ಹಾಸನ ಜಿಲ್ಲೆಯ ಶೈವ ಮತ್ತು ಶರಣ ಧರ್ಮ: ಒಂದು ಚಾರಿತ್ರಿಕ ಅವಲೋಕನ

Main Article Content

ಡಾ. ರೇವಣಸಿದ್ದಪ್ಪ ಎಸ್.

Abstract

ಹಾಸನ ಜಿಲ್ಲೆಯು ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಕದಂಬ, ಗಂಗ, ಕಲ್ಯಾಣ ಚಾಲುಕ್ಯ ಹಾಗೂ ವಿಶೇಷವಾಗಿ ಹೊಯ್ಸಳರ ಆಡಳಿತದ ಅವಧಿಯಲ್ಲಿ ಈ ಭಾಗದಲ್ಲಿ ಶೈವ ಧರ್ಮವು ತನ್ನ ಸುವರ್ಣಯುಗವನ್ನು ಕಂಡಿತು. ಕಾಳಾಮುಖ, ಪಾಶುಪತ, ಶಾಕ್ತದಂತಹ ವಿವಿಧ ಶೈವ ಪಂಥಗಳು ಇಲ್ಲಿ ವ್ಯಾಪಕವಾಗಿ ಬೆಳೆದವು. ದೇವಾಲಯಗಳು ಕೇವಲ ಪೂಜಾ ತಾಣಗಳಾಗದೆ ವಿದ್ಯಾದಾನ, ಅನ್ನದಾನ ಮತ್ತು ಸಮಾಜಮುಖಿ ಕೇಂದ್ರಗಳಾಗಿದ್ದವು. ಧಾರ್ಮಿಕ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಮಹಿಳೆಯರ ಸಕ್ರಿಯ ಪಾತ್ರವು ಇಲ್ಲಿನ ಶಾಸನಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಕಾಲಾಂತರದಲ್ಲಿ, ಶೈವ ದೇವಾಲಯಗಳಲ್ಲಿ ಹೆಚ್ಚಾದ ಮಡಿವಂತಿಕೆ ಹಾಗೂ ಡಾಂಭಿಕತೆಯನ್ನು ವಿರೋಧಿಸಿ, ಸ್ಥಾವರವಾದ ‘ನೆಲೆ ದೇಗುಲ’ಗಳಿಗಿಂತ ಜಂಗಮ ರೂಪದ ‘ನಡೆ ದೇಗುಲ’ವೇ ಶ್ರೇಷ್ಠವೆಂಬ ವೈಚಾರಿಕ ಕ್ರಾಂತಿಯನ್ನು ಶರಣ ಧರ್ಮವು ಹೇಗೆ ತಂದಿತು ಎಂಬುದನ್ನು ಶಾಸನಗಳು ಹಾಗೂ ಪುರಾತತ್ತ್ವ ಆಧಾರಗಳ ಹಿನ್ನೆಲೆಯಲ್ಲಿ ಐತಿಹಾಸಿಕವಾಗಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಡಾ. ರೇವಣಸಿದ್ದಪ್ಪ ಎಸ್.

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ, ಚಿತ್ರದುರ್ಗ.

How to Cite

ರೇವಣಸಿದ್ದಪ್ಪ ಎಸ್. (2026). ಹಾಸನ ಜಿಲ್ಲೆಯ ಶೈವ ಮತ್ತು ಶರಣ ಧರ್ಮ: ಒಂದು ಚಾರಿತ್ರಿಕ ಅವಲೋಕನ. ಅಕ್ಷರಸೂರ್ಯ (AKSHARASURYA), 17(04), 137 to 145. https://aksharasurya.com/index.php/latest/article/view/2344

References

ಗೊರೂರು ರಾಮಸ್ವಾಮಿ ಅಯ್ಯಂಗಾರ್, (1996), ಹಾಸನ ಜಿಲ್ಲಾ ದರ್ಶನ, ಬೆಂಗಳೂರು: ಐಬಿಎಚ್ ಪ್ರಕಾಶನ.

ಗೊರೂರು ಅನಂತರಾಜು, (2008), ಹಾಸನ ಜಿಲ್ಲೆಯ ದೇವಾಲಯ ದರ್ಶನ, ಹಾಸನ: ವಾಸ್ತುಶಾಸ್ತ್ರ ಪೇಂಟಿಂಗ್ ಕಲೆ.

ಗೋಪಾಲ ಆರ್., (2010), ಹಾಸನ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಮೈಸೂರು: ಪ್ರಾಚ್ಯವಸ್ತು ಸಂಗ್ರಹಾಲಯಗಳ ಇಲಾಖೆ.

ಮಳಲಿ ವಸಂತ ಕುಮಾರ್ (ಸಂ.), (1996), ಹೊಯ್ಸಳ ಸಂಪದ, ಹಾಸನ: ಅಖಿಲ ಭಾರತ 65ನೆಯ ಕನ್ನಡ ಸಾಹಿತ್ಯ ಸಮ್ಮೇಳನ.

ವಸಂತಲಕ್ಷ್ಮೀ ಕೆ., (2006), ಹಾಸನ ಜಿಲ್ಲೆಯ ಹೊಯ್ಸಳ ಬಸದಿಗಳು, ಬೆಂಗಳೂರು: ಸುಮುಖ ಪ್ರಕಾಶನ.

ಸಕಲೇಶ ಮ., (2002), ಹೊಯ್ಸಳೋದಯ ಸಂಶೋಧನ, ಶಿವಮೊಗ್ಗ: ಹಿಮಶೈಲ ಪ್ರಕಾಶನ.

ಸರಸ್ವತಿ ಎಂ., (2012), ಹೊಯ್ಸಳರ ಇತಿಹಾಸ, ಮೈಸೂರು: ವಾಚಸ್ಪತಿ ಪ್ರಕಾಶನ.

ಲಲಿತಾಂಬ ಎನ್. ಆರ್., (2007), ಅರಸೀಕೆರೆ ತಾಲೂಕಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಹಂಪಿ: ಕನ್ನಡ ವಿಶ್ವವಿದ್ಯಾಲಯ.