ಕರ್ವಾಲೊ ಮತ್ತು ಸಾಮಾಜಿಕ ವಾಸ್ತವಗಳು
Main Article Content
Abstract
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿರುವ ಕರ್ವಾಲೊ ಕಾದಂಬರಿ 1980ರಲ್ಲಿ ರಚನೆಯಾಗಿ, ಇಂದಿನವರೆಗೆ 70 ಮರು ಮುದ್ರಣಗಳನ್ನು ಕಂಡಿದೆ. ಹಲವಾರು ಭಾರತೀಯ ಮತ್ತು ಇತರೆ ದೇಶಗಳ ಭಾಷೆಗೆ ಅನುವಾದಗೊಂಡಿದೆ. ತೇಜಸ್ವಿಯವರ ಎಲ್ಲಾ ಕೃತಿಗಳು ಪರಿಸರದ ಆಗುಹೋಗುಗಳನ್ನು ಮತ್ತಿತರ ಸಂಗತಿಗಳನ್ನು ಅತ್ಯಂತ ಸಹಜವಾದ ವಾಸ್ತವ ನೆಲೆಗಟ್ಟಿನಲ್ಲಿ ನಿರೂಪಿಸುತ್ತವೆ. ಈ ಕಾದಂಬರಿ ತನ್ನ ವಿಶೇಷವಾದ ಕಥೆ ಮತ್ತು ನಿರೂಪಣ ಶೈಲಿಯಿಂದ ಕನ್ನಡ ಸಾಹಿತ್ಯದಲ್ಲಿ ಭಿನ್ನವಾಗಿ ನಿಲ್ಲುತ್ತದೆ.
ತೇಜಸ್ವಿಯವರು ತಮ್ಮ ಕೃತಿಗಳಲ್ಲಿ ಉತ್ಪ್ರೇಕ್ಷಿತವಾದ, ಅತೀ ಕಾಲ್ಪನಿಕವಾದ ಕಥೆಗಳನ್ನು ಹೇಳುವುದಿಲ್ಲ. ಅವರ ಕೃತಿಗಳಲ್ಲಿ ಹೆಚ್ಚಾಗಿ ನಮಗೆ ಕಾಣುವುದು, ಸಮಾಜದ ಯಥಾವತ್ತಾದ ಚಿತ್ರಣ. ಸಮಾಜದ ಅಂಕುಡೊಂಕುಗಳನ್ನು, ಓರೆಕೋರೆಗಳನ್ನು ಅವರು ಯಾವುದೇ ಬಿಡೆಯಿಲ್ಲದೇ ಚಿತ್ರಿಸುತ್ತಾರೆ. ಸಮಾಜದ ಬದುಕನ್ನು ತದ್ರೂಪವಾಗಿ ಸಾಹಿತ್ಯದಲ್ಲಿ ತರುವ ಮೂಲಕ ಅಲ್ಲಿಯೆ ಒಂದು ತಮಾಷೆಯನ್ನು, ಹಾಸ್ಯವನ್ನು, ವ್ಯಂಗ್ಯವನ್ನು ಸೃಷ್ಟಿಸುತ್ತಾರೆ.
ಕರ್ವಾಲೊ ಕಾದಂಬರಿಯು ಜೀವ ವಿಕಾಸದ ನೆಲೆಯನ್ನು ಶೋಧಿಸುವ ಮನುಷ್ಯನ ವಿಫಲ ಪ್ರಯತ್ನದ ಕಥೆಯನ್ನು ಹೇಳುವ ಕೃತಿಯಾಗಿದೆ. ವಿಜ್ಞಾನದ ಮೂಲಕ ಜೀವನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವ ಹಂಬಲವನ್ನು ಇದು ಪ್ರಕಟಿಸುತ್ತದೆ. ಈ ಕಾದಂಬರಿಯ ಮೂಲ ನೆಲೆ ಹುಡುಕಾಟವೇ. ಹುಡುಕಾಟ ಮನುಷ್ಯನ ಆದಿಮ ಪ್ರವೃತ್ತಿಗಳಲ್ಲಿ ಒಂದು. ಮನುಷ್ಯ ಭೂಮಿಯ ಮೇಲೆ ಅಸ್ತಿತ್ವಪಡೆದಾಗಿನಿಂದ ಸದಾ ಕುತೂಹಲಿಯಾಗಿ ತನ್ನ ಹುಡುಕುವ ಮೂಲಭೂತ ಗುಣವನ್ನು ಕಾಪಾಡಿಕೊಂಡಿದ್ದಾನೆ. ಇಲ್ಲಿ ಕರ್ವಾಲೊ ಕೂಡ ಮಂದಣ್ಣ, ನಿರೂಪಕರು ಮತ್ತು ತನ್ನ ಗೆಳೆಯರ ಬಳಗದೊಂದಿಗೆ ಹಾರುವ ಓತಿಯನ್ನು ಹುಡುಕುವ ಕಥೆಯು ನಮಗೆ ತೆರೆದುಕೊಳ್ಳುತ್ತದೆ. ಅದರ ಮಧ್ಯದಲ್ಲಿ ಸಾಮಾಜಿಕ ಬದುಕು, ರಾಜಕೀಯ, ಮದುವೆ ಪ್ರಸಂಗ, ಪ್ರಕೃತಿಯ ವಿನಾಶ ಮುಂತಾದ ಅಂಶಗಳು ಕಾಣಿಸಿಕೊಳ್ಳುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾಯಕ ಜಿ.ಎಚ್., (2011), ಮೌಲ್ಯ ಮಾರ್ಗ: ಸಂಪುಟ 1, ಸಿರಿವರ ಪ್ರಕಾಶನ, ಬೆಂಗಳೂರು.
ಕೆ.ವಿ.ಎನ್., (2020), ತೊಂಡುಮೇವು: ಕಂತೆ ಮೂರು, ಪ್ರಗತಿ ಗಾಫಿಕ್ಸ್, ಬೆಂಗಳೂರು.
ಚಂದ್ರಕಾಂತ ವಡ್ಡು (ಸಂ), (2024), ವಿಸ್ಮಯ ವಿಮರ್ಶೆ, ಸಮಾಜಮುಖಿ ಪ್ರಕಾಶನ, ಬೆಂಗಳೂರು.
ನರೇಂದ್ರ ರೈ ದೇರ್ಲ, (2024), ಪೂರ್ಣಚಂದ್ರ ತೇಜಸ್ವಿ, ಕನಸು ಪ್ರಕಾಶನ, ಪುತ್ತೂರು.
ರಹಮತ್ ತರೀಕೆರೆ, (2016), ಕತ್ತಿಯಂಚಿನ ದಾರಿ, ಅಭಿನವ, ಬೆಂಗಳೂರು.
ವಿಜಯಶಂಕರ ಎಸ್.ಆರ್., (2019), ಅಪ್ರಮೇಯ, ಸಪ್ನ ಬುಕ್ ಹೌಸ್, ಬೆಂಗಳೂರು.