ಡಾ. ಹೆಬ್ಬಾಲೆ ಕೆ. ನಾಗೇಶ ಅವರ ಬಾಡಿಗೆದೇವರು ಕಥೆ: ದಲಿತ ವಿಮರ್ಶೆ

Authors

  • VEERESHA N. S.

Keywords:

ದಲಿತ, ವರ್ಗ, ಸಂಘರ್ಷ, ಶಿಕ್ಷಣ, ದೇವರು, ಹಬ್ಬ

Abstract

ಡಾ. ಹೆಬ್ಬಾಲೆ ಕೆ. ನಾಗೇಶ ಅವರು ಕೊಡಗು ಮೂಲದವರು. ಈಗ ಹೊಸಪೇಟೆಯಲ್ಲಿ ನೆಲೆಸಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಸಮಕಾಲೀನ ದಲಿತ ಕಥೆಗಾರರಲ್ಲಿ ಒಬ್ಬರು. ಇವರ ಬಾಡಿಗೆದೇವರು ಕಥಾ ಸಂಕಲನದಲ್ಲಿ 5 ಕಥೆಗಳಿವೆ. ಬಾಡಿಗೆ ದೇವರು ಕಥೆಯು ಕೊಡಗಿನ ದಲಿತರ ಬದಕನ್ನು ಎಳೆ ಎಳೆಯಾಗಿ ಚಿತ್ರಿಸುತ್ತದೆ. ಸವರ್ಣೀಯರು ಮತ್ತು ದಲಿತರ ನಡುವಿನ ಸಂಘರ್ಷವು ಕಥಾವಸ್ತುವಾಗಿದೆ. ದಲಿತ ಯುವಕರು ಸರಕಾರದ ಸೌಲಭ್ಯ ಪಡೆದು ಶಿಕ್ಷಣ ಪಡೆಯದೆ ಕೂಲಿ ಆಳುಗಳಾಗಿ ದುಡಿಯುವುದು, ಕೆಲಸ ಸಿಗದಿದ್ದಾಗ ಕುಡಿಯುವುದು, ಇಸ್ಪೀಟ್ ಆಡುವುದು ಮುಂತಾದ ದುಶ್ಚಟಗಳಿಗೆ ಬಲಿಯಾಗವುದನ್ನು ಮನಕಲಕುವಂತೆ ಚಿತ್ರಿಸಿದ್ದಾರೆ. ಉಪ್ಪಾರ ಗೆಡ್ಡೆಶೆಟ್ಟಿಯು ಊರ ಜನರಿಗೆ ದೇವರ ಹೆಸರಿನಲ್ಲಿ ಮಾಡುವ ಮೋಸವನ್ನು ಬಯಲಿಗೆಳೆಯುವಷ್ಟು ದಲಿತರು ಬಲಿಷ್ಟರು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳಲು ಬಯಸುವ ಹಿರಿಯ ತಲೆಗಳು, ಅದನ್ನು ವಿರೋಧಿಸುವ ಯುವ ಮನಸ್ಸುಗಳ ಆತುರದ ನಿರ್ಧಾರ, ಅದರಿಂದ ಮೇಲ್ವರ್ಗದಿಂದ ಬಂದ ಬಹಿಷ್ಕಾರ, ದಲಿತರನ್ನು ಏಕಾಂಗಿಯಾಗಿಸಿದ ಪರಿಣಾಮ, ಪಕ್ಕದೂರಿಂದ ಮಾರೆವ್ವ ಎಂಬ ದೇವರನ್ನು ಬಾಡಿಗೆ ತಂದು ಹಬ್ಬ ಆಚರಿಸುವ ರೋಚಕತೆ ಹೃದಯಕಲಕುವಂತಿದೆ.

Downloads

Published

05.01.2024

How to Cite

VEERESHA N. S. (2024). ಡಾ. ಹೆಬ್ಬಾಲೆ ಕೆ. ನಾಗೇಶ ಅವರ ಬಾಡಿಗೆದೇವರು ಕಥೆ: ದಲಿತ ವಿಮರ್ಶೆ. AKSHARASURYA, 3(01), 137–146. Retrieved from https://aksharasurya.com/index.php/latest/article/view/304

Issue

Section

ಪುಸ್ತಕ ವಿಮರ್ಶೆ. | BOOK REVIEW.