ಅಂಬಿಕಾತನಯದತ್ತ ಅವರ 'ನಾನು ಬಡವಿ' ಕವನದಲ್ಲಿ ಒಲವಿನ ಶ್ರೀಮಂತಿಕೆ

Main Article Content

ಹೇಮಾವತಿ ಎಸ್. ಆರ್.

Abstract

ದ.ರಾ. ಬೇಂದ್ರೆಯವರ ಕವನಗಳು ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿವೆ. ಅವರ 'ನಾನು ಬಡವಿ' ಕವನವು ಸರಳವೂ ಸುಂದರವೂ ಆಗಿದ್ದು, ಪ್ರೀತಿಯ ಸಾರ್ಥಕತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಪ್ರೀತಿ ಎಂಬುದು ಮನಸಿನೊಳಗಿನ ಶ್ರೀಮಂತಿಕೆಯೇ ಹೊರತು ಲೌಕಿಕ ಸಿರಿತನವಲ್ಲ ಎಂಬ ಉದಾತ್ತ ವಿಚಾರವನ್ನು ಈ ಕವಿತೆ ಸ್ಪಷ್ಟಪಡಿಸುತ್ತದೆ. ಬಡತನದ ಬೇಗೆಯನ್ನು ಬದಿಗಿಟ್ಟು, ಒಲವೇ ಬದುಕು ಎಂದು ನಂಬುವ ನಾಯಕ-ನಾಯಕಿಯರ ಅಕೃತ್ರಿಮ ಪ್ರೇಮವನ್ನು ಇಲ್ಲಿ ವರ್ಣಿಸಲಾಗಿದೆ. ಗಂಡು-ಹೆಣ್ಣಿನ ನಡುವೆ ಹುಟ್ಟುವ ಪ್ರೀತಿ, ಪರಸ್ಪರ ಸ್ಪರ್ಶ, ಪ್ರಣಯ ಮತ್ತು ದಾಂಪತ್ಯದ ಮೌಲ್ಯಗಳನ್ನು ಕಾವ್ಯಮಯವಾಗಿ ಕಟ್ಟಿಕೊಡಲಾಗಿದೆ. ಲೌಕಿಕ ಶ್ರೀಮಂತಿಕೆಗಿಂತ ಒಲವಿನ ಶ್ರೀಮಂತಿಕೆ ಮಿಗಿಲಾದುದು ಎಂಬುದನ್ನು ಕವಿ ಉತ್ತರ ಕರ್ನಾಟಕದ ಆಡುಮಾತಿನ ಸೊಗಡಿನಲ್ಲಿ ವಿವರಿಸಿದ್ದಾರೆ.

Article Details

Section

Research Articles

Author Biography

ಹೇಮಾವತಿ ಎಸ್. ಆರ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎ.ವಿ.ಕೆ. ಮಹಿಳಾ ಕಾಲೇಜು.

How to Cite

ಹೇಮಾವತಿ ಎಸ್. ಆರ್. (2023). ಅಂಬಿಕಾತನಯದತ್ತ ಅವರ ’ನಾನು ಬಡವಿ’ ಕವನದಲ್ಲಿ ಒಲವಿನ ಶ್ರೀಮಂತಿಕೆ. ಅಕ್ಷರಸೂರ್ಯ (AKSHARASURYA), 2(08), 110 to 114. https://aksharasurya.com/index.php/latest/article/view/204

References

ಒಲವೆ ನಮ್ಮ ಬದುಕು, ದ.ರಾ. ಬೇಂದ್ರೆ.

ಡಾ. ಜಿ.ಎಸ್. ಸಿದ್ದಲಿಂಗಯ್ಯ ಅವರು ದ.ರಾ. ಬೇಂದ್ರೆಯವರನ್ನು ಕುರಿತು ಬರೆದಿರುವ ಲೇಖನ.

ರತ್ನ ಕೆ. ಭಟ್, ತಲಂಜೇರಿ (ಸಂಗ್ರಹ: ವಿವಿದ ಮೂಲಗಳಿಂದ).

Most read articles by the same author(s)