ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಿದ್ರಾನಗರಿ’ ನಾಟಕದಲ್ಲಿ ಜಾನಪದೀಯ ಮರುರೂಪೀಕರಣ ಮತ್ತು ಸಮಕಾಲೀನ ಪ್ರಸ್ತುತತೆ

Main Article Content

ಡಾ. ನಾಗೇಶ್ ಎನ್.

Abstract

ಮಕ್ಕಳ ರಂಗಭೂಮಿಯು ಕಲ್ಪನಾಲೋಕದ ರಂಜನೆಯ ಜೊತೆಗೆ ಮಗುವಿನ ಅರಿವನ್ನು ವಿಸ್ತರಿಸುವ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ರೂಪಿಸುವ ಪ್ರಭಾವಶಾಲಿ ಮಾಧ್ಯಮವಾಗಿದೆ. ಕನ್ನಡದ ಪ್ರಮುಖ ಲೇಖಕಿ ಮತ್ತು ಶಿಕ್ಷಣ ತಜ್ಞೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಿದ್ರಾನಗರಿ’ ಮಕ್ಕಳ ನಾಟಕವು ಜಾಗತಿಕವಾಗಿ ಪ್ರಸಿದ್ಧವಾದ ‘ಸ್ಲೀಪಿಂಗ್ ಬ್ಯೂಟಿ’ (Sleeping Beauty) ಕಥಾವಸ್ತುವನ್ನು ಆಧರಿಸಿದ್ದರೂ, ಅದನ್ನು ಸ್ಥಳೀಯ ಜಾನಪದ ಪರಿಸರ ಮತ್ತು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಪುನರ್ ನಿರ್ಮಿಸಿದ ಬಗೆಯನ್ನು ಈ ಲೇಖನವು ವಿಶ್ಲೇಷಿಸುತ್ತದೆ. ‘ನಾಟಕದೊಳಗೆ ನಾಟಕ’ ರಂಗತಂತ್ರದ ಮೂಲಕ ನೈಜ ಮಕ್ಕಳ ಆಟ ತುಂಟಾಟಗಳಿಂದ ಆರಂಭವಾಗುವ ಈ ಕೃತಿಯು, ಕರಾವಳಿ ಕರ್ನಾಟಕದ ಭಾಷಿಕ ಸೊಗಡು, ಕಿನ್ನರಿಯರ ಪರಿಕಲ್ಪನೆ ಮತ್ತು ಯಕ್ಷಗಾನದ ರಂಗತಂತ್ರಗಳನ್ನು ಮೇಳೈಸಿಕೊಂಡಿರುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಜೊತೆಗೆ, ಅರಸೊತ್ತಿಗೆಯ ಅವೈಜ್ಞಾನಿಕ ಆಡಳಿತ, ನೇಕಾರರ ಬವಣೆ, ಅಧಿಕಾರಶಾಹಿಯ ಜಡತ್ವ ಹಾಗೂ ಇಂದಿನ ರಾಜಕೀಯ ಪಕ್ಷಾಂತರಗಳಂತಹ ಗಂಭೀರ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ಹಾಸ್ಯ ವಿಡಂಬನೆಗಳ ಮೂಲಕ ಕಟ್ಟಿಕೊಟ್ಟಿರುವ ಪರಿ ಗಮನಾರ್ಹ. ಅಂತಿಮವಾಗಿ, ಈ ನಾಟಕವು ಕೇವಲ ಒಂದು ಕಾಲ್ಪನಿಕ ಕಥೆಯಾಗಿ ಉಳಿಯದೆ, ಸಮಾಜದ ಜಡತೆಯನ್ನು ಸೂಚಿಸುವ ‘ನಿದ್ರೆ’ಯಿಂದ ಸಾಮಾಜಿಕ-ತಾತ್ವಿಕ ಅರಿವಿನ ‘ಎಚ್ಚರ’ದೆಡೆಗೆ ಕೊಂಡೊಯ್ಯುವ ಮಹತ್ವದ ರೂಪಕವಾಗಿ ನಿಲ್ಲುತ್ತದೆ ಎಂಬುದನ್ನು ಈ ಲೇಖನವು ಸ್ಥಾಪಿಸುತ್ತದೆ.

Article Details

Section

Research Articles

Author Biography

ಡಾ. ನಾಗೇಶ್ ಎನ್.

ಅಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

How to Cite

ನಾಗೇಶ್ ಎನ್. (2026). ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಿದ್ರಾನಗರಿ’ ನಾಟಕದಲ್ಲಿ ಜಾನಪದೀಯ ಮರುರೂಪೀಕರಣ ಮತ್ತು ಸಮಕಾಲೀನ ಪ್ರಸ್ತುತತೆ . ಅಕ್ಷರಸೂರ್ಯ (AKSHARASURYA), 18(04), 46 to 51. https://aksharasurya.com/index.php/latest/article/view/2484

References

ಸುಬ್ಬಣ್ಣ ಕೆ.ವಿ., (2000), ರಂಗ ಚಿಂತನೆ, ಹೆಗ್ಗೋಡು: ನೀನಾಸಂ ಪ್ರಕಾಶನ.

ಪ್ರಸನ್ನ, (2005), ಭಾರತೀಯ ರಂಗಭೂಮಿ: ಇತಿಹಾಸ ಮತ್ತು ಸಿದ್ಧಾಂತ, ಬೆಂಗಳೂರು: ಅಭಿನವ ಪ್ರಕಾಶನ.

ವಿಜಯಾ, (2012), ಕನ್ನಡ ರಂಗಭೂಮಿಯಲ್ಲಿ ಸ್ತ್ರೀಸಂವೇದನೆ, ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ.

Most read articles by the same author(s)