ಗಂಗಾಮತಸ್ಥರ ಕುಲಕಸುಬುಗಳು

Main Article Content

ಪವಿತ್ರ ಹೆಚ್.ಸಿ.

Abstract

ಗಂಗಾಮತಸ್ಥ ಸಮುದಾಯದ ಪ್ರಮುಖ ಕುಲಕಸುಬುಗಳಾದ ಮೀನುಗಾರಿಕೆ, ಬಲೆ ನೇಯುವುದು, ಸುಣ್ಣ ಸುಡುವುದು ಹಾಗೂ ವೀಳ್ಯದೆಲೆ ಬೆಳೆಯುವ ಸಾಂಪ್ರದಾಯಿಕ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಮೀನುಗಾರರು ಎದುರಿಸುತ್ತಿರುವ ಆರ್ಥಿಕ ಹಾಗೂ ಆಡಳಿತಾತ್ಮಕ ಸವಾಲುಗಳು, ಕೆರೆಗಳ ಗುತ್ತಿಗೆ ಸಮಸ್ಯೆ ಮತ್ತು ಸರ್ಕಾರಿ ಸೌಲಭ್ಯಗಳ ಕೊರತೆಯನ್ನು ಪ್ರಸ್ತಾಪಿಸಲಾಗಿದೆ. ಮೀನುಗಾರಿಕೆ ಮತ್ತು ಶಿಕಾರಿಗೆ ಬಳಸುವ ಸುತ್ತು ಬಲೆ, ಬೀಸು ಬಲೆ, ಮಾರಿ ಬಲೆ ಮುಂತಾದ ವಿವಿಧ ಬಲೆಗಳ ಪರಿಚಯವನ್ನು ನೀಡಲಾಗಿದೆ. ಜೊತೆಗೆ, ವೀಳ್ಯದೆಲೆ ತೋಟವನ್ನು ಸಾಕ್ಷಾತ್ ಲಕ್ಷ್ಮೀದೇವಿ ಎಂದು ಪವಿತ್ರವಾಗಿ ಭಾವಿಸಿ ಮಾಡುವ ಕೃಷಿ ವಿಧಾನ, ಎಲೆಗಳ ಎಣಿಕೆ ಮತ್ತು ಮಾರಾಟದ ಕ್ರಮವನ್ನು ವಿವರಿಸಲಾಗಿದೆ. ಆಧುನಿಕ ಕಾಲದಲ್ಲಿ ಶಿಕ್ಷಣದ ಪ್ರಭಾವದಿಂದಾಗಿ ಈ ಸಮುದಾಯದ ಯುವಜನತೆ ತಮ್ಮ ಸಾಂಪ್ರದಾಯಿಕ ಕಸುಬುಗಳನ್ನು ಬಿಟ್ಟು ಹೊಸ ವೃತ್ತಿಗಳತ್ತ ಮುಖ ಮಾಡುತ್ತಿರುವ ಸಾಮಾಜಿಕ ಬದಲಾವಣೆಯ ಚಿತ್ರಣವನ್ನು ಸಹ ಇಲ್ಲಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಪವಿತ್ರ ಹೆಚ್.ಸಿ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು.

How to Cite

ಪವಿತ್ರ ಹೆಚ್.ಸಿ. (2026). ಗಂಗಾಮತಸ್ಥರ ಕುಲಕಸುಬುಗಳು. ಅಕ್ಷರಸೂರ್ಯ (AKSHARASURYA), 16(01), 26 to 29. https://aksharasurya.com/index.php/latest/article/view/2128

References

ಹಲಸಂಗಿ ಗೆಳೆಯರು (ಸಂ.), (1931), ಗರತಿಯ ಹಾಡು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ರಂಗನಗೌಡ ನಿಲ್ಲೋಗಲ್ ಜಿ., ಮೂಢನಂಬಿಕೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಮಲ್ಲಿಕಾರ್ಜುನ ಸಮ್ಮೇತ್ರಿ, ಜಾನಪದ ಆಟಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಮಾಳಿ ವಿ. ಎಸ್., ಜನಪದ ಸಾಹಿತ್ಯ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.