನೇಯ ಕಾಳಗ, ಲಂಕಾದಹನ, ಶರಸೇತುಬಂಧ, ಚೂಡಾಮಣಿ, ಅಂಗದ ಸಂಧಾನ, ಇಂದ್ರಜಿತ್ ಕಾಳಗ, ಹನುಮದ್ವಿಲಾಸ, ವಾಲಿವಧೆ, ಉಂಗುರ ಸಂಧಿ, ಜಾಂಬವತಿ ಕಲ್ಯಾಣ, ಅತಿಕಾಯ ಕಾಳಗ, ಸೀತಾಪಹರಣ, ಸೇತುಬಂಧ, ಲವಕುಶ ಕಾಳಗ, ರಾವಣವಧೆ, ಸೌಗಂಧಿಕಾ ಪುಷ್ಪಹರಣ ಮುಂತಾದ ಎಷ್ಟೋ ಕಥಾಭಾಗದಲ್ಲಿ ಬರುವ ಹನುಮಂತನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಲ್ಲಾ ಪ್ರಕಾರದ ಹನುಮಂತನ ಪಾತ್ರಗಳಿಗೂ ಹೆಸರುವಾಸಿ. ಗೋವಿಂದ ನಾಯ್ಕರ ಹನುಮಂತ ಧೀರ, ಗಂಭೀರ, ಅಷ್ಟೇ ಶಾಂತ, ಶೃಂಗಾರ. ಭಾವನಾತ್ಮಕವಾದ ತವನಿಧಿ. ಭಕ್ತಿರಸದ ಮಹೋನ್ನತ ಪ್ರತೀಕ. ಮುಗ್ಧತೆಯ ಉತ್ತುಂಗ. ಮಾತಿನ ಮಲ್ಲನಲ್ಲ. ವೈಚಾರಿಕ ವಿವೇಚನಾ ಮೂರ್ತಿ. ಇನ್ನು ಬಹಳ ಮುಖ್ಯವಾಗಿ ಅವರ ಪ್ರವೇಶಕ್ರಮದ ಶೈಲಿ ಅತ್ಯಾಕರ್ಷಕವಾದದ್ದು. ʼಹನುಮಂತʼನಾಗಿ ರಂಗವೇರಿದರೆ ಸಾಕ್ಷಾತ್ ರಾಮಾಯಣದ ಹನುಮಂತನ ಆವಾಹನೆ ಆದ ಹಾಗೆ. ʼರಘೋತ್ತಮ ರಾಮ ರಮಾಕಾಂತ ರಾಮʼ ಎನ್ನುವ ಅಷ್ಟತಾಳದ ಮುಕ್ತಾಯಕ್ಕೆ ಪದ್ಮಾಸನದಲ್ಲೇ ಪೀಠ ಏರುವ ಅವರ ಶೈಲಿ ನೋಡುಗರಿಗೆ ರೋಮಾಂಚನ. ಗೋವಿಂದ ನಾಯ್ಕರ ಹನುಮಂತನ ಪಾತ್ರವೆಂದರೆ ಪರಂಪರೆಯ ಅನುಷ್ಠಾನದೊಂದಿಗಿನ ನಾವೀನ್ಯತೆಯ ಪ್ರತೀಕ. ಶಿಷ್ಟ, ವಿಶಿಷ್ಟ, ಬದ್ಧ, ಪ್ರಬುದ್ಧ. ಪ್ರತಿಯೊಂದು ಪ್ರಸಂಗದ ವಿವಿಧ ಸನ್ನಿವೇಶಗಳಲ್ಲೂ ಭಿನ್ನವಾಗಿಯೇ ಕಾಣಿಸಿಕೊಳ್ಳುತ್ತಾ ವೈವಿಧ್ಯತೆಗೆ ಹೆಸರಾದರು. ಇಲ್ಲಿ ಗೋವಿಂದ ನಾಯ್ಕರ ಹನುಮಂತನ ಪಾತ್ರದ ಕುರಿತು ಇರುವ ವಿಶೇಷತೆಯನ್ನು ತಿಳಿಸುತ್ತಾ ಅದರ ಸಾಂಸ್ಕೃತಿಕ ಮಹತ್ವವನ್ನು ಹೇಳಲಾಗುವುದು.

Article Details

Section

Research Articles

Author Biography

ಸತೀಶ ಜಿ. ನಾಯ್ಕ

ಉಪನ್ಯಾಸಕ, ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ನಿಪ್ಪಾಣಿ.

 

How to Cite

ಸತೀಶ ಜಿ. ನಾಯ್ಕ. (2025). ಯಕ್ಷಗಾನ: ಕುಮಟಾ ಗೋವಿಂದ ನಾಯ್ಕರ ʼಹನುಮಂತನʼ ಪಾತ್ರದ ಸಾಂಸ್ಕೃತಿಕ ಮಹತ್ವ. ಅಕ್ಷರಸೂರ್ಯ (AKSHARASURYA), 8(01), 106 to 118. https://aksharasurya.com/index.php/latest/article/view/1365

References

ನಾಯಕ ವಿ.ಗ., (1983), ಚಿನ್ನದ ಪೆಟ್ಟಿಗೆ, ಸ್ಮೃತಿ ಪ್ರಕಾಶನ, ದಕ್ಷಿಣ ಕನ್ನಡ.

ಮೋಹನ ಕುಂಟಾರ್, (2009), ಯಕ್ಷಗಾನ ಆಹಾರ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.

ಶಿವರಾಮ ಕಾರಂತ, (1963), ಯಕ್ಷಗಾನ ಬಯಲಾಟ, ರವೀಂದ್ರ ಪುಸ್ತಕಾಲಯ, ಸಾಗರ.

ನಾಯಕ ವಿ.ಗ., (1991), ಸ್ವಾಗತವನೆ ಕೋರಿದೆ ಹರ್ಷ ಚೆಲ್ಲಿ ಕಾದಿದೆ, ಸ್ಮೃತಿ ಪ್ರಕಾಶನ, ದ.ಕ.

ಕೃಷ್ಣಶಾಸ್ತ್ರೀ ಎ. ಆರ್., (2000), ವಚನ ಭಾರತ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

ಜಾನಕೈ ತಿಮ್ಮಪ್ಪ ಹೆಗಡೆ, (2021), ಮಾರುತಿ ಪ್ರತಾಪ, ಯಕ್ಷವಾಹಿನಿ ಅಂತರ್ಜಾಲ ಆವೃತ್ತಿ.

ರಂಗನಾಥ ಎಚ್.ಕೆ, (2014), ಕರ್ನಾಟಕ ರಂಗಭೂಮಿ, ಹೇಮಂತ ಪ್ರಕಾಶನ, ಬೆಂಗಳೂರು.

Most read articles by the same author(s)