ರಂಗಕಲಾವಿದೆಯರ ಬದುಕಿನಲ್ಲಿ ಕಾಡಿದ ಅಭದ್ರತೆ
Main Article Content
Abstract
ರಂಗಭೂಮಿಯ ನಟ-ನಟಿಯರಿಗೆ ಬದುಕಿನಲ್ಲಿ ಕಾಡಿದ ಅಭದ್ರತೆಗಳು ಹಲವು. ವೃತ್ತಿರಂಗಭೂಮಿ ಕಲಾವಿದೆಯರಿಗೆ ನಿಗದಿತ ನಿಶ್ಚಿತ ಆದಾಯವಿಲ್ಲದ್ದರಿಂದ ಸದಾ ಹೊಯ್ದಾಟದ ಬದುಕು ಅವರದ್ದಾಗಿತ್ತು. ವೃತ್ತಿರಂಗಭೂಮಿಯ ನಟಿಯರಿಗೆ ತಮ್ಮ ಕುಟುಂಬದ ಮಕ್ಕಳ ಶಿಕ್ಷಣದ್ದೇ ಒಂದು ದೊಡ್ಡ ಚಿಂತೆಯಾಗಿತ್ತು. ಪ್ರತಿಯೊಬ್ಬ ರಂಗಕಲಾವಿದೆಯೂ ತಾನು ಚೆನ್ನಾಗಿ ದುಡಿಯುವಾಗ ತಮ್ಮ ಮುಂದಿನ ವೃದ್ಧಾಪ್ಯದ ಬದುಕಿಗೆ ಏನನ್ನೂ ಕೂಡಿಟ್ಟುಕೊಂಡಿಲ್ಲ. ರಂಗಕಲಾವಿದರನ್ನು ದೇಹದಲ್ಲಿ ಶಕ್ತಿ, ಕಸುವು ಇರುವವರೆಗೂ, ಯೌವ್ವನ ಇರುವವರೆಗೂ, ಕಂಪನಿಗಳು ದುಡಿಸಿಕೊಳ್ಳುತ್ತವೆ. ಯಾವ ಕಂಪನಿಗಳಿಗಾಗಿ ಆ ಕಲಾವಿದರು ದುಡಿದಿದ್ದರೋ ವೃದ್ಧಾಪ್ಯದಲ್ಲಿ ಆ ಕಂಪನಿಗಳು ಅವರತ್ತ ತಿರುಗಿಯೂ ನೋಡಿಲ್ಲ. ಇವರಿಗೆ ಸರ್ಕಾರದಿಂದ ಪುನರ್ವಸತಿ ಕಲ್ಪಿಸಬೇಕಾದ ಅಗತ್ಯವಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಲಕ್ಷ್ಮಣ ಕೌಂಟೆ, (2015), ಕರ್ನಾಟಕ ವೃತ್ತಿ ರಂಗಭೂಮಿ, ಬೀದರ: ಭುವನೇಶ್ವರ ಪ್ರಕಾಶನ.
ವೆಂಕಟಗಿರಿ ದಳವಾಯಿ, (2003), ಕನ್ನಡ ರಂಗಭೂಮಿ ಮತ್ತು ಮಹಿಳೆ, ಬೆಂಗಳೂರು: ಕನಕ ಸಾಹಿತ್ಯ ಪ್ರತಿಷ್ಠಾನ.