ಮಾದಿಗ ಜನಾಂಗದ ಮಾದಾರ ದೂಳಯ್ಯನ ಸಾಮಾಜಿಕ ಕಾಳಜಿ
Main Article Content
Abstract
12 ಶತಮಾನದಲ್ಲಿ ಮಾದಾರ ಚೆನ್ನಯ್ಯ ಚೋಳನ ಆಸ್ಥಾನದಲ್ಲಿ ಕುದುರೆಗಳಿಗೆ ಪ್ರತಿ ನಿತ್ಯ ಹುಲ್ಲನ್ನು ತರುವ ಕಾಯಕವನ್ನು ಮಾಡುತ್ತಿದ್ದನು. ಚೆನ್ನಯ್ಯನು ಶ್ರೇಷ್ಠವಾದ ಗುಪ್ತ ರೀತಿಯ ಶಿವಭಕ್ತಿ ಹೊಂದಿದ್ದು, ಇವನ ಭಕ್ತಿಯನ್ನು ಮೆಚ್ಚಿ, ಕೈಲಾಸದಲ್ಲಿನ ಶಿವನು ಚೆನ್ನಯ್ಯನ ಮನೆಗೆ ಬಂದು ಇಬ್ಬರು ಒಟ್ಟಿಗೆ ಕೂತುಕೊಂಡು ಶಿವ ಚೆನ್ನಯ್ಯನ ಮನೆಯ ಅಂಬಲಿ ರುಚಿಗೆ ಮಾರು ಹೋಗುತ್ತಾನೆ. ಇದಕ್ಕಿಂತ ಸವಿಯಾದ ರುಚಿ ಮತ್ತೆಲ್ಲೂ ಸೇವಿಸಿಲ್ಲವಲ್ಲ ಎಂದು ಕೊಳ್ಳುತ್ತಾನೆ. ಇಲ್ಲಿ ಶಿವನನ್ನೆ ಚೆನ್ನಯ್ಯನು ತನ್ನ ಮನೆ ಬಾಗಿಲಿಗೆ ಕರೆಸಿಕೊಂಡನು. 12ನೇ ಶತಮಾನದಲ್ಲಿ ಮಾದಾರ ದೂಳಯ್ಯನು ಒಬ್ಬ ಬ್ರಾಹ್ಮಣನಿಗೆ ಇದ್ದ ಕುಷ್ಠರೋಗವನ್ನ ಅವನ ಮನೆಯ ಬಚ್ಚಲು ನೀರು ಗುಣಪಡಿಸುತ್ತದೆ. ಅದೇ ರೀತಿ ಈ ವಿಷಯ ತಿಳಿದ ಇನ್ನಿತರೆ ಬ್ರಾಹ್ಮಣ ಕುಟುಂಬದವರು ಮಾದಾರ ದೂಳಯ್ಯನ ಬಚ್ಚಲು ನೀರನ್ನು ಮೈಮೇಲೆ ಹಾಕಿಸಿಕೊಂಡು ಅವರಿಗಿದ್ದ ಇತರೆ ಚರ್ಮಸಂಬಂಧ ರೋಗಗಳನ್ನು ದೂರ ಮಾಡಿಕೊಳ್ಳುತ್ತಾರೆ. ಆ ಮೂಲಕ ಮಾದಿಗ ಜನಾಂಗದ ಮಾದಾರ ದೂಳಯ್ಯನು ಅಂದಿನ ದಿನಗಳಲ್ಲಿ ಬರುತ್ತಿದ್ದ ರೋಗಗಳಿಗೆ ಮದ್ದು ನೀಡಿದ್ದಾನೆ. ಆ ಮೂಲಕ ಮುಂದಿನ ವಚನಕಾರರಿಗೆ ದಾರಿದೀಪವಾಗುತ್ತಾನೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶಿವಾನಂದ ಕೆಳಗಿನ ಮನಿ (2009). ಮಾದಿಗ ಲಿಂಗಾಯತರು. ಶಿರಡಿ ಸಾಯಿ ಎಂಟರ್ ಪ್ರೈಸಸ್, ಬೆಂಗಳೂರು. ಪು.ಸಂ. 233
ನಾರಾಯಣ ಮಳವಳ್ಳಿ ಮ. ಸಿ. (2022). ಆದಿಜಾಂಬವ ವಂಶ (ಕುಲ). ಮಂಜು ಪ್ರಕಾಶನ. ಮಳವಳ್ಳಿ, ಪು.ಸಂ. 84
ರಾಜ್ ಕುಮಾರ್ ಕೆ. ಆರ್. ಜೆ. (2012). ಸ್ವಾತಂತ್ರೋತ್ತರ ಕರ್ನಾಟಕದಲ್ಲಿ ಮಾದಿಗರು. ಜೈ ಭೀಮ್ ಪ್ರಕಾಶನ. ಕಸ್ತೂರಿ ರಂಗಪ್ಪನ ಹಳ್ಳಿ. ಪು.ಸಂ. 55
ಶಿವಾನಂದ ಕೆಳಗಿನ ಮನಿ (2009). ಮಾದಿಗ ಲಿಂಗಾಯತರು. ಶಿರಡಿ ಸಾಯಿ ಎಂಟರ್ ಪ್ರೈಸಸ್, ಬೆಂಗಳೂರು. ಪು.ಸಂ. 234
ಶಿವಾನಂದ ಕೆಳಗಿನ ಮನಿ (2009). ಮಾದಿಗ ಲಿಂಗಾಯತರು. ಶಿರಡಿ ಸಾಯಿ ಎಂಟರ್ ಪ್ರೈಸಸ್, ಬೆಂಗಳೂರು, ಪು.ಸಂ. 235
ಶಿವಾನಂದ ಕೆಳಗಿನ ಮನಿ (2009). ಮಾದಿಗ ಲಿಂಗಾಯತರು. ಶಿರಡಿ ಸಾಯಿ ಎಂಟರ್ ಪ್ರೈಸಸ್, ಬೆಂಗಳೂರು. ಪು.ಸಂ. 235
ಮೈಲಹಳ್ಳಿ ರೇವಣ್ಣ (ಸಂ) (2012), ದಲಿತ ಸಂತರು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಶ್ರೀನಿವಾಸಮೂರ್ತಿ ಎಂ. ಆರ್. (2013). ವಚನ ಧರ್ಮಸಾರ. ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರು.
ನಾರಾಯಣ ಮಳವಳ್ಳಿ ಮ. ಸಿ. (2022). ಆದಿಜಾಂಬವ ವಂಶ (ಕುಲ). ಮಂಜು ಪ್ರಕಾಶನ. ಮಳವಳ್ಳಿ.
ಕಲಬುರ್ಗಿ ಎಂ. ಎಂ. (1978), ಶಾಸನಗಳಲ್ಲಿ ಶಿವಶರಣರು. ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ತೋಂಟದಾರ್ಯ ಮಠ. ಗದಗ.
ಕೋತಿನ ಎಸ್. ಎಸ್. (ಸಂ) (1986), ಮಾದರ ದೂಳಯ್ಯನ ವಚನಗಳು. ಶ್ರೀ ಜಗದ್ಗುರು ಗಂಗಾಧರ ಧರ್ಮ ಪ್ರಚಾರಕ ಮಂಡಳಿ, ಮೂರು ಸಾವಿರ ಮಠ, ಹುಬ್ಬಳ್ಳಿ.