ಸಿದ್ಧರಾಮನ ವಚನಗಳಲ್ಲಿ ಸಾಮಾಜಿಕ ಜೀವನ ಮೌಲ್ಯಗಳು
Main Article Content
Abstract
ಹನ್ನೆರಡನೇ ಶತಮಾನದ ಶರಣ ಚಳವಳಿಯ ಪ್ರಮುಖ ರೂವಾರಿ ಸಿದ್ಧರಾಮರ ವಚನಗಳಲ್ಲಿ ಅಡಗಿರುವ ಸಾರ್ವಕಾಲಿಕ ಸಾಮಾಜಿಕ ಮತ್ತು ಜೀವನ ಮೌಲ್ಯಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಜಾತಿ, ಕುಲ ಮತ್ತು ವರ್ಗಭೇದಗಳನ್ನು ದಿಕ್ಕರಿಸಿ, ಮಾನವ ಬಂಧುತ್ವ ಹಾಗೂ ಸಮಾನತೆಯನ್ನು ಪ್ರತಿಪಾದಿಸುವ ಅವರ ನಿಲುವುಗಳನ್ನು ಗುರುತಿಸಲಾಗಿದೆ. ಪಾಪ-ಪುಣ್ಯ, ಸ್ವರ್ಗ-ನರಕಗಳಂತಹ ಕಾಲ್ಪನಿಕ ನಂಬಿಕೆಗಳನ್ನು ಮೀರಿ, ಸಮಾಜದಲ್ಲಿ ಸತ್ಯ, ಅಹಿಂಸೆ ಮತ್ತು ಕಾಯಕನಿಷ್ಠೆಯಿಂದ ಬದುಕುವುದೇ ನಿಜವಾದ ಧರ್ಮ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಹೆಣ್ಣನ್ನು ಮಾಯೆ ಎನ್ನದೆ ಸಾಕ್ಷಾತ್ ದೈವಸ್ವರೂಪವೆಂದು ಗೌರವಿಸುವ ದೃಷ್ಟಿಕೋನ ಹಾಗೂ ಡಾಂಭಿಕ ಭಕ್ತಿಯನ್ನು ತ್ಯಜಿಸಿ ಅಂತಃಕರಣದ ಶುದ್ಧಿಯನ್ನು ಸಾಧಿಸುವ ಶರಣರ ವೈಚಾರಿಕ ಪ್ರಜ್ಞೆಯನ್ನು ಮಂಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಡಾ. ಎಸ್. ವಿದ್ಯಾಶಂಕರ (ಸಂ) ಸಿದ್ದರಾಮೇಶ್ವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, -(1993)
ಡಾ. ಸಿದ್ಧಯ್ಯ ಪುರಾಣಿಕ - ಶರಣ ಚರಿತಾಮೃತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು (2013)
ಡಾ.ಕೆ.ಆರ್. ಸಿದ್ಧಗಂಗಮ್ಮ - ಸಿದ್ಧರಾಮೇಶ್ವರ, ಶ್ರೀ ಬಸವ ಅಧ್ಯಯನ ಪೀಠ, ಮೈಸೂರು ವಿಶ್ವವಿದ್ಯಾನಿಲಯ (2015).
ಡಾ. ಆರ್.ಸಿ. ಹಿರೇಮಠ (ಸಂ) - ಶ್ರೀಸಿದ್ಧರಾಮೇಶ್ವರ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (1968)
ಚನ್ನಪ್ಪ ಉತ್ತಂಗಿ (ಸಂ) ಸಿದ್ದರಾಮ ಸಾಹಿತ್ಯ ಸಂಗ್ರಹ, ಕನ್ನಡ ಕೋಟೆ, ಸೊಲ್ಲಾಪುರ (1955).