ಉದಯ ಸಾರಂಗರವರ ‘ದಲಿಯನ ಡೋಲು’ ರಂಗ ನಾಟಕ ಸಂಕಲನದಲ್ಲಿ ಪರಿಸರ ಮತ್ತು ಸಾಮಾಜಿಕ ಜಾಗೃತಿ

Main Article Content

ಸುಧೀಶ್

Abstract

ಕರಾವಳಿಯ ಆಧುನಿಕ ದಲಿತ ಸೃಜನಶೀಲ ಸಾಹಿತ್ಯದ ಬರಹಗಾರರಲ್ಲಿ ಉದಯ ಸಾರಂಗರೂ ಒಬ್ಬರಾಗಿದ್ದಾರೆ. ಈ ಪ್ರಬಂಧದಲ್ಲಿ ಅವರ ‘ದಲಿಯನ ಡೋಲು’ ಹಾಗೂ ‘ಬೆಟ್ಟದ ಗಿಳಿ’ ರಂಗ ನಾಟಕಗಳ ವಿಶ್ಲೇಷಣೆಯನ್ನು ಮಾಡಲಾಗಿದೆ. ಕರಾವಳಿಯ ದಲಿತ ಸಾಹಿತಿಗಳು ದಲಿತ ಸಂವೇದನೆಯನ್ನು ತಮ್ಮ ಸಾಹಿತ್ಯದಲ್ಲಿ ಸಾದರಪಡಿಸುವುದು ಒಂದು ನೆಲೆಯಾದರೆ, ಜೊತೆಜೊತೆಗೆ ಪರಿಸರದ ಕಾಳಜಿ ಮತ್ತು ಜಾಗೃತಿ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ನಿರ್ಮಾಣ ಮಾಡುವ ಮೂಲಕ ಜನಪರ ಹಿತವನ್ನು ಬಯಸುವುದು ಬಹು ಮುಖ್ಯ ಅಂಶ ಎನ್ನುವುದನ್ನು ಇಲ್ಲಿ ಮನಗಾಣಿಸಿದ್ದಾರೆ.
ಉದಯ ಸಾರಂಗರ ಈ ರಂಗನಾಟಕ ಕೃತಿಯು ರಂಗದಲ್ಲಿ ಪ್ರಯೋಗಗೊಂಡು ಅತೀ ಯಶಸ್ಸನ್ನು ಪಡೆದಿರುವಂತಹ ಹಿನ್ನೆಲೆಯಲ್ಲಿ ಅದರ ತಿರುಳನ್ನು ಇಲ್ಲಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ‘ಕನ್ನಡ ಸಾಹಿತ್ಯ ಮತ್ತು ರಂಗಭೂಮಿ’ ಎಂದಾಗ ಮಕ್ಕಳಾದಿಯಿಂದ ಹಿಡಿದು ವಯೋವೃದ್ಧರವರೆಗೂ ರಂಗ ನಾಟಕಗಳು ಎಷ್ಟು ಪರಿಣಾಮಕಾರಿಯಾಗಿ ಸಾಮಾಜಿಕ ತಲ್ಲಣಗಳನ್ನು, ಪರಿಸರ ಜಾಗೃತಿಯನ್ನು, ದೇಶ ಪ್ರೇಮವನ್ನು ಸೆರೆ ಹಿಡಿಯಬಲ್ಲದು ಎಂಬ ವಿಚಾರವನ್ನು ಇಲ್ಲಿ ಗಮನಿಸಬಹುದಾಗಿದೆ. ‘ದಲಿಯನ ಡೋಲು’ ನಾಟಕದ ಮೂಲಕ ಆಧುನಿಕತೆ, ಪಾಶ್ಚಾತ್ಯ ವಸ್ತುಗಳ ಮೋಹ, ಜಾಗತೀಕರಣದ ನಂತರ ಎದುರಾದ ಸಾಮಾಜಿಕ ಸವಾಲುಗಳು, ದಿಕ್ಕೆಟ್ಟಿರುವ ಆಹಾರ ಸಂಸ್ಕೃತಿಯ ಹವ್ಯಾಸಗಳನ್ನು ನಾಟಕದ ಚೌಕಟ್ಟಿನಲ್ಲಿ, ರಂಗತಂತ್ರದ ಮೂಲಕ ಸೆರೆ ಹಿಡಿಯಲಾಗಿದೆ. ‘ಬೆಟ್ಟದ ಗಿಳಿ’ ನಾಟಕವು ಪ್ರಕೃತಿ ಇದ್ದರೆ ನಾವು, ಪ್ರಕೃತಿಯ ಧ್ವಂಸ ನಮ್ಮ ನಿರ್ನಾಮದ ಸೂಚನೆ ಎಂಬ ಅತೀ ಜರೂರಿನ ಪರಿಸರ ಪ್ರೇಮದ ಜಾಗೃತಿಯನ್ನು ಅತೀ ವಿನೂತನವಾಗಿ ನೀಡುತ್ತದೆ. ಜನಪದ ರಂಗಭೂಮಿಯ ಗೀತೆಗಳ ಲಯಬದ್ಧ ಸಾಹಿತ್ಯದ ಛಾಯೆ, ನಾಟಕೀಯ ಸಂಭಾಷಣೆ, ಅಭಿನಯಕ್ಕೆ ಪೂರಕವಾದ ಕಥಾಸಾರ, ಪ್ರಯೋಗಶೀಲ ರಂಗ ಸಾಹಿತ್ಯ ಸಲಕರಣೆಯಾಗಿ ಈ ವಿಶಿಷ್ಟ ಕೃತಿಯು ಕಂಡುಬರುತ್ತದೆ.

Article Details

Section

Research Articles

Author Biography

ಸುಧೀಶ್

ಸಂಶೋಧನಾರ್ಥಿ, ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

How to Cite

ಸುಧೀಶ್. (2026). ಉದಯ ಸಾರಂಗರವರ ‘ದಲಿಯನ ಡೋಲು’ ರಂಗ ನಾಟಕ ಸಂಕಲನದಲ್ಲಿ ಪರಿಸರ ಮತ್ತು ಸಾಮಾಜಿಕ ಜಾಗೃತಿ. ಅಕ್ಷರಸೂರ್ಯ (AKSHARASURYA), 17(06), 105 to 110. https://aksharasurya.com/index.php/latest/article/view/2403

References

ಉದಯ ಸಾರಂಗ, (2020), ಕನ್ನಡ ನಾಟಕ - ದಲಿಯನ ಡೋಲು, ಬೆಂಗಳೂರು: ಸುಮುಖ ಪಬ್ಲಿಷರ್ಸ್ ಅಂಡ್ ಪ್ರಿಂಟರ್ ಪ್ರಕಾಶನ.

ಶ್ರೀನಿವಾಸಮೂರ್ತಿ ಕಾ.ವೆಂ., (2005), ಕನ್ನಡ ರಂಗಭೂಮಿ, ಬೆಂಗಳೂರು: ಸುಮುಖ ಪ್ರಕಾಶನ.

Most read articles by the same author(s)