‘ಮದಕರಿ’ ಅಥವಾ ‘ಮೆದಕೇರಿ’ ಒಂದು ಜಿಜ್ಞಾಸೆಯ ಅಸ್ಮಿತೆ: ಚಾರಿತ್ರಿಕ ವಿಶ್ಲೇಷಣೆ

Main Article Content

ಡಾ. ರೇವಣಸಿದ್ದಪ್ಪ ಎಸ್.

Abstract

ಚಿತ್ರದುರ್ಗದ ಪಾಳೆಯಗಾರರ ಚರಿತ್ರೆಯಲ್ಲಿ ‘ಮದಕರಿ’ ಮತ್ತು ‘ಮೆದಕೇರಿ’ ಪದಗಳ ಬಳಕೆಯ ಕುರಿತಾದ ಜಿಜ್ಞಾಸೆಯನ್ನು ಇಲ್ಲಿ ಐತಿಹಾಸಿಕವಾಗಿ ವಿಶ್ಲೇಷಿಸಲಾಗಿದೆ. ಶಾಸನಗಳ ಆಧಾರದ ಮೇಲೆ ಡಾ. ಬಿ. ರಾಜಶೇಖರಪ್ಪನವರಂತಹ ವಿದ್ವಾಂಸರು ‘ಮೆದಕೇರಿ’ ಎಂಬುದು ಶಾಸನೋಕ್ತ ಹಾಗೂ ನಿಖರವಾದ ವ್ಯಕ್ತಿನಾಮ ಎಂದು ಪ್ರತಿಪಾದಿಸುತ್ತಾರೆ. ಆದರೆ, ದೆಹಲಿ ಸುಲ್ತಾನರ ಮದಿಸಿದ ಆನೆಯನ್ನು ಪಳಗಿಸಿದ ಸಾಹಸದ ಹಿನ್ನೆಲೆಯಲ್ಲಿ ಹುಟ್ಟಿದ ‘ಮದಕರಿ’ ಎಂಬ ಬಿರುದನ್ನೇ ಜನಪದರು ಹಾಗೂ ಸಮಕಾಲೀನ ಸಮಾಜವು ಅತೀವ ಅಭಿಮಾನದಿಂದ ಸ್ವೀಕರಿಸಿದೆ. ಆಡಳಿತಾತ್ಮಕ ಶಾಸನಗಳಲ್ಲಿ ‘ಮೆದಕೇರಿ’ ಎಂದು ದಾಖಲಾಗಿದ್ದರೂ, ಜನಮಾನಸದಲ್ಲಿ ‘ಮದಕರಿ’ ಎಂಬುದು ಕೇವಲ ಹೆಸರಾಗಿರದೆ, ಇಡೀ ನಾಯಕ ಜನಾಂಗದ ಸಾಂಸ್ಕೃತಿಕ ಹಾಗೂ ಶೌರ್ಯದ ಅಸ್ಮಿತೆಯಾಗಿ ಇಂದಿಗೂ ಪ್ರಚಲಿತದಲ್ಲಿದೆ. ಚರಿತ್ರೆಕಾರರ ಲಿಖಿತ ದಾಖಲೆಗಳಿಗಿಂತ ಜನಪದರು ಕಟ್ಟಿಕೊಟ್ಟಿರುವ ಮೌಖಿಕ ಪರಂಪರೆಯ ‘ಮದಕರಿ’ ಪದವು ವರ್ತಮಾನದ ಸಾಂಸ್ಕೃತಿಕ ಜೀವಂತಿಕೆಯ ಸಂಕೇತವಾಗಿ ಉಳಿದುಕೊಂಡಿದೆ.

Article Details

Section

Research Articles

Author Biography

ಡಾ. ರೇವಣಸಿದ್ದಪ್ಪ ಎಸ್.

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ.

How to Cite

ರೇವಣಸಿದ್ದಪ್ಪ ಎಸ್. (2026). ‘ಮದಕರಿ’ ಅಥವಾ ‘ಮೆದಕೇರಿ’ ಒಂದು ಜಿಜ್ಞಾಸೆಯ ಅಸ್ಮಿತೆ: ಚಾರಿತ್ರಿಕ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 17(05), 144 to 151. https://aksharasurya.com/index.php/latest/article/view/2378

References

ರಾಜಶೇಖರಪ್ಪ ಬಿ., (2016), ಪ್ರಾಚೀನ ಚಿತ್ರದುರ್ಗ, ಚಿತ್ರದುರ್ಗ: ಶ್ರೀ ಮುರುಘರಾಜೇಂದ್ರ ಗ್ರಂಥಮಾಲೆ, ಶ್ರೀ ಮುರುಘಾಮಠ.

ಲಕ್ಷ್ಮಣ್ ತೆಲಗಾವಿ ಮತ್ತು ಶ್ರೀನಿವಾಸ್ ಎಂ.ವಿ. (ಸಂ), (1976), ಹುಲ್ಲೂರು ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು, ಚಿತ್ರದುರ್ಗ: ಹುಲ್ಲೂರು ಶ್ರೀನಿವಾಸ ಜೋಯಿಸ ಗ್ರಂಥ ಪ್ರಕಟಣಾ ಸಮಿತಿ.

ನಂಜುಂಡಸ್ವಾಮಿ ಎ.ಎಸ್., (2012), ಪಾಳೆಯಗಾರರು ಮತ್ತು ಒಡೆಯರ ಇತಿಹಾಸ, ಧಾರವಾಡ: ಸಮಾಜ ಪುಸ್ತಕಾಲಯ.

ಗಂಗಾನಾಯಕ್ ಕೆ.ಎನ್. (ಪ್ರ.ಸಂ) ಮತ್ತು ಬಿ.ಆರ್. ಭಾರತೀ (ಸಂ), (2011), ಪಾಳೇಗಾರರ ಕಾಲದ ಶಾಸನಗಳು: ಸಂಪುಟ-2, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ.

ರಾಜಶೇಖರಪ್ಪ ಬಿ. (ಸಂ), (2007), ಚಿತ್ರದುರ್ಗ ಪಾಳೆಯಗಾರರ ದಾಖಲೆಗಳು, ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ.

ರೇವಣಸಿದ್ದಪ್ಪ ಎಸ್., (2014), ವಿಜಯನಗರ ಪತನಾನಂತರ ವೀರಶೈವ ಹಾಗೂ ಲಿಂಗಾಯತ ಧರ್ಮದವರಲ್ಲಾದ ಸಾಂಸ್ಕೃತಿಕ ಸ್ಥಿತ್ಯಂತರಗಳ ಅಧ್ಯಯನ (ಕ್ರಿ.ಶ. 1565 ರಿಂದ ಸಮಕಾಲೀನದವರೆಗೆ), ಹಂಪಿ: ಕನ್ನಡ ವಿಶ್ವವಿದ್ಯಾಲಯ (ಅಪ್ರಕಟಿತ ಪಿಎಚ್.ಡಿ ಮಹಾಪ್ರಬಂಧ).

Most read articles by the same author(s)