ರವೀಂದ್ರನಾಥ ಠಾಕೂರರ ನಾಟಕಗಳಲ್ಲಿ ಅಸ್ಪೃಶ್ಯತೆಯನ್ನು ದಾಟುವ ದಾರಿ

Main Article Content

ಡಾ. ಶಮಂತಕುಮಾರ ಕೆ.ಎಸ್.

Abstract

ಠಾಕೂರರ ನಾಟಕಗಳಲ್ಲಿ ಜಾತಿಯ ಪೆಡಂಭೂತ ಮನುಷ್ಯನ ಬೆಳವಣಿಗೆಯನ್ನು ಕುಂಠಿಸುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ. ಅಸ್ಪೃಶ್ಯತೆ ಮಾನವಸಮಾಜಕ್ಕೆ ಅಂಟಿದ ದೊಡ್ಡ ರೋಗವೆಂದು, ಅದನ್ನು ಹೋಗಲಾಡಿಸದೆ ವಿಶ್ವಮಾನವರಾಗಲು ಸಾಧ್ಯವಿಲ್ಲವೆಂದು ಅವರು ನಂಬಿದ್ದರು. ಅವರ ಸಾಹಿತ್ಯದಲ್ಲಿ ಅದರಲ್ಲೂ ನಾಟಕಗಳಲ್ಲಿ ಈ ಅಂಶ ಪ್ರಬಲವಾಗಿರುವುದನ್ನು ಗುರುತಿಸಬಹುದು. ಅಸ್ಪೃಶ್ಯತೆಗಿಂತ ಕ್ರೂರವಾದುದು ಬಣ್ಣದಿಂದ ವ್ಯಕ್ತಿಯನ್ನು ಅಳೆಯುವುದು. ವರ್ಣವ್ಯವಸ್ಥೆ ಮನುಷ್ಯ ನಿರ್ಮಾಣದಲ್ಲಿ ಪ್ರಕೃತಿ ದತ್ತವಾದುದು ಎಂಬುದನ್ನು ಅರಿಯದ ಕೆಲವು ವ್ಯಕ್ತಿಗಳು ಮನುಷ್ಯರನ್ನು ಪ್ರಾಣಿಗಿಂತ ಕೀಳಾಗಿ ನೋಡುತ್ತಿದ್ದರು. ಗಾಂಧೀಜಿಯವರನ್ನು ಮೊದಲು ಕಾಡಿದ್ದೇ ವರ್ಣವ್ಯವಸ್ಥೆಯ ಕ್ರೂರಪದ್ಧತಿಯ ಕರಾಳಮುಖ. ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ದಾರ್ಶನಿಕ ವ್ಯಕ್ತಿತ್ವದ ಠಾಕೂರರು ಗಾಂಧೀಜಿಯವರಂತೆ ಇಂತಹ ವ್ಯವಸ್ಥೆಯನ್ನು ಖಂಡಿಸುವ ನಿಟ್ಟಿನಲ್ಲಿ ತಮ್ಮ ಬರವಣಿಗೆಯನ್ನು ಮುಂದುವರಿಸಿದರು. ಅದರ ಫಲವಾಗಿಯೇ ಕೆಲವು ನಾಟಕಗಳು ಬಂದವು.
ರಾಜಕೀಯ ಸಮಸ್ಯೆ ಭಾರತದ ನಿಜವಾದ ಸಮಸ್ಯೆಯಲ್ಲ ಎಂದು ಅರಿತ ಠಾಕೂರರು ಸಾಮಾಜಿಕವಾದ ಜಾತಿಯ ಸಮಸ್ಯೆಯು ಭಾರತದ ನಿಜವಾದ ಸಮಸ್ಯೆ ಎಂದು ತಿಳಿದು ನಾಟಕಗಳು ಜಾತಿ, ಅಸ್ಪೃಶ್ಯತೆಯಂತಹ ಸಮಸ್ಯೆಗಳನ್ನು ತಮ್ಮ ಬಹುತೇಕ ನಾಟಕದ ವಸ್ತುವನ್ನಾಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಅಸ್ಪೃಶ್ಯತೆ ಜಾತಿವ್ಯವಸ್ಥೆ ಸೃಷ್ಟಿಸಿದ ಮತ್ತೊಂದು ಸಾಮಾಜಿಕ ಸಮಸ್ಯೆ. ಠಾಕೂರರು ನಾಟಕಗಳಲ್ಲಿ ಈ ಸಮಸ್ಯೆಗೆ ಸ್ಪಂದಿಸುವ ರೀತಿ ಬೆರಗು ಮೂಡಿಸುತ್ತದೆ. ವೈದಿಕಧರ್ಮ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಹೊತ್ತಿನಲ್ಲಿ ಠಾಕೂರರು ಅನೇಕ ಪಾತ್ರಗಳ ಮೂಲಕ ಅಸ್ಪೃಶ್ಯತೆ ಆಚರಣೆಯನ್ನು ಧೈರ್ಯವಾಗಿ ಪ್ರಶ್ನಿಸುತ್ತಾರೆ.

Article Details

Section

Research Articles

Author Biography

ಡಾ. ಶಮಂತಕುಮಾರ ಕೆ.ಎಸ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ, ಹಾವೇರಿ.

How to Cite

ಶಮಂತಕುಮಾರ ಕೆ.ಎಸ್. (2026). ರವೀಂದ್ರನಾಥ ಠಾಕೂರರ ನಾಟಕಗಳಲ್ಲಿ ಅಸ್ಪೃಶ್ಯತೆಯನ್ನು ದಾಟುವ ದಾರಿ. ಅಕ್ಷರಸೂರ್ಯ (AKSHARASURYA), 17(06), 49 to 56. https://aksharasurya.com/index.php/latest/article/view/2396

References

ಶಂಕರರಾವ್ ಚ.ನ., (2015), ಭಾರತೀಯ ಸಮಾಜ, ಮಂಗಳೂರು: ಜೈ ಭಾರತ ಪ್ರಕಾಶನ.

ಅಹೋಬಲ ಶಂಕರ, (1966), ನರ್ತಕಿಯ ಪೂಜೆ (ಅನು.), ಮೈಸೂರು: ಕಾವ್ಯ ಪ್ರಕಾಶನ.

ಚೆನ್ನಕೇಶವ ಜಿ., (2022), ರಥಯಾತ್ರೆ (ಅನು.), ಬೆಂಗಳೂರು: ಥಿಯೇಟರ್ ತತ್ಕಾಲ್ ಬುಕ್ಸ್.

ಶ್ರೀನಿವಾಸ ವಿ. ಸುತ್ರಾವೆ, (2013), ವಿಸರ್ಜನಾ (ಅನು.), ಧಾರವಾಡ: ಚಂದ್ರನಾಥ ಪ್ರಕಾಶನ.

ಶ್ರೀನಿವಾಸ ವಿ. ಸುತ್ರಾವೆ, (1973), ಚಾಂಡಲಿಕಾ (ಅನು.), ನವದೆಹಲಿ: ಸಾಹಿತ್ಯ ಅಕಾಡೆಮಿ.

ಪಶುಪತಿ ರೆಡ್ಡಿ, (1963), ಮಾಲಿನಿ (ಅನು.), ಬೆಂಗಳೂರು: ಕರ್ನಾಟಕ ಸಾಹಿತ್ಯ ಸಹಕಾರಿ ಸಂಘ.

Most read articles by the same author(s)