ಸ್ವಾತಂತ್ರ್ಯ ಹೋರಾಟಗಾರ ಲಕ್ಷ್ಮಣ ಡಾಂಗೆ

Main Article Content

ವಿರೂಪಾಕ್ಷಿ ಎನ್.ಬಿ.

Abstract

ಅಣ್ಣಪ್ಪ ಡಾಂಗೆ ಅವರು ಬೆಳಗಾವಿಯ ನೆಲದಮರೆಯ ನಿಧನದಂತೆ ಜೀವಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ರಾಯಭಾಗ ತಾಲೂಕಿನ ಇಟನಾಳ ಗ್ರಾಮದಲ್ಲಿ ಜನಿಸಿದ ಅವರು ಸ್ವಾತಂತ್ರ್ಯ ಹೋರಾಟದ ಬರೆಹಗಳನ್ನು ಓದಿ ಪ್ರೇರಿತರಾಗಿ ಏಳನೆಯ ತರಗತಿಯಲ್ಲಿ ಓದುತ್ತಿರುವಾಗಲೇ ರಾಷ್ಟ್ರೀಯ ಚಳುವಳಿಗಳಲ್ಲಿ ಭಾಗವಹಿಸಿ, ರಾಷ್ಟ್ರೀಯ ಕಾಂಗ್ರೆಸ್ಸಿನ ಸಕ್ರಿಯ ಕಾರ್ಯಕರ್ತರಾದರು. ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಸುಭಾಸ್ ಚಂದ್ರಬೋಸ್ ಮುಂತಾದ ಮಹನೀಯರ ಆದರ್ಶ ಜೀವನವೇ ಡಾಂಗೆ ಅವರಿಗೆ ಮಾರ್ಗದರ್ಶಿಯಾಯಿತು. ಹಿಡಕಲ್ಲು ಗ್ರಾಮದಲ್ಲಿ ರಾಮಪ್ಪ ಕಂಕಣವಾಡಿ ಮತ್ತು ತರುಣ ಹೋರಾಟಗಾರರಿಂದ ಸಂಘಟಿತಗೊಂಡ ಚಳಿವಳಿಕಾರರ ಗುಂಪನ್ನು ಸೇರಿ ಆ ಹೋರಾಟಗಾರರು ರೂಪಿಸಿದ ಎಲ್ಲಾ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸಿದರು. ಹಳ್ಳಿಗಳನ್ನು ಸುತ್ತಿ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸುತ್ತಿದ್ದರು. ಚಳುವಳಿಗಾರರ ಗುಂಪಿನ ಜೊತೆಗೂಡಿ ಮಹಾಲಿಂಗಪೂರ ಪೋಸ್ಟ್ ಆಫೀಸನ್ನು ಸುಟ್ಟು ಹಾಕುವ, ಕುಡಚಿಜಮಖಂಡಿ ರಸ್ತೆಯ ಹಾರೂಗೇರಿ ಕ್ರಾಸ್ ಮತ್ತು ಯಬರಟ್ಟಿ ಮಧ್ಯದ ಟೆಲಿಗ್ರಾಫ್ ತಂತಿಯನ್ನು ಕತ್ತರಿಸುವ, ಯಲ್ಪಾರಟ್ಟಿ ಬಂಗಲೆ, ಸುಲದಾಳ ರೇಲ್ವೇ ಸ್ಟೇಷನ್ ಹಾಗೂ ರಾಯಬಾಗ ರೇಲ್ವೇ ಸ್ಟೇಷನ್ ಸುಡುವ ಕಾರ್ಯದಲ್ಲಿಯೂ ಭಾಗಿಗಳಾಗಿದ್ದರು. ಹಾಗಾಗಿ ಸಾಕಷ್ಟು ಬಾರಿ ಲಕ್ಷ್ಮಣ ಅಣ್ಣಪ್ಪ ಡಾಂಗೆ ಅವರು ಸೆರೆಮನೆ ವಾಸ ಅನುಭವಿಸಿದರು.

Article Details

Section

Research Articles

Author Biography

ವಿರೂಪಾಕ್ಷಿ ಎನ್.ಬಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.

How to Cite

ವಿರೂಪಾಕ್ಷಿ ಎನ್.ಬಿ. (2025). ಸ್ವಾತಂತ್ರ್ಯ ಹೋರಾಟಗಾರ ಲಕ್ಷ್ಮಣ ಡಾಂಗೆ. ಅಕ್ಷರಸೂರ್ಯ (AKSHARASURYA), 9(06), 49 to 57. https://aksharasurya.com/index.php/latest/article/view/1700

References

ನಾರಾಯಣರಾವ್ ವಿ. ಎಸ್., ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀಸಾಮಾನ್ಯ, 1978, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಬಾಲಾಜಿ ಯ. ದೇಶಪಾಂಡೆ, ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಮರ ಸಂಪುಟ 12, 1973, ಬೆಳಗಾವಿ ಜಿಲ್ಲೆಯ ಖಾದಿ ಗ್ರಾಮೋದ್ಯೋಗ ಸಂಘ, ಬೆಳಗಾವಿ

ಮನೋಜ ಪಾಟೀಲ(ಸಂ), ಬೆಳಗಾವಿ ಜಿಲ್ಲೆಯ ಮಾರ್ಗದರ್ಶಿ, 1987, ಪವನ ಪ್ರಕಾಶನ, ಬೆಳಗಾವಿ

ಮೃತ್ಯುಂಜಯ ರುಮಾಲೆ, ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕಬೆಳಗಾವಿ, 2022, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

ರಾಜಣ್ಣ ತಿ. ಎಸ್.(ಸಂ), ಬೆಳಗಾವಿ ಜಿಲ್ಲೆಯ ಲಾವಣಿಗಳು, 1973, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು

ಸರೋಜಿನಿ ಚವರಾಲ, ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, 1988, ಶ್ರೀ ಜೆ.ಗಿ. ಪ್ರಸಾರಕ ಮಂಡಳ, ಮೂರುಸಾವಿರಮಠ, ಹುಬ್ಬಳ್ಳಿ

ಸೂರ್ಯನಾಥ ಕಾಮತ್, ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು ಸಂಪುಟ3, 1974, ಗೀತಾ ಬುಕ್‌ಹೌಸ್, ಮೈಸೂರು

Most read articles by the same author(s)