ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಿಳಾ ಚಿಂತನೆಗಳು
Main Article Content
Abstract
ಭಾರತೀಯ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ದ್ವಿತೀಯ ದರ್ಜೆಯ ಪ್ರಜೆಗಳಾಗಿ, ಧಾರ್ಮಿಕ ಕಟ್ಟುಪಾಡುಗಳಿಂದ ಶೋಷಣೆಗೆ ಒಳಗಾಗಿದ್ದ ಮಹಿಳೆಯರ ವಿಮೋಚನೆಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ತಾತ್ವಿಕ ಮತ್ತು ಕಾನೂನಾತ್ಮಕ ನೆಲೆಗಟ್ಟುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ದಲಿತ ಮತ್ತು ಹಿಂದುಳಿದ ವರ್ಗಗಳ ವಿಮೋಚನೆಯ ಜೊತೆಗೆ, ಸಮಸ್ತ ಮಹಿಳಾ ಸಮುದಾಯದ ಶಿಕ್ಷಣ, ಸಮಾನತೆ ಮತ್ತು ಸ್ವಾಭಿಮಾನದ ಬದುಕಿಗಾಗಿ ಅವರು ನಡೆಸಿದ ಮಹಾಡ್ ಸತ್ಯಾಗ್ರಹ ಹಾಗೂ ದೇವದಾಸಿ ಪದ್ಧತಿ ವಿರೋಧಿ ಹೋರಾಟಗಳ ಮಹತ್ವವನ್ನು ಗುರುತಿಸಲಾಗಿದೆ. ಮಾತೃತ್ವ ರಜೆ, ಕುಟುಂಬ ಕಲ್ಯಾಣ ಯೋಜನೆಗಳ ಪ್ರತಿಪಾದನೆ ಹಾಗೂ ಕ್ರಾಂತಿಕಾರಕ ‘ಹಿಂದೂ ಕೋಡ್ ಬಿಲ್’ ಮೂಲಕ ಆಸ್ತಿ, ವಿವಾಹ ಮತ್ತು ದತ್ತು ಹಕ್ಕುಗಳನ್ನು ಕಲ್ಪಿಸಲು ಅವರು ಪಟ್ಟ ಶ್ರಮವನ್ನು ಕಟ್ಟಿಕೊಡಲಾಗಿದೆ. ಸಂವಿಧಾನದ 14, 15, 16ನೇ ಅನುಚ್ಛೇದಗಳ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ನೀಡಿ, ಭಾರತೀಯ ಸ್ತ್ರೀವಾದಿ ಚಿಂತನೆಗೆ ಹಾಗೂ ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ಅವರು ಹಾಕಿಕೊಟ್ಟ ಭದ್ರ ಬುನಾದಿಯನ್ನು ಮರುಮೌಲ್ಯಮಾಪನ ಮಾಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗೋಪಿನಾಥ ಎಂ, (ಅನುವಾದ) ರಾಮ ಮತ್ತು ಕೃಷ್ಣ ಹಿಂದೂಧರ್ಮದ ಒಗಟುಗಳು, ಮೂಲ ನಿವಾಸಿಗಳ ಮಹಾ ಒಕ್ಕೂಟ ಇಂಡಿಯಾ, ಬೆಂಗಳೂರು, 1995.
ಗೋಪಿನಾಥ ಎಂ, ಬುದ್ಧ ಮಾರ್ಗದಿ ನಡೆಯೋಂ ವಿಮೋಚನೆ ಪಡೆಯೋಣ, ದಲಿತ ಸಾಹಿತ್ಯ ಸಂಘಟನೆ, ಬೆಂಗಳೂರು, 1999.
ಕುಮಾರಕಕ್ಕಯ್ಯ, ಚಾತುರ್ವರ್ಣಧರ್ಮದರ್ಶನ, ಲೋಹಿಯಾ ಪ್ರಕಾಶನ, ಬಳ್ಳಾರಿ.
ಜವರಯ್ಯ ಮ.ನ, ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ, ಸಿದ್ಧಾರ್ಥ ಗ್ರಂಥಮಾಲೆ, ಮೈಸೂರು.
ಮಾಲಗತ್ತಿ ಅರವಿಂದ, ದಲಿತಯುಗ ಮತ್ತು ಕನ್ನಡ ಸಾಹಿತ್ಯ, ಚೇತನ ಬುಕ್ ಹೌಸ್, ಮೈಸೂರು, 1999.
ಮಾನೆ ದಯಾನಂದ, ಡಾ.ಅಂಬೇಡ್ಕರ್‌ರ ಹೋರಾಟದ ಪರಿಕಲ್ಪನೆ, ಸಂಕ್ರಮಣ ಪ್ರಕಾಶನ, ಧಾರವಾಡ, 1993.