ರವೀಂದ್ರನಾಥ ಠಾಕೂರರ ಪೌರಾಣಿಕ ನಾಟಕಗಳ ಸ್ವರೂಪ ಮತ್ತು ವಿನ್ಯಾಸ (ಠಾಕೂರರ ಕನ್ನಡಾನುವಾದ ನಾಟಕಗಳನ್ನು ಅನುಲಕ್ಷಿಸಿ)
Main Article Content
Abstract
ರವೀಂದ್ರನಾಥ್ ಠಾಕೂರರು 19ನೇ ಶತಮಾನದ ಶ್ರೇಷ್ಠ ನಾಟಕಗಾರರಾಗಿ ಗುರುತಿಸಲ್ಪಟ್ಟವರು. ಪೌರಾಣಿಕ, ಸಾಮಾಜಿಕ, ಐತಿಹಾಸಿಕ, ಸಾಂಕೇತಿಕ ಹೀಗೆ ಅನೇಕ ಬಗೆಯ ನಾಟಕಗಳನ್ನು ವರ್ತಮಾನದ ತುರ್ತಿಗೆ ಪ್ರತಿಸ್ಪಂದಿಸುವಂತೆ ನಾಟಕಗಳನ್ನು ರಚಿಸಿದವರು. ಭಾರತೀಯ ನಾಟಕ ಸಾಹಿತ್ಯದ ಮೂಲಬೇರಾದ ಸಂಸ್ಕೃತದ ನಾಟಕ ಪರಂಪರೆಯಲ್ಲಿಯೂ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನೇ ವಸ್ತುವಾಗಿರಿಸಿಕೊಳ್ಳುವುದರ ಮೂಲಕ ಆರಂಭಗೊಂಡಿರುವುದನ್ನು ಗಮನಿಸಬಹುದು. ಇದೇ ಮಾದರಿ ಕನ್ನಡ ರಂಗಭೂಮಿಯಲ್ಲಿಯೂ ಪ್ರಯೋಗಗೊಂಡಿರುವುದನ್ನು ಕಾಣಬಹುದಾಗಿದೆ. ವಿಶ್ವದ ಎಲ್ಲಾ ಭಾಗದ ರಂಗಭೂಮಿಯನ್ನು ಗಮನಿಸಿದರೂ ನಾಟಕ ವಸ್ತು ಪೌರಾಣಿಕತೆಯಿಂದಲೇ ಆರಂಭವಾಗಿ ಸಾಮಾಜಿಕತೆಯಕಡೆಗೆ ನಡೆದ ಇತಿಹಾಸವನ್ನು ದಾಖಲಿಸುತ್ತದೆ. ಅದರಲ್ಲೂ ಠಾಕೂರರ ಪೌರಾಣಿಕ ನಾಟಕಗಳನ್ನು ಗಮನಿಸಿದರೆ ಹೊಸ ರೀತಿಯಲ್ಲಿ ದರ್ಶಿಸಿರುವುದನ್ನು ಕಾಣಬಹುದು. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಅಂಚಿನ ಪಾತ್ರಗಳನ್ನು ಮುನ್ನೆಲೆಗೆ ತಂದು ಹೊಸ ರೂಪವನ್ನು ಕೊಟ್ಟವರು. ಈಗ ಹಿನ್ನೆಲೆಯಲ್ಲಿ ಠಾಕೂರರ ಪೌರಾಣಿಕ ನಾಟಕಗಳ ವಸ್ತು ಮತ್ತು ವಿನ್ಯಾಸ ತಿಳಿಯುವುದು ಬಹಳ ಮುಖ್ಯವೆನಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗಂಗಾನಾಯಕ್ ಕೆ. ಎನ್., (2012), ಬಂಗಾಳಿ ಸಾಹಿತ್ಯ, ಮೈಸೂರು ವಿ.ವಿ, ಮೈಸೂರು.
ಸುಬ್ರಾಯ ಭಟ್ ಪಿ. (ಅನು), (1943), ರವೀಂದ್ರನಾಥ ಟಾಗೋರ್, ಓರಿಯಂಟಲ್ ಲಾಂಗ್‌ಮನ್ಸ್, ಬೊಂಬಾಯಿ.
ಮರುಳಸಿದ್ದಪ್ಪ ಕೆ., (2013), ಆಧುನಿಕ ಕನ್ನಡ ನಾಟಕ, ಅಂಕಿತ ಪುಸ್ತಕ, ಬೆಂಗಳೂರು.
ಮಾಸ್ತಿ ವೆಂಕಟೇಶ ಅಯ್ಯಂಗಾರ (ಸಂ), (1935), ರವೀಂದ್ರ ಪ್ರಶಸ್ತಿ, ಮೈಸೂರು ವಿ.ವಿ, ಮೈಸೂರು.
ಲಕ್ಷ್ಮೀನಾರಾಯಣ ಭಟ್ಟ & ಮಂಜುನಾಥ ಬಿ.ಎಲ್, (1973), ಚಿತ್ರಾಂಗದಾ ಮತ್ತು ಇಸ್ಪೀಟ್ ರಾಜ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.