ದು. ಸರಸ್ವತಿ ಅವರ ‘ಸಣ್ತಿಮ್ಮಿ ರಾಮಾಯ್ಣ’ ಎಂಬ ಜನಕಥನ

Main Article Content

ಡಾ. ಪ್ರಸನ್ನ ನಂಜಾಪುರ,

Abstract

ದು. ಸರಸ್ವತಿ ಅವರ ‘ಸಣ್ತಿಮ್ಮಿ ರಾಮಾಯ್ಣ’ ಏಕಾಂಕ ಕಥನವು ಪೌರಾಣಿಕ ಮಹಾಕಾವ್ಯವನ್ನು ಸಮಕಾಲೀನ ಸಾಮಾಜಿಕ ಮತ್ತು ಸ್ತ್ರೀವಾದಿ ಸಂವೇದನೆಗಳೊಂದಿಗೆ ಮುಖಾಮುಖಿಯಾಗಿಸುವ ವಿಶಿಷ್ಟ ಜನಕಥನವಾಗಿದೆ. ಗ್ರಾಮೀಣ ಮಹಿಳೆ ಸಣ್ತಿಮ್ಮಿಯ ನಿರೂಪಣೆಯಲ್ಲಿ ಮೂಡಿಬರುವ ಕೃತಿಯು, ಸೀತೆ, ಊರ್ಮಿಳೆ ಮತ್ತು ಶೂರ್ಪನಖಿಯಂತಹ ಶೋಷಿತ ಸ್ತ್ರೀ ಪಾತ್ರಗಳನ್ನು ಹೊಸ ದೃಷ್ಟಿಕೋನದಿಂದ ಕಟ್ಟಿಕೊಡುತ್ತದೆ. ಪುರುಷಪ್ರಧಾನ ವ್ಯವಸ್ಥೆಯ ದೋಷಗಳನ್ನು, ಅಧಿಕಾರದ ಮದವನ್ನು ಮತ್ತು ಮದುವೆ-ಕುಟುಂಬದ ಹೆಸರಿನಲ್ಲಿ ಹೆಣ್ಣಿನ ಮೇಲಾಗುವ ಶೋಷಣೆಯನ್ನು ಇಲ್ಲಿ ಕಟುವಾಗಿ ವಿಮರ್ಶಿಸಲಾಗಿದೆ. ದುಡಿಮೆಯ ಮಹತ್ವ, ಶ್ರಮಿಕ ವರ್ಗದ ಪರವಾದ ಕಾಳಜಿ ಹಾಗೂ ಪ್ರಾದೇಶಿಕ ಐತಿಹ್ಯಗಳ ಸಮ್ಮಿಲನ ಈ ಕಥನದಲ್ಲಿ ಎದ್ದು ಕಾಣುತ್ತದೆ. ಸೀತೆಯ ಆಡಳಿತಾತ್ಮಕ ತಂತ್ರಗಾರಿಕೆ ಹಾಗೂ ಅಂತಿಮವಾಗಿ ಪುರುಷ ಪ್ರಧಾನ ಪ್ರಭುತ್ವವನ್ನು ಧಿಕ್ಕರಿಸಿ ಪ್ರಕೃತಿಯೊಡನೆ ಉಳಿಯುವ ನಿರ್ಧಾರವು, ಶೋಷಿತರ ಆತ್ಮವಿಶ್ವಾಸ ಮತ್ತು ಮಹಿಳೆಯರ ಸ್ವತಂತ್ರ ಅಸ್ತಿತ್ವವನ್ನು ಎತ್ತಿಹಿಡಿಯುತ್ತದೆ. ಪುರಾಣವನ್ನು ವರ್ತಮಾನದ ಸಾಂಸ್ಕೃತಿಕ ಹಾಗೂ ಸಾಮಾಜಿಕ ತಲ್ಲಣಗಳಿಗೆ ಹಿಡಿದ ಕೈಗನ್ನಡಿಯಾಗಿ ಮರುಸೃಷ್ಟಿಸಿದ ಪರಿಯು ಇಲ್ಲಿ ಅನಾವರಣಗೊಂಡಿದೆ.

Article Details

Section

Research Articles

Author Biography

ಡಾ. ಪ್ರಸನ್ನ ನಂಜಾಪುರ,

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ದಿ ರೂರಲ್ ಕಾಲೇಜು, ಕನಕಪುರ, ಬೆಂಗಳೂರು ದಕ್ಷಿಣ ಜಿಲ್ಲೆ.

How to Cite

ಪ್ರಸನ್ನ ನಂಜಾಪುರ. (2026). ದು. ಸರಸ್ವತಿ ಅವರ ‘ಸಣ್ತಿಮ್ಮಿ ರಾಮಾಯ್ಣ’ ಎಂಬ ಜನಕಥನ. ಅಕ್ಷರಸೂರ್ಯ (AKSHARASURYA), 16(01), 30 to 36. https://aksharasurya.com/index.php/latest/article/view/2129

References

ಸರಸ್ವತಿ ದು. (2018), ಸಣ್ತಿಮ್ಮಿ ಪುರಾಣ, ಹೊನ್ನಾವರ: ಕವಿ ಪ್ರಕಾಶನ.

Most read articles by the same author(s)