ಎಸ್. ಎಲ್. ಭೈರಪ್ಪ ಅವರ ‘ನಿರಾಕರಣ’ - ಒಂದು ವಿಶ್ಲೇಷಣೆ

Main Article Content

ಡಾ. ವೇದಾವತಿ ಎಸ್.

Abstract

ಖ್ಯಾತ ಲೇಖಕ ಎಸ್. ಎಲ್. ಭೈರಪ್ಪ ಅವರ ‘ನಿರಾಕರಣ’ ಕಾದಂಬರಿಯ ಕೇಂದ್ರಬಿಂದುವಾದ ನರಹರಿಯ ಮಾನಸಿಕ ದ್ವಂದ್ವ, ಪಲಾಯನವಾದ ಮತ್ತು ಬದುಕಿನ ವಾಸ್ತವಗಳ ನಡುವಿನ ಸಂಘರ್ಷವನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ವೇದಾಂತದ ಪ್ರಭಾವದಿಂದಾಗಿ ಸಂಸಾರಕ್ಕೆ ಅಂಟಿಯೂ ಅಂಟದಂತೆ ಇರಬಯಸುವ ನಾಯಕ, ತನ್ನ ಪತ್ನಿಯರ ಸಾವಿನ ನಂತರ ಐದು ಮಕ್ಕಳನ್ನು ದತ್ತು ನೀಡಿ ಸನ್ಯಾಸಿಯಾಗಲು ಹಿಮಾಲಯದತ್ತ ಸಾಗುತ್ತಾನೆ. ಆದರೆ, ಆಧ್ಯಾತ್ಮಿಕತೆಯ ಹೆಸರಿನಲ್ಲಿ ಕರ್ತವ್ಯದಿಂದ ನುಣುಚಿಕೊಳ್ಳುವ ಆತನಿಗೆ ಒಂಟಿತನದಲ್ಲಿಯೂ ನೆಮ್ಮದಿ ದೊರೆಯುವುದಿಲ್ಲ. ಅಂತಿಮವಾಗಿ ತನ್ನವರ ಸೆಳೆತಕ್ಕೆ ಸಿಲುಕಿ, ಅನಿವಾರ್ಯವಾಗಿ ತನ್ನದೇ ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಗೆ ಮರಳುವ ವಾಸ್ತವವನ್ನು ಈ ಬರಹವು ಕಟ್ಟಿಕೊಡುತ್ತದೆ. ದತ್ತು ಪ್ರಕ್ರಿಯೆಯ ಹಿಂದಿನ ಬಿಕ್ಕಟ್ಟುಗಳು ಹಾಗೂ ಮನುಷ್ಯನ ಸಹಜ ಭಾವನೆಗಳ ಅನಿವಾರ್ಯತೆಯನ್ನು ವಿಮರ್ಶಿಸುವ ಮೂಲಕ, ಕರ್ತವ್ಯವಿಮುಖ ಸನ್ಯಾಸತ್ವದ ವಿಫಲತೆಯನ್ನು ಎತ್ತಿತೋರಿಸಲಾಗಿದೆ.

Article Details

Section

Research Articles

Author Biography

ಡಾ. ವೇದಾವತಿ ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಕಾಲೇಜು, ಕಾಸರಗೋಡು.

How to Cite

ವೇದಾವತಿ ಎಸ್. (2026). ಎಸ್. ಎಲ್. ಭೈರಪ್ಪ ಅವರ ‘ನಿರಾಕರಣ’ - ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 17(04), 146 to 151. https://aksharasurya.com/index.php/latest/article/view/2345

References

ಭೈರಪ್ಪ ಎಸ್.ಎಲ್., (1971), ನಿರಾಕರಣ, ಬೆಂಗಳೂರು: ಸಾಹಿತ್ಯ ಭಂಡಾರ.

Most read articles by the same author(s)