ಪಿ. ಸತ್ಯವತಿಯವರ ಕತೆಗಳಲ್ಲಿ ಸ್ತ್ರೀ ಸ್ವಾಯತ್ತತೆಯ ಅಂಶಗಳು
Main Article Content
Abstract
ಮಹಿಳಾ ಕಥನ ಸಾಹಿತ್ಯಕ್ಕೊಂದು ಹೊಸ ಆಯಾಮವನ್ನು ತಂದುಕೊಟ್ಟಿರುವ ‘ದಮಯಂತಿಯ ಮಗಳು’ ಕಥಾ ಸಂಕಲನ ಆಧುನಿಕ, ಸುಶಿಕ್ಷಿತ, ಉದ್ಯೋಗಸ್ಥ ಹೆಣ್ಣು ಎದುರಿಸುತ್ತಿರುವ ಬಹುಮುಖೀ ಸವಾಲುಗಳನ್ನು, ಅದನ್ನು ಎದುರಿಸಲು ಬೇಕಿರುವ ಹೊರದಾರಿಗಳನ್ನು ಯಶಸ್ವಿಯಾಗಿ ಹಿಡಿದಿಡುತ್ತದೆ. ಸ್ತ್ರೀ ವಾದಿ ಸೈದ್ಧಾಂತಿಕತೆ ಕಟ್ಟಿಕೊಡುತ್ತಿರುವ ಆಧುನಿಕತೆಯ ಹಿಂಸಾ ರೂಪಗಳನ್ನು ಈ ಕಥೆಗಳು ಎಳೆ ಎಳೆಯಾಗಿ ತೆರೆದಿಡುತ್ತವೆ. ಆಧುನಿಕತೆ ಹೆಣ್ಣಿಗೆ ವರವೋ ಶಾಪವೋ ಎನ್ನುವುದು ನಿರಂತರ ಚರ್ಚೆಯ ವಿಷಯವಾಗಿರುವ ಸಂದರ್ಭದಲ್ಲಿ ಪಿ ಸತ್ಯವತಿಯವರು ಆಧುನಿಕತೆ ಹೆಣ್ಣಿನ ಬದುಕನ್ನು ಆವರಿಸಿರುವ ಬಗೆಯನ್ನೂ, ಹೆಣ್ಣು ಅದನ್ನು ಎದುರುಗೊಳ್ಳಬಹುದಾದ ವಿಧಾನಗಳನ್ನು ಈ ಕಥೆಗಳಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪಿ. ಸತ್ಯವತಿ (ಅನು: ಅಜಯ್ ವರ್ಮಾ ಅಲ್ಲೂರಿ), (2002), ದಮಯಂತಿಯ ಮಗಳು, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.
ವಿಜಯಾದಬ್ಬೆ, (1989), ಮಹಿಳೆ ಸಾಹಿತ್ಯ ಸಮಾಜ, ಮೈಸೂರು: ರಚನಾ ಪ್ರಕಾಶನ.
ವಿಜಯಾದಬ್ಬೆ, (1997), ನಾರಿ: ದಾರಿ- ದಿಗಂತ, ಮೈಸೂರು: ರಚನಾ ಪ್ರಕಾಶನ.
ಸುಮಿತ್ರಾಬಾಯಿ ಬಿ. ಎನ್., (1999), ಸ್ತ್ರೀವಾದ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.