ಜಾತಿ ವಿನಾಶ: ತೇಜಸ್ವಿಯವರ ವಿಚಾರಗಳು

Main Article Content

ಸಂತೋಷ ಉಂಡಾಡಿ
ಎಸ್.ಎಂ. ಗಂಗಾಧರಯ್ಯ

Abstract

ಜಾತಿಯು ಭಾರತ ಸಮಾಜದ ಒಂದು ಬಹುದೊಡ್ಡ ಕಗ್ಗಂಟಾಗಿದ್ದು, ಅನೇಕ ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಅದು ದೌರ್ಜನ್ಯ ಮತ್ತು ಶೋಷಣೆಯ ಶಸ್ತ್ರವು ಆಗಿ ಬಳಕೆಯಾಗಿದೆ. ಭಾರತದ ಚರಿತ್ರೆಯನ್ನು ಅವಲೋಕಿಸಿದಾಗ ಅನೇಕ ಮಹನೀಯರು ಜಾತಿಯನ್ನು, ಅಸೃಶ್ಯತೆಯನ್ನು ಹಿಂದೂ ಧರ್ಮದಿಂದ ಹೋಗಲಾಡಿಸಲು ಶತಶತಮಾನಗಳಿಂದ ಪ್ರಯತ್ನ ಮಾಡಿದ್ದಾರೆ. ಜಾತಿಯೆಂಬುದು ಹಿಂದೂ ಧರ್ಮಕ್ಕೆ ಅಂಟಿದ ಕಳಂಕವಾಗಿದೆ ಎಂದು ಅನೇಕರು ಟೀಕಿಸಿ, ಅದನ್ನು ಸರಿಪಡಿಸಲು ನಿರಂತರ ಹೋರಾಟ ನಡೆಸಿದರು. ಆಧುನಿಕ ಕಾಲದಲ್ಲಿ ಕನ್ನಡದ ಅನೇಕ ಲೇಖಕರು, ಕವಿಗಳು ತಮ್ಮ ಕಾವ್ಯ, ಕಥೆ, ಕಾದಂಬರಿ, ನಾಟಕ ಮತ್ತು ಲೇಖನಗಳ ಮೂಲಕ ಜಾತಿ ಕುರಿತು, ಅದು ಉಂಟುಮಾಡಿರುವ ಅನಾಹುತಗಳನ್ನು ಕುರಿತು ಮತ್ತು ಬಹುಮುಖ್ಯವಾಗಿ ಜಾತಿ ವಿನಾಶ ಮತ್ತು ಜಾತಿಯನ್ನು ಮೀರುವ ಕುರಿತು ಬರೆದರು, ಚರ್ಚಿಸಿದರು.
ತೇಜಸ್ವಿಯವರು ತಮ್ಮ ಜೀವಿತಾವಧಿಯಲ್ಲಿ ಮಂಡಿಸಿದ ಅನೇಕ ಚಿಂತನೆಗಳನ್ನು ಹೊಸ ವಿಚಾರಗಳು ಎಂಬ ಬೃಹತ್ ಗ್ರಂಥದಲ್ಲಿ ಸಂಕಲಿಸಲಾಗಿದೆ. ಈ ಕೃತಿಯನ್ನು ಅವರ ಅನುಪಸ್ಥಿತಿಯಲ್ಲಿ ನಂತರ ಪ್ರಕಟಿಸಲಾಗಿದೆ. ತೇಜಸ್ವಿಯವರು ಯಾವುದೇ ವಿಷಯವನ್ನು ವಿನೂತನವಾಗಿ ವಿಶ್ಲೇಷಿಸುತ್ತಿದ್ದ ರೀತಿ ಮತ್ತು ಅಪೂರ್ವ ಒಳನೋಟಗಳಿಂದ ಸಮಸ್ಯೆಯನ್ನು ನೋಡುತ್ತಿದ್ದ ಬಗೆ ಒಬ್ಬ ಲೇಖಕನಾಗಿ ಅವರಿಗಿದ್ದ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಈ ಕೃತಿಯಲ್ಲಿ ತೇಜಸ್ವಿಯವರ ವಿಚಾರಗಳನ್ನು ಅರ್ಥಶಾಸ್ತ್ರ, ರಾಜಕೀಯ, ಭಾಷೆ ಮತ್ತು ಸಾಹಿತ್ಯ ವಿಮರ್ಶೆ, ರೈತ ಹೋರಾಟ, ಧರ್ಮ-ಸಂಸ್ಕೃತಿ, ಸಂದರ್ಶನಗಳು, ಜಾತಿ ವಿನಾಶ, ಪರಿಸರ ಕಾಳಜಿ ಮತ್ತು ಇತ್ಯಾದಿ ಎಂಬ ಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಲಾಗಿದೆ. ಜಾತಿ ವಿನಾಶ ಎಂಬ ಮುಖ್ಯ ಶೀರ್ಷಿಕೆಯ ಅಡಿಯಲ್ಲಿ ಒಟ್ಟು ಆರು ಲೇಖನಗಳಿವೆ. ಈ ಆರು ಲೇಖನಗಳಲ್ಲಿ ಮೀಸಲಾತಿ, ಜಾತಿ ವಿನಾಶ ಮತ್ತು ಅಂತರ್ಜಾತೀಯ ವಿವಾಹ ಕುರಿತು ತೇಜಸ್ವಿಯವರ ಚಿಂತನೆಗಳನ್ನು ಕ್ರೋಡೀಕರಿಸಲಾಗಿದೆ.

Article Details

Section

Research Articles

Author Biographies

ಸಂತೋಷ ಉಂಡಾಡಿ

ಸಂಶೋಧನಾ ವಿದ್ಯಾರ್ಥಿ ಹಾಗೂ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿ.

ಎಸ್.ಎಂ. ಗಂಗಾಧರಯ್ಯ

ಪ್ರಾಧ್ಯಾಪಕರು ಹಾಗೂ ಮಾರ್ಗದರ್ಶಕರು, ಫ. ಗು. ಹಳಕಟ್ಟಿ ಸ್ನಾತಕೋತ್ತರ ಅಧ್ಯಯನ ಕೇಂದ್ರ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

How to Cite

ಸಂತೋಷ ಉಂಡಾಡಿ, & ಎಸ್.ಎಂ. ಗಂಗಾಧರಯ್ಯ. (2025). ಜಾತಿ ವಿನಾಶ: ತೇಜಸ್ವಿಯವರ ವಿಚಾರಗಳು. ಅಕ್ಷರಸೂರ್ಯ (AKSHARASURYA), 9(02), 151 to 156. https://aksharasurya.com/index.php/latest/article/view/1609

References

ಎಚ್ ನಾಯಕಜಿ., (2011) ಮೌಲ್ಯ ಮಾರ್ಗ: ಸಂಪುಟ 1, ಸಿರಿವರ ಪ್ರಕಾಶನ, ಬೆಂಗಳೂರು.

ಕೆ.ವಿ.ಎನ್., (2020) ತೊಂಡುಮೇವು :ಕಂತೆ ಮೂರು, ಪ್ರಗತಿಗ್ರಾಫಿಕ್ಸ್, ಬೆಂಗಳೂರು.

ವಡ್ಡು ಚಂದ್ರಕಾಂತ್., (2024) ವಿಸ್ಮಯ ವಿಮರ್ಶೆ, ಸಮಾಜಮುಖಿ ಪ್ರಕಾಶನ, ಬೆಂಗಳೂರು.

ನರೇಂದ್ರ ರೈ ದೇರ್ಲ, (2024)., ಪೂರ್ಣಚಂದ್ರ ತೇಜಸ್ವಿ, ಕನಸು ಪ್ರಕಾಶನ, ಪುತ್ತೂರು.

ತರೀಕೆರೆ ರಹಮತ್., (2016)., ಕತ್ತಿಯಂಚಿನ ದಾರಿ, ಅಭಿನವ, ಬೆಂಗಳೂರು.

ಎಸ್.ಆರ್, ವಿಜಯಶಂಕರ., (2019), ಅಪ್ರಮೇಯ, ಸಪ್ನ ಬುಕ್ ಹೌಸ್, ಬೆಂಗಳೂರು.

Most read articles by the same author(s)