ವಚನಗಳಲ್ಲಿ ಪ್ರಸಾದ ತತ್ವ: ಆಯ್ದಕ್ಕಿ ದಂಪತಿಗಳ ವಚನಗಳನ್ನು ಅನುಲಕ್ಷಿಸಿ

Main Article Content

ಡಾ. ಗಾಯತ್ರಿ ದೇವಿ

Abstract

೧೨ನೇ ಶತಮಾನದ ವಚನ ಚಳುವಳಿಯು ಸಮಾಜಕ್ಕೆ ನೀಡಿದ ಶ್ರೇಷ್ಠ ಪರಿಕಲ್ಪನೆಗಳಲ್ಲಿ ‘ಪ್ರಸಾದ’ ಅತ್ಯಂತ ಮಹತ್ವದ್ದಾಗಿದೆ. ಇದು ಕೇವಲ ಅನ್ನ ಅಥವಾ ದೇವರಿಗೆ ಅರ್ಪಿಸುವ ನೈವೇದ್ಯಕ್ಕೆ ಮಾತ್ರ ಸೀಮಿತವಾಗಿರದೆ; ಅಹಂಕಾರವನ್ನು ತೊರೆದು ಸಮರ್ಪಣಾಭಾವದಿಂದ ಸ್ವೀಕರಿಸುವ ಆಂತರಿಕ ಶುದ್ಧತೆಯ ಪ್ರತೀಕವಾಗಿದೆ. ಷಟ್ಸ್ಥಲ ಸಿದ್ಧಾಂತದಲ್ಲಿ ಪ್ರಮುಖವಾದ ಪ್ರಸಾದದ ಕುರಿತು ವಚನಕಾರರಲ್ಲಿರುವ ಬಹುಮುಖಿ ನಿಲುವುಗಳನ್ನು ಶೋಧಿಸುತ್ತಾ, ವಿಶೇಷವಾಗಿ ಕಾಯಕನಿಷ್ಠರಾದ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳ ವಚನಗಳ ಹಿನ್ನೆಲೆಯಲ್ಲಿ ಈ ತತ್ವವನ್ನು ವಿಶ್ಲೇಷಿಸಲಾಗಿದೆ. ಮಾರಯ್ಯನವರ ಪ್ರಕಾರ ಸತ್ಯ ಮತ್ತು ಚಿತ್ತಶುದ್ಧಿಯೇ ಪ್ರಸಾದವಾದರೆ, ಲಕ್ಕಮ್ಮನವರ ದೃಷ್ಟಿಯಲ್ಲಿ ಅದು ಶರಣರ ಸಂಪರ್ಕದಿಂದ ಕಾಯ, ಜೀವ, ಅಂತರಂಗಗಳನ್ನು ಶುದ್ಧೀಕರಿಸುವ ಉನ್ನತ ಜ್ಞಾನವಾಗಿದೆ. ದಾಸೋಹದ ಮುಂದುವರಿದ ರೂಪವಾದ ‘ಪ್ರಸಾದ’ವು ಆರ್ಥಿಕ ಸಮಾನತೆ ಹಾಗೂ ಮಾನವನ ಆಂತರಿಕ-ಬಾಹ್ಯ ಬದುಕನ್ನು ಪಾವನಗೊಳಿಸುವ ಸಾಂಸ್ಕೃತಿಕ ಆಶಯವಾಗಿ ಹೇಗೆ ರೂಪುಗೊಂಡಿದೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biography

ಡಾ. ಗಾಯತ್ರಿ ದೇವಿ

ಅಧ್ಯಾಪಕರು, ಕನ್ನಡ ವಿಭಾಗ, ಸುವರ್ಣಗಂಗೆ ಕ್ಯಾಂಪಸ್‌, ಸ್ನಾತಕೋತ್ತರ ಕೇಂದ್ರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ.

How to Cite

ಗಾಯತ್ರಿ ದೇವಿ. (2026). ವಚನಗಳಲ್ಲಿ ಪ್ರಸಾದ ತತ್ವ: ಆಯ್ದಕ್ಕಿ ದಂಪತಿಗಳ ವಚನಗಳನ್ನು ಅನುಲಕ್ಷಿಸಿ. ಅಕ್ಷರಸೂರ್ಯ (AKSHARASURYA), 17(05), 38 to 45. https://aksharasurya.com/index.php/latest/article/view/2365

References

ಕಲಬುರ್ಗಿ ಎಂ. ಎಂ., (2001), ಸಮಗ್ರ ವಚನ ಸಂಪುಟ: 01 (ಬಸವಣ್ಣನವರ ವಚನಗಳು), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ವೀರಣ್ಣ ರಾಜೂರ ಮತ್ತು ಡಾ. ಎಂ. ಎಂ. ಕಲಬುರ್ಗಿ, (2001), ಸಮಗ್ರ ವಚನ ಸಂಪುಟ: 05 (ಶಿವಶರಣೆಯರ ವಚನಗಳು), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಕಲಬುರ್ಗಿ ಎಂ. ಎಂ., (2001), ಸಮಗ್ರ ವಚನ ಸಂಪುಟ: 06 (ಸಂಕೀರ್ಣ ವಚನ ಸಂಪುಟ), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಮಹದೇವಪ್ಪ ಎಂ. ಜಿ., (2001), ಸಮಗ್ರ ವಚನ ಸಂಪುಟ: 15 (ವಚನ ಪಾರಿಭಾಷಾ ಕೋಶ), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ತಿಪ್ಪೇರುದ್ರಸ್ವಾಮಿ ಹೆಚ್., (1969), ವಚನಗಳಲ್ಲಿ ವೀರಶೈವ ಧರ್ಮ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.

ವಿದ್ವಾನ್ ಎಂ. ಮಲ್ಲಣ್ಣ, (1997), ಶೈವಾಗಮ ಸಾರ, ಮೈಸೂರು: ಶ್ರೀ ಮಲ್ಲಿಕಾರ್ಜುನ ಗ್ರಂಥ ಪ್ರಕಾಶನ.

Most read articles by the same author(s)