ವಚನಗಳಲ್ಲಿ ಅಂತರಂಗ - ಬಹಿರಂಗ ಶುದ್ಧಿ

Main Article Content

ಹೆಚ್. ಎಂ. ಮಲ್ಲಿಕಾರ್ಜುನ

Abstract

12ನೇ ಶತಮಾನದ ಶರಣ ಚಳುವಳಿಯು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಬಸವಾದಿ ಶರಣರು ಕೇವಲ ಬಾಹ್ಯ ಆಚರಣೆಗಿಂತ ಆಂತರಿಕ ಭಾವಶುದ್ಧಿಯೇ ಮುಖ್ಯವೆಂದು ಪ್ರತಿಪಾದಿಸಿದ್ದಾರೆ. ವಚನಗಳಲ್ಲಿ ಅಂತರಂಗ ಮತ್ತು ಬಹಿರಂಗಗಳೆರಡೂ ಒಂದಕ್ಕೊಂದು ಪೂರಕವಾಗಿರಬೇಕೆಂಬ ಆಶಯವಿದೆ. ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಮತ್ತು ಉರಿಲಿಂಗಪೆದ್ದಿಯಂತಹ ವಚನಕಾರರು ತಮ್ಮ ವಚನಗಳ ಮೂಲಕ ಈ ತತ್ವವನ್ನು ವಿಶ್ಲೇಷಿಸಿದ್ದಾರೆ. ಕಾಯಕ ಮತ್ತು ದಾಸೋಹದ ಮೂಲಕ ವ್ಯಕ್ತಿ ತನ್ನ ಅಹಂಕಾರವನ್ನು ತೊರೆದು ದೈವತ್ವದ ಕಡೆಗೆ ಸಾಗುವ ಮಾರ್ಗವನ್ನು ಇಲ್ಲಿ ವಿವರಿಸಲಾಗಿದೆ. ನಡೆ ಮತ್ತು ನುಡಿಯಲ್ಲಿ ಏಕತಾನತೆ ಕಾಯ್ದುಕೊಳ್ಳುವುದು ಶರಣರ ಪ್ರಮುಖ ಸಿದ್ಧಾಂತವಾಗಿದೆ.

Article Details

Section

Research Articles

Author Biography

ಹೆಚ್. ಎಂ. ಮಲ್ಲಿಕಾರ್ಜುನ

ಹುಸ್ಕೂರು ಗ್ರಾಮ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.

References

ಶ್ರೀ ಸಿದ್ದೇಶ್ವರ ಸ್ವಾಮಿಗಳು: ಅಲ್ಲಮಪ್ರಭುದೇವರ ವಚನ-ನಿರ್ವಚನ: ವಚನ ಸಂಖ್ಯೆ 1. ಪು.ಸಂ. 3, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, 2001.

ಡಾ. ಎಂ. ಎಂ. ಕಲಬುರ್ಗಿ (ಪ್ರ.ಸಂ), ಡಾ. ವೀರಣ್ಣ ರಾಜೂರ (ಸಂ): ಬಸವಯುಗದ ವಚನ ಮಹಾಸಂಪುಟ: 1, ಸಮಗ್ರ ವಚನಸಂಪುಟ 5, ಶಿವಶರಣೆಯರ ವಚನ ಸಂಪುಟ, ವಚನ ಸಂಖ್ಯೆ 302. ಪು.ಸಂ. 817, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು 2016.

ಡಾ. ಎಂ. ಎಂ. ಕಲಬುರ್ಗಿ (ಪ್ರ.ಸಂ): ಬಸವಯುಗದ ವಚನ ಮಹಾಸಂಪುಟ: 1, ಸಮಗ್ರ ವಚನಸಂಪುಟ: ಆರು, ಸಂಕೀರ್ಣ ವಚನಸಂಪುಟ: ಒಂದು, ವಚನ ಸಂಖ್ಯೆ - 1265, ಪು.ಸಂ. 1077, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2016.

ಡಾ. ಎಂ. ಎಂ. ಕಲಬುರ್ಗಿ (ಪ್ರ.ಸಂ): ಬಸವಯುಗದ ವಚನ ಮಹಾಸಂಪುಟ: 1, ಸಮಗ್ರ ವಚನಸಂಪುಟ: ಒಂದು, ಬಸವಣ್ಣನವರ ವಚನಸಂಪುಟ ವಚನ 702-677, ಪು.ಸಂ. 62, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2016.

ಡಾ. ಎಂ. ಎಂ. ಕಲಬುರ್ಗಿ (ಪ್ರ.ಸಂ): ಬಸವೋತ್ತರಯುಗದ ವಚನ ಮಹಾಸಂಪುಟ: 2, ಸಮಗ್ರ ವಚನಸಂಪುಟ -14, ಸಂಕೀರ್ಣ ವಚನ ಸಂಪುಟ -9, ವಚನ ಸಂಖ್ಯೆ- 308, ಪು.ಸಂ. 1043, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2016.