ಸರಳತೆಯೇ ಸಮಭಾವ
Main Article Content
Abstract
ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಸರಳತೆ ಮತ್ತು ವೈರಾಗ್ಯದ ಮಹತ್ವವನ್ನು ವಿವಿಧ ಕಾಲಘಟ್ಟಗಳ ಚಿಂತಕರ ದೃಷ್ಟಿಕೋನದಲ್ಲಿ ವಿಶ್ಲೇಷಿಸಲಾಗಿದೆ. ಶಂಕರಾಚಾರ್ಯರ 'ಶಿವ ಅಪರಾಧ ಕ್ಷಮಾಪಣಾ ಸ್ತೋತ್ರ'ದಲ್ಲಿನ ನಶ್ವರತೆಯ ಪರಿಕಲ್ಪನೆ, ಆದಿಕವಿ ಪಂಪನ 'ಆದಿಪುರಾಣ'ದಲ್ಲಿ ಬರುವ ಭರತ-ಬಾಹುಬಲಿ ಪ್ರಸಂಗದಲ್ಲಿನ ತ್ಯಾಗಭಾವವನ್ನು ಚರ್ಚಿಸಲಾಗಿದೆ. ಹಾಗೆಯೇ, 12ನೇ ಶತಮಾನದ ವಚನಕಾರರಾದ ಮೋಳಿಗೆ ಮಾರಯ್ಯನವರ ವಚನಗಳ ಮೂಲಕ ಐಶ್ವರ್ಯದ ಅನಿತ್ಯತೆ ಮತ್ತು ಕಾಯಕ ನಿಷ್ಠೆಯ ಸಂದೇಶವನ್ನು ವಿವರಿಸಲಾಗಿದೆ. ಕುವೆಂಪು ಅವರ 'ಅನಿಕೇತನ' ಪರಿಕಲ್ಪನೆಯನ್ನು ಉಲ್ಲೇಖಿಸುತ್ತಾ, ಭೌತಿಕ ಆಸೆಗಳನ್ನು ತ್ಯಜಿಸಿ ಸತ್ಯಸಂಕಲ್ಪದ ಜೀವನ ಸಾಗಿಸುವುದೇ ಸಾರ್ಥಕತೆ ಎಂಬುದನ್ನು ನಿರೂಪಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಎಲ್. ಗುಂಡಪ್ಪ (ಸಂ): ಆದಿಪುರಾಣ ಸಂಗ್ರಹ, ಪದ್ಯ ಸಂಖ್ಯೆ 440, ಪು.ಸಂ. 108, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು 2016.
ಡಾ. ಎಂ. ಎಂ. ಕಲಬುರ್ಗಿ (ಪ್ರ.ಸಂ): ಬಸವಯುಗದ ವಚನ ಮಹಾಸಂಪುಟ: 1, ಸಮಗ್ರ ವಚನ ಸಂಪುಟ: ಎಂಟು, ಸಂಕೀರ್ಣ ವಚನ ಸಂಪುಟ -3, ವಚನ ಸಂಖ್ಯೆ 1504, ಪು.ಸಂ. 1523, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2016.
ಅದೇ, ಸಮಗ್ರ ವಚನ ಸಂಪುಟ: ಎರಡು, ಅಲ್ಲಮಪ್ರಭುದೇವರ ವಚನ ಸಂಪುಟ, ವಚನ ಸಂಖ್ಯೆ 15, ಪು.ಸಂ. 149, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2016.