ಗಂಗಾಮತಸ್ಥ ಮಹಿಳೆಯರ ಆಚರಣೆಗಳು ಹಾಗೂ ಆಹಾರ ಪದ್ಧತಿ

Main Article Content

ಪವಿತ್ರ ಹೆಚ್.ಸಿ.

Abstract

ಗಂಗಾಮತಸ್ಥ ಸಮುದಾಯದ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹಿಂದಿನಿಂದಲೂ ಎದುರಿಸುತ್ತಿರುವ ಸವಾಲುಗಳು, ಅವರ ಸಾಮಾಜಿಕ ಸ್ಥಾನಮಾನ ಹಾಗೂ ದೈನಂದಿನ ಜೀವನಶೈಲಿಯನ್ನು ಇಲ್ಲಿ ಸವಿವರವಾಗಿ ವಿಶ್ಲೇಷಿಸಲಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಆಚರಣೆಗಳಾದ ಸೀಮಂತ, ನಾಮಕರಣ, ಋತುಮತಿಯಾದಾಗಿನ ಶಾಸ್ತ್ರಗಳು ಹಾಗೂ ಬಾಣಂತನದಲ್ಲಿ ತಾಯಿ ಮತ್ತು ಮಗುವಿಗೆ ನೀಡುವ ಪೌಷ್ಟಿಕಾಂಶಯುಕ್ತ ಸಾಂಪ್ರದಾಯಿಕ ಆರೈಕೆಯ ಹಿಂದಿರುವ ನಂಬಿಕೆಗಳನ್ನು ದಾಖಲಿಸಲಾಗಿದೆ. ರಾಗಿಮುದ್ದೆ ಹಾಗೂ ಮಾಂಸಾಹಾರವನ್ನು ಪ್ರಧಾನವಾಗಿ ಹೊಂದಿರುವ ಇವರ ವಿಶಿಷ್ಟ ಆಹಾರ ಪದ್ಧತಿಯನ್ನು ಪರಿಚಯಿಸಲಾಗಿದೆ. ಕುಟುಂಬದ ನಿರ್ವಹಣೆ, ಕೃಷಿ, ರೇಷ್ಮೆ ಕೃಷಿ ಹಾಗೂ ಕೂಲಿ ಕೆಲಸಗಳಲ್ಲಿ ಮಹಿಳೆಯರು ಅವಿರತವಾಗಿ ಶ್ರಮಿಸಿದರೂ, ಆಸ್ತಿಯ ಹಕ್ಕು, ಊಟೋಪಚಾರ ಮತ್ತು ಆರ್ಥಿಕ ಪಾಲುದಾರಿಕೆಯಲ್ಲಿ ಅವರಿಗಾಗುತ್ತಿರುವ ತಾರತಮ್ಯವನ್ನು ಎತ್ತಿತೋರಿಸಲಾಗಿದೆ. ಒಟ್ಟಾರೆಯಾಗಿ, ಶ್ರಮಜೀವಿ ಮಹಿಳೆಯ ನೈಜ ಬದುಕಿನ ಚಿತ್ರಣವನ್ನು ಸಾಂಸ್ಕೃತಿಕ ನೆಲೆಯಲ್ಲಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಪವಿತ್ರ ಹೆಚ್.ಸಿ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಪವಿತ್ರ ಹೆಚ್.ಸಿ. (2026). ಗಂಗಾಮತಸ್ಥ ಮಹಿಳೆಯರ ಆಚರಣೆಗಳು ಹಾಗೂ ಆಹಾರ ಪದ್ಧತಿ. ಅಕ್ಷರಸೂರ್ಯ (AKSHARASURYA), 18(02), 08 to 14. https://aksharasurya.com/index.php/latest/article/view/2122

References

ಗೊರೂರು ರಾಮಸ್ವಾಮಿ ಅಯ್ಯಂಗಾರ್, (1974), ಜನಪದ ಮತ್ತು ದರ್ಶನ, ಮೈಸೂರು: ಪ್ರಸಾರಾಂಗ, ಮಾನಸಗಂಗೋತ್ರಿ.

ಪ್ರಭಾಕರ ಎ. ಎಸ್., (2000), ಬುಡಕಟ್ಟು ಅಧ್ಯಯನಮಾಲೆ ಮೂರು: ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಹಿರೇಮಲ್ಲೂರ್ ಈಶ್ವರನ್ ಎಂ., (1972), ಭಾರತದ ಹಳ್ಳಿಗಳು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ಪರಮಶಿವಯ್ಯ ಜೀ. ಶಂ., (1979), ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.

ಅಪ್ಪಗೆರೆ ತಿಮ್ಮರಾಜು, (2022), ಜನಪದ ಕಲೆಗಳು ಮತ್ತು ಪ್ರಾಯೋಗಿಕತೆ, ಬೆಂಗಳೂರು: ಸಪ್ನ ಬುಕ್ ಹೌಸ್.

Most read articles by the same author(s)