ಕರಾವಳಿ ಪರಿಸರದ ಆಧುನಿಕ ಸಾಹಿತ್ಯದಲ್ಲಿ ದಲಿತರ ಬದುಕಿನ ತಲ್ಲಣಗಳು

Main Article Content

ಸುಧೀಶ್

Abstract

ದಲಿತ ಸಾಹಿತ್ಯದ ಹಿನ್ನೆಲೆಯೊಂದಿಗೆ, ಕರಾವಳಿ ಪರಿಸರದ ಆಧುನಿಕ ದಲಿತ ಸಾಹಿತ್ಯದ ವಿಶೇಷತೆಗಳನ್ನು ತಿಳಿಸುವುದರೊಂದಿಗೆ, ದಲಿತರ ಬದುಕಿನ ತಲ್ಲಣಗಳನ್ನು ವಿವರಿಸುವ ಉದ್ದೇಶವು ಈ ಪ್ರಬಂಧಕ್ಕಿದೆ. ಕರಾವಳಿ ಲೇಖಕರ ಶಿಕ್ಷಣದ ಹಿನ್ನೆಲೆ, ಭಾಷಾ ಸಂದಿಗ್ಧತೆಗಳು, ಜೊತೆಗೆ ಸಾಂಸ್ಕೃತಿಕ ಭಿನ್ನತೆಗಳ ಕಿರು ಚರ್ಚೆಯನ್ನು ನಡೆಸಲಾಗಿದೆ. ಪ್ರಸಿದ್ಧ ಗದ್ಯ, ಪದ್ಯ ಕಥೆಗಾರರು, ಕವಿಗಳ ಮೂಲಕ ದಲಿತ ಲೇಖಕರ ಸಾಹಿತ್ಯದ ಪರಿಚಯವನ್ನು ಮಾಡಲಾಗಿದೆ. ಇಲ್ಲಿ ಪ್ರಧಾನವಾಗಿ ಜನಾರ್ಧನ ಎರ್ಪಕಟ್ಟೆಯವರ ʼಎರ್ಪಕಟ್ಟೆ ಕಥೆಗಳುʼ, ಸುರೇಶ್ ಮರಿಣಾಪುರರ ʼಚಿಂಬುರಿʼ ಕಾದಂಬರಿ, ರಾಧಾಕೃಷ್ಣ ಉಳಿಯತ್ತಡ್ಕರವರ ಕವಿತೆಗಳು, ಸುರೇಶ್‌ರವರ ಕವಿತೆಗಳು, ಪದ್ಮಾವತಿ ಏದಾರ್ ಮೊದಲಾದವರ ಕವನ ಸಂಕಲನದ ವಸ್ತುವಿಷಯವನ್ನು ಚರ್ಚೆಮಾಡಲಾಗಿದೆ. ಮುಖ್ಯವಾಗಿ ಪ್ರಕೃತ ಕಾಲದ ಕರಾವಳಿ ದಲಿತ ಯುವ ಬರಹಗಾರರ ಬದುಕಿನ ತಲ್ಲಣಗಳನ್ನು ಅವರ ಸಾಹಿತ್ಯದ ವಸ್ತುವಿಷಯದ ದೃಷ್ಟಿಯಿಂದ ಅಭ್ಯಸಿಸಲಾಗಿದೆ. ಬಹಳ ಮುಖ್ಯವಾಗಿ ಕರಾವಳಿಯ ದಲಿತ ಸಾಹಿತಿಗಳ ಬರಹಗಳ ವೈಶಿಷ್ಟ್ಯತೆಯನ್ನು, ಭಾಷಾ ಸೊಗಡನ್ನು ಕುರಿತು ಅವರ ಬರಹಗಳ ಉದಾಹರಣೆಯೊಂದಿಗೆ ವಿಶ್ಲೇಷಣೆ ಮಾಡಲಾಗಿದೆ.

Article Details

Section

Research Articles

Author Biography

ಸುಧೀಶ್

ಸಂಶೋಧನಾರ್ಥಿ, ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

How to Cite

ಸುಧೀಶ್. (2025). ಕರಾವಳಿ ಪರಿಸರದ ಆಧುನಿಕ ಸಾಹಿತ್ಯದಲ್ಲಿ ದಲಿತರ ಬದುಕಿನ ತಲ್ಲಣಗಳು. ಅಕ್ಷರಸೂರ್ಯ (AKSHARASURYA), 8(01), 143 to 50. https://aksharasurya.com/index.php/latest/article/view/1370

References

ಜನಾರ್ಧನ ಎರ್ಪಕಟ್ಟೆ, (1999), ದಲಿತ ಚಿಂತನೆ, ಸ್ಮೃತಿ ಪ್ರಕಾಶನ, ಅಡ್ಯನಡ್ಕ, ದಕ್ಷಿಣ ಕನ್ನಡ.

ಜನಾರ್ಧನ ಎರ್ಪಕಟ್ಟೆ, (2012), ಎರ್ಪಕಟ್ಟೆ ಕಥೆಗಳು, ಕೌಸ್ತುಭ ಪ್ರಕಾಶನ, ಬೆಂಗಳೂರು.

ಪದ್ಮಾವತಿ ಏದಾರ್, (2018), ನೆಲದ ಬಿಕ್ಕಳಿಕೆ, ಅಂಬೇಡ್ಕರ್ ವಿಚಾರ ವೇದಿಕೆ (ರಿ.) ಬದಿಯಡ್ಕ, ಕಾಸರಗೋಡು.

ರಮೇಶ್ ಮಂಜೇಶ್ವರ, ಸತೀಶ್ ಚಿತ್ರಾಪು (ಸಂ.), (2023), ಅವಿಭಜಿತ ದಕ್ಷಿಣ ಕನ್ನಡದ ದಲಿತ ಚಿಂತನೆ, ಆಕೃತಿ ಆಶಯ ಪಬ್ಲಿಕೇಶನ್ಸ್, ಮಂಗಳೂರು.

ರಾಧಾಕೃಷ್ಣ ಕೆ. ಉಳಿಯತ್ತಡ್ಕ, (2014), ಅರ್ಧಸತ್ಯದ ಬೆಳಕು, ಅಂಬೇಡ್ಕರ್ ವಿಚಾರ ವೇದಿಕೆ, ಬದಿಯಡ್ಕ, ಕಾಸರಗೋಡು.

ಶ್ರೀನಿವಾಸ ಗಿಳಿಯಾರು (ಸಂ.), (2022), ಕಲ್ಲಾಗದೆ ಕಾದವರು ಮಸುಮ ಸಾಹಿತ್ಯ ಸಂಕಲನ, ಆಕೃತಿ ಆಶಯ ಪಬ್ಲಿಕೇಷನ್, ಮಂಗಳೂರು.

ಶ್ರೀನಿವಾಸ ಗಿಳಿಯಾರು (ಸಂ.), (2022), ಹೆಜ್ಜೆ ಸದ್ದು ನಿಲ್ಲಲಿಲ್ಲ, ಆಕೃತಿ ಆಶಯ ಪಬ್ಲಿಕೇಷನ್ಸ್, ಮಂಗಳೂರು.

ಸುಂದರ ಬಾರಡ್ಕ, (1996), ಕಪ್ಪುಹಾದಿಯ ಕೆಂಪು ಹೆಜ್ಜೆಗಳು ಕವನಸಂಕಲನ, ಕಾಸರಗೋಡು ದರ್ಪಣ ಸಾಹಿತ್ಯ ವೇದಿಕೆ, ಕಾಸರಗೋಡು.

ಸುಂದರ ಬಾರಡ್ಕ (ಸಂ.), (2012), ಒಂದು ಹೆಜ್ಜೆ ಜಾಗ ಕೊಡಿ, ಡಿ.ಎಸ್. ಶೇಖರ್ ಕವಿತೆಗಳು, ಅಂಬೇಡ್ಕರ್ ವಿಚಾರ ವೇದಿಕೆ (ರಿ.) ಬದಿಯಡ್ಕ, ಕಾಸರಗೋಡು.