ಅವಿಭಜಿತ ಕೋಲಾರ ಜಿಲ್ಲೆಯ ಮೌಖಿಕ ಸಾಹಿತ್ಯ ಪರಂಪರೆಯಲ್ಲಿ ಬೇಸಾಯ ಮತ್ತು ದ್ಯಾವರ ಸಂಸ್ಕೃತಿ
Main Article Content
Abstract
ಈ ಲೇಖನವು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೌಖಿಕ ಸಾಹಿತ್ಯ ಪರಂಪರೆಯಲ್ಲಿ ಬೇಸಾಯ ಮತ್ತು ದ್ಯಾವರಗಳ ಸ್ಥಾನವನ್ನು ವಿಶ್ಲೇಷಿಸುತ್ತದೆ. ಈ ಭಾಗದ ಜನಪದ ಜೀವನ ಕೃಷಿ ಆಧಾರಿತವಾಗಿದ್ದು, ಕೃಷಿ ಚಟುವಟಿಕೆಗಳು, ಎತ್ತುಗಳ ಆರಾಧನೆ, ಬಿತ್ತನೆ, ಕೊಯ್ಲು, ಸಂಕ್ರಾಂತಿ, ಜಾತ್ರೆಗಳು ಹಾಗೂ ವಿವಿಧ ದ್ಯಾವರ ಆಚರಣೆಗಳು ಜನಪದ ಸಾಹಿತ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಈ ಆಚರಣೆಗಳ ಸಂದರ್ಭದಲ್ಲಿ ಹಾಡಲಾಗುವ ಜನಪದ ಗೀತೆಗಳು, ಗಾದೆಗಳು, ಕಥೆಗಳು ಹಾಗೂ ಐತಿಹ್ಯಗಳು ಸ್ಥಳೀಯ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕನ್ನು ಪ್ರತಿಬಿಂಬಿಸುತ್ತವೆ. ಕನ್ನಡ, ತೆಲುಗು, ತಮಿಳು ಹಾಗೂ ಉರ್ದು ಭಾಷಾ ಸಂಸ್ಕೃತಿಗಳ ಪರಸ್ಪರ ಪ್ರಭಾವವೂ ಈ ಪ್ರದೇಶದ ಮೌಖಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಕೃಷಿ, ಪ್ರಕೃತಿ, ದೈವಾರಾಧನೆ ಮತ್ತು ಸಮುದಾಯ ಜೀವನವನ್ನು ಆಧರಿಸಿದ ಈ ಮೌಖಿಕ ಪರಂಪರೆ ಸ್ಥಳೀಯರ ಜೀವನ ಮೌಲ್ಯಗಳು, ಪರಿಸರ ಜ್ಞಾನ ಮತ್ತು ಸಾಂಸ್ಕೃತಿಕ ಗುರುತನ್ನು ತಲೆಮಾರುಗಳಿಂದ ಸಂರಕ್ಷಿಸುತ್ತಾ ಬಂದಿದೆ. ಆಧುನಿಕತೆಯ ಪ್ರಭಾವದಿಂದ ಕೆಲವು ಆಚರಣೆಗಳು ಕ್ಷೀಣಿಸುತ್ತಿದ್ದರೂ, ಅವುಗಳ ದಾಖಲೀಕರಣ ಮತ್ತು ಸಂರಕ್ಷಣೆ ಅಗತ್ಯವೆಂಬುದನ್ನು ಲೇಖನ ಒತ್ತಿ ಹೇಳುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಿತ್ತರಂಜನ್ ಹೆಚ್., (2007), ಕೋಲಾರ ಜಿಲ್ಲಾ ಗೆಜೆಟಿಯರ್ (ಪರಿಷ್ಕೃತ ಆವೃತ್ತಿ), ಬೆಂಗಳೂರು: ಕರ್ನಾಟಕ ಗೆಜೆಟಿಯರ್ ಇಲಾಖೆ.
ಆದಿಶಂಕರ್ ಕೆ., (1968), ಕೋಲಾರ ಜಿಲ್ಲಾ ಗ್ಯಾಜೆಟಿಯರ್, ಬೆಂಗಳೂರು: ಕರ್ನಾಟಕ ಸರ್ಕಾರ.
ಕಾಳೇಗೌಡ ನಾಗವಾರ ಮತ್ತು ಆನಂದಮೂರ್ತಿ ಜಿ.ವಿ. (ಸಂ.), (2000), ಹಲವು ತೋಟದ ಹೂಗಳು, ಬೆಂಗಳೂರು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ.
ಗೋವಿಂದರಾಜು ಟಿ., (2014), ಬಯಲು ಸೀಮೆಯ ಜನಪದ ಹಾಡ್ಗುಣಿತಗಳು, ಬೆಂಗಳೂರು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ.
ಗೋಪಾಲಗೌಡ ಕಲ್ವಮಂಜಲಿ (ಸಂ.), (2007), ಹಂಡಿಗನಾಳ ಶ್ರೀ ಈರಣ್ಣಸ್ವಾಮಿ ಕೆಂಪಣ್ಣಸ್ವಾಮಿ ಕಥಾಮೃತ, ಹಂಡಿಗನಾಳ: ಈರಣ್ಣದೇವರ ದೇವಾಲಯ ಟ್ರಸ್ಟ್.
ಮುನಿರಾಜು, ಕೋಲಾರ ಜಿಲ್ಲಾ ಜನಪದ ವೈದ್ಯ, ಕೋಲಾರ.