ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಬೌದ್ಧ ಧರ್ಮ
Main Article Content
Abstract
ಡಾ. ಬಿ. ಆರ್. ಅಂಬೇಡ್ಕರ್ ಅವರು 20ನೇ ಶತಮಾನದ ಪ್ರಮುಖ ಯುಗಪ್ರವರ್ತಕರಾಗಿದ್ದು, ಭಾರತೀಯ ಸಮಾಜದ ಧಾರ್ಮಿಕ ಅಸಮಾನತೆ, ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ವಿರುದ್ಧ ತೀವ್ರ ಹೋರಾಟ ನಡೆಸಿದರು. ವೈದಿಕ ಧರ್ಮವು ಪ್ರತಿಪಾದಿಸಿದ ಶ್ರೇಣಿಕೃತ ವರ್ಣ ವ್ಯವಸ್ಥೆ ಮತ್ತು ಅಮಾನವೀಯ ಪದ್ಧತಿಗಳನ್ನು ಅವರು ಖಂಡಿಸಿದರು. ಹಿಂದೂ ಧರ್ಮದಲ್ಲಿ ಸಮಾನತೆ ಅಸಾಧ್ಯವೆಂದು ಅರಿತ ಡಾ. ಅಂಬೇಡ್ಕರ್ ಅವರು 1935ರಲ್ಲಿ ಯವಲಾ ಮತಾಂತರ ಘೋಷಣೆ ಮಾಡಿದರು. ಸುಮಾರು ಇಪ್ಪತ್ತು ವರ್ಷಗಳ ಅಧ್ಯಯನದ ನಂತರ, ಬೌದ್ಧ ಧರ್ಮದಲ್ಲಿರುವ ಸ್ವಾತಂತ್ರ್ಯ, ಸಹೋದರತ್ವ, ವೈಚಾರಿಕ ಪ್ರಜ್ಞೆ ಮತ್ತು ಸಮಾನತೆಯ ಪರಿಕಲ್ಪನೆಗೆ ಆಕರ್ಷಿತರಾದರು. ಅಂತಿಮವಾಗಿ, ಅಕ್ಟೋಬರ್ 14, 1956ರಂದು ನಾಗಪುರದಲ್ಲಿ ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮವನ್ನು ಸ್ವೀಕರಿಸಿ, 22 ಪ್ರತಿಜ್ಞೆಗಳನ್ನು ಬೋಧಿಸಿದರು. ಈ ಧರ್ಮಾಂತರವು ಭಾರತದಲ್ಲಿ ಧಾರ್ಮಿಕ ಕ್ರಾಂತಿಯನ್ನು ಉಂಟುಮಾಡಿತು ಮತ್ತು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಕರೆ ನೀಡಿತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಡಾ.ಎಚ್.ಟಿ.ಪೋತೆ : ಡಾ. ಅಂಬೇಡ್ಕರ್: ದಲಿತ ಚಳುವಳಿ.
ಮಾನೆ ದಯಾನಂದ : ಬಾಬಾಸಾಹೇಬ ಅಂಬೇಡ್ಕರ್ ಮತ್ತು ದಲಿತ ಚಳುವಳಿ, ಡಾ.ಬಿ.ಆರ್.ಅಂಬೇಡ್ಕರ್ ರಿಸರ್ಚ್ ಸೆಂಟರ್, ಬೆಂಗಳೂರು
ಎನ್.ಮಹೇಶ : ಡಾ.ಬಿ.ಆರ್.ಅಂಬೇಡ್ಕರ್, ಪ್ರಬುದ್ಧ ಪ್ರಕಾಶನ, ಮೈಸೂರು, 2014
ಡಾ.ಜಿ.ಬಿ.ನಂದನ : ಡಾ.ಬಿ.ಆರ್.ಅಂಬೇಡ್ಕರ ಅಸ್ಪೃಶ್ಯತೆಯ ವಿಮೋಚನೆ, ಪ್ರಸಾರಾಂಗ ಧಾರವಾಡ, 2006.
ಡಾ.ಬಿ.ಆರ್.ಅಂಬೇಡ್ಕರ, ಹಿಂದೂ ಧರ್ಮದ ಒಗಟುಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಬರಹ ಮತ್ತು ಭಾಷಣಗಳು (1ರಿಂದ4 ಸಂಪುಟಗಳು), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಚಿನ್ನಸ್ವಾಮಿ ಎನ್. ಸೋಸಲೆ : ಅಂಬೇಡ್ಕರ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ, ಯಾಜಿ ಪ್ರಕಾಶನ, ಹೊಸಪೇಟೆ, 2012
ಸದಾಶಿವ ಮರ್ಜಿ : ನಾನು ಹಿಂದೂ ಆಗಿ ಸಾಯಲಾರೆ ಡಾ.ಅಂಬೇಡ್ಕರ್, ಲಡಾಯಿ ಪ್ರಕಾಶನ, ಗದಗ, 2017.