ರಂಗಕಲಾವಿದೆಯರಿಗೆ ಪುನರ್ವಸತಿಯ ಅಗತ್ಯ
Main Article Content
Abstract
ಮಾನವನ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ರಂಗಕಲೆ ಬಹಳ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಅದು ಪರಿಣಾಮಕಾರಿಯಾದ ಮಾಧ್ಯಮವೂ ಹೌದು. ಎಲ್ಲ ಆಯಾಮಗಳಲ್ಲೂ ಗ್ರಹಿಸಿದಾಗ ರಂಗಕಲೆ ಸಾಂಸ್ಕೃತಿಕವಾದ ಮಹತ್ವವನ್ನು ಪಡೆದುಕೊಂಡಿದೆ. ಆದರೆ ತಲೆಮಾರು ಕಳೆದಂತೆ ಕಾಲಚಕ್ರ ಉರುಳಿದಂತೆ ಆದ ಬದಲಾವಣೆಗಳಿಂದ ಈ ರಂಗಭೂಮಿಯಲ್ಲಿ ದುಡಿಯುವ ಕಲಾವಿದೆಯರಿಗೆ ಸಿಗಬೇಕಾದ ಸೌಲಭ್ಯಗಳು, ಆ ಕಲಾವಿದರಿಂದ ಬಹುದೂರ ಸರಿದಿವೆ. ಯಾಕೆ ನಮ್ಮ ಸಮಾಜದಲ್ಲಿ ಈ ರೀತಿಯಾದ ವೈಪರೀತ್ಯಗಳು ನಡೆಯುತ್ತದೆ ಎಂಬುದನ್ನು ಅರಿಯಲು ನಾನು ಪ್ರಯತ್ನಿಸುತ್ತಿದ್ದೇನೆ. ಇಲ್ಲಿ ಪ್ರಧಾನವಾಗಿ ಗಮನಿಸುವುದು ರಂಗಕಲಾವಿದೆಯರಿಗೆ ಸಿಗಬೇಕಾದ ಪುನರ್ವಸತಿಗಳ ಕುರಿತು.
ಸರ್ಕಾರ ವೃತ್ತಿ ಕಂಪನಿಗಳ ಉಳಿವಿಗೆ ಯಾವುದೇ ನಿಶ್ಚಿತವಾದ ಯೋಜನೆಯನ್ನು ರೂಪಿಸಿಲ್ಲವಾದ್ದರಿಂದ ಆ ಕಂಪನಿಗಳ ಕಲಾವಿದೆಯರೂ ತಮ್ಮ ವೃದ್ಧಾಪ್ಯದಲ್ಲಿ ದಾರಿ ಕಾಣದೆ ಕಂಗಾಲಾಗಿದ್ದಾರೆ. ರಂಗಕಲಾವಿದೆಯರು ವೃದ್ಧಾಪ್ಯದಲ್ಲಿ ಬದುಕಿನ ನಿಶ್ಚಿತ ದಾರಿ ಕಾಣದೆ ಕಂಗೆಟ್ಟಿದ್ದಾರೆ. ಸರ್ಕಾರ ರಂಗಕಲಾವಿದೆಯರ ಉಳಿವಿಗೆ ನಿಶ್ಚಿತವಾದ ಯೋಜನೆಗಳನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಹಾಕಿಕೊಂಡು ಸರಿಯಾಗಿ ಕಾರ್ಯಗತಗೊಳಿಸಿ ರಂಗಕಲಾವಿದೆಯರ ವೃದ್ಧಾಪ್ಯದ ಸಮಸ್ಯೆಗಳಿಗೆ ಪುನರ್ವಸತಿ ನೀಡಬೇಕಿದೆ. ಚಿಂದೋಡಿ ಲೀಲಾರಂತಹ ಕಂಪನಿ ಕಲಾವಿದೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಕೆಲವು ರಂಗಕಲಾವಿದರ ಮಾಹಿತಿ ಕಲೆಹಾಕಿ ರಂಗಕಲಾವಿದರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆರವನ್ನು ಒದಗಿಸಿದ್ದರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸೀತಾರಾಮಯ್ಯ ಹ.ವೆಂ., ಗುಡಿಹಳ್ಳಿ ನಾಗರಾಜ (ಪರಿಷ್ಕರಣೆ), (1975), ಅಭಿನಯ ವಿಶಾರದೆ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಪು.ಸಂ. 70
ಗಿರಡ್ಡಿ ಗೋವಿಂದರಾಜ ಮತ್ತು ಚಂದ್ರಕಾಂತ ಕುಸನೂರ (ಸಂಪಾದನೆ), (1980), ಹವ್ಯಾಸಿ ರಂಗಭೂಮಿಯ ಸಮಸ್ಯೆಗಳು, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಪು.ಸಂ. 21
ಅದೇ, ಪು.ಸಂ. 37
ಗುಡಿಹಳ್ಳಿ ನಾಗರಾಜ, (1999), ಚಿಂದೋಡಿ ಲೀಲಾ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಪು.ಸಂ. 45
ಭಾಗ್ಯಲಕ್ಷ್ಮಿ ಪದಕಿ, (2009), ಜೀವನವೆಂಬುದು ನಾಟಕವಲ್ಲ... ಇದೇ ಬೇರೆ ಆಟ!, ಸಿ.ವಿ.ಜಿ. ಪಬ್ಲಿಕೇಶನ್, ಬೆಂಗಳೂರು, ಪು.ಸಂ. 126
ಜೋಗಿ, (2021), ಗಿರಿಜಾ ಪರಸಂಗ, ಅಂಕಿತ ಪುಸ್ತಕ, ಬೆಂಗಳೂರು, 296
ಮುರ್ತುಜಾ ಬ. ಒಂಟಿ, (2016), ಪ್ರಮೀಳಾ ಗುಡೂರು, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಪು.ಸಂ.85