ಶಾಹುಮಹಾರಾಜರ ಸುಧಾರಣೆಗಳು ಹಾಗೂ ಪರಿಣಾಮಗಳು

Main Article Content

ಅರುಣ ಚಿ. ಕಲ್ಲೋಳಿಕರ

Abstract

ಜಗತ್ತಿನಲ್ಲಿ ಗೌತಮ ಬುದ್ಧನಿಂದ ಪ್ರಾರಂಭವಾದ ಸಾಮಾಜಿಕ, ಧಾರ್ಮಿಕ ಸುಧಾರಣಾ ಚಳುವಳಿ, ನಂತರ ಬಸವೇಶ್ವರ, ಜ್ಯೋತಿಭಾ ಫುಲೆ, ನಾರಾಯಣ ಗುರು, ಪೆರಿಯಾರ ರಾಮಸ್ವಾಮಿ ಅಯ್ಯಂಗಾರ, ಶಾಹೂಮಹಾರಾಜ, ಸಯ್ಯಾಜಿರಾವ್ ಗಾಯಕವಾಡ ಹಾಗೂ ಡಾ. ಅಂಬೇಡ್ಕರರ ವರೆಗೆ ಮುಂದುವರೆದು, ಆಧುನಿಕ ಭಾರತ ನಿರ್ಮಿಸುವಲ್ಲಿ ಈ ಚಳುವಳಿ ಪ್ರಮುಖ ಪಾತ್ರ ವಹಿಸಿತು. ಹಿಂದೂ ಧಾರ್ಮಿಕ ಸಾಮಾಜಿಕ ಶೋಷಣೆಯ ವಿರುದ್ಧ, ಮೌಡ್ಯತೆಗಳ ವಿರುದ್ಧ ತಮ್ಮ ರಾಜ್ಯದಲ್ಲಿ ಸಾಮಾಜಿಕ, ಧಾರ್ಮಿಕ ಸುಧಾರಣಾ ಚಳುವಳಿ ಪ್ರಾರಂಭಿಸಿದರು. ಈ ಸುಧಾರಣೆಗೆ ಮೂಲ ಪ್ರೇರಣೆಯಾದದ್ದು ಜ್ಯೋತಿಭಾ ಪುಲೆ ಅವರ ಚಳುವಳಿ. ಇವರು ಅಂಬೇಡ್ಕರ ಅವರಿಗೆ ನೀಡಿದ ಸಹಾಯದಿಂದ ಭಾರತದ ಶ್ರೇಷ್ಠವಾದ ಸಂವಿಧಾನ ರಚಿಸಲು ಸಾಧ್ಯವಾಯಿತು. ಶಾಹುಮಹಾರಾಜರ ಮೂಲ ಹೆಸರು “ಯಶವಂತರಾವ್”. ಕೊಲ್ಲಾಪೂರ ಸಂಸ್ಥಾನದ ರಾಜ ನಾಲ್ವಡಿ ಶಿವಾಜಿ ತೀರಿಕೊಂಡ ನಂತರ ಆತನಿಗೆ ಮಕ್ಕಳಿರಲಿಲ್ಲ. (ಇತನ ಹೆಂಡತಿ ಆನಂದಿಬಾಯಿ). ಇಂತಹ ಸಂದರ್ಭದಲ್ಲಿ ಕೊಲ್ಲಾಪುರ ರಾಜಮನೆತನದ ದೂರದ ಸಂಬಂಧಿಯಾದ ಕಾಗಲ್ ಪ್ರದೇಶದ ಮುಖ್ಯಸ್ಥನಾದ ಅಪ್ಪಾಸಾಹೇಬ ಜಯಸಿಂಗ್‌ರಾವ್ ಘಾಟಗೆರವರು ಮುಧೋಳ ಸಂಸ್ಥಾನದ ರಾಧಾಬಾಯಿಯನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ 1874 ರಲ್ಲಿ ಯಶವಂತರಾವ್ ಎಂಬ ಮಗ ಜನ್ಮತಾಳಿದನು. ಆತನು 10 ವರ್ಷದವನಿದ್ದಾಗ ಕೊಲ್ಲಾಪುರ ಸಂಸ್ಥಾನದ ರಾಣಿ ಆನಂದಿಬಾಯಿ 1884 ರಲ್ಲಿ ಯಶವಂತರಾವ್‌ನನ್ನು ದತ್ತು ಪಡೆದುಕೊಂಡಳು. ಆತನಿಗೆ ಶಾಹುಮಹಾರಾಜ ಎಂದು ಮರುನಾಮಕರಣ ಮಾಡಿದಳು. ಆನಂತರ ಕೊಲ್ಲಾಪುರ ಸಂಸ್ಥಾನದ ರಾಜನ್ನಾಗಿ ಮಾಡಿದರು. ಪ್ರಾರಂಭದಲ್ಲಿ ಶಾಹುಮಹಾರಾಜರಿಗೆ ಒಳ್ಳೆಯ ಶಿಕ್ಷಣ ನೀಡಲಾಯಿತು. ಕೇಶವರಾವ ಗೋಖಲೆ ಮತ್ತು ರಘುನಾಥರಾವ್ ಸಬನಿಸ್ ಅವರು ಪ್ರಾರಂಭಿಕ ಶಿಕ್ಷಣ ನೀಡಿದರು. ನಂತರ 1889 ರಿಂದ 1892ರ ಕಾಲಘಟ್ಟದಲ್ಲಿ ಶಾಹು ಅವರ ಶಿಕ್ಷಣವು ಧಾರವಾಡದಲ್ಲಿ “ಸರ್ ಸ್ಟೂವರ್ಟ್ ಫ್ರೇಜರ್” ಅವರ ಉಸ್ತುವಾರಿಯಲ್ಲಿ ನಡೆಯಿತು.

Article Details

Section

Research Articles

Author Biography

ಅರುಣ ಚಿ. ಕಲ್ಲೋಳಿಕರ

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಧಾರವಾಡ.

 

How to Cite

ಅರುಣ ಚಿ. ಕಲ್ಲೋಳಿಕರ. (2025). ಶಾಹುಮಹಾರಾಜರ ಸುಧಾರಣೆಗಳು ಹಾಗೂ ಪರಿಣಾಮಗಳು. ಅಕ್ಷರಸೂರ್ಯ (AKSHARASURYA), 9(01), 14 to 19. https://aksharasurya.com/index.php/latest/article/view/1556

References

ಡಾ. ಅನುಪಮಾ ಎಚ್. ಎಸ್., ಛತ್ರಪತಿ ಶಾಹೂ ಮಹಾರಾಜ, ಲಡಾಯಿ ಪ್ರಕಾಶನ, ಗದಗ.

ಧನಂಜಯ ಕೀರ್., ಡಾ. ಅಂಬೇಡ್ಕರ್ ಜೀವನ ಮತ್ತು ಸಾಧನೆ, ಮೂಲ:

ನಾರಾಯಣ ಗುರು., (2015), ಸಮಾನತೆಯ ಸಂಚಲನ, ರೂಪಾ ಪ್ರಕಾಶನ, ಮೈಸೂರು.

ಮಂಗಲಾ ಕಾಳಶ್ರೀ, (1996) ವಿಮೋಚನಾ ಹೋರಾಟಗಳ, ಅನಾರ್ಯ ಪ್ರಕಾಶನ, ಧಾರವಾಡ.

ಡಾ. ಚೇಜಿ ಗೌಡ., ವಿಚಾರವಾದಿ ಪೆರಿಯಾರ, ಪೆರಿಯಾರ್ ಮಿಷನ್, ಬೆಂಗಳೂರು.

ಪ್ರೊ. ಮರ್ಜಿ ಸದಾಶಿವ., (2008), ಜ್ಯೋತಿಬಾ ಫುಲೆ, ಸಮಿತ್ ಪ್ರಕಾಶ, ಹುನಗುಂದ.

ಥೋರೆಟ್ ಸುಖದೇವ್., ಅನು: ಶ್ರೀಪಾದ, ಜಾತಿ, ಲಡಾಯಿ ಪ್ರಕಾಶನ, ಗದಗ.

ದಲಿತ್ ಲೀಡರ್ಸ್ ಆ್ಯಂಡ್ ಮೂಮೆಂಟ್ ಇನ್ ಇಂಡಿಯಾ, ಅರೈಸ್ ಪಬ್ಲಿಷರ್ಸ್, (2002) ನ್ಯೂ ದೆಹಲಿ.

Most read articles by the same author(s)