ಜಾನಪದ ಗರತಿ ಮತ್ತು ಆಧುನಿಕ ಮಹಿಳೆ

Main Article Content

ಮೋಹನ ಬೆಣಚಮರ್ಡಿ

Abstract

ಈ ನೆಲದ ಸತ್ವವನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಜನಪದರ ಕೊಡುಗೆ ಅಪಾರ. ದಿನದ ಪ್ರತಿ ಕಾರ್ಯದಲ್ಲೂ ದೇಶೀಯತೆಯ ಸೊಗಡನ್ನು ಹೇಗೆ ಹರಡಿದ್ದರು ಎಂಬುದನ್ನು ನಮ್ಮ ಜನಪದ ಸಾಹಿತ್ಯ ಹೇಳುತ್ತದೆ. ಬದಲಾಗಿರುವ ಇಂದಿನ ಆಧುನಿಕ, ಆಧುನಿಕೋತ್ತರ ಭಾರತದಲ್ಲಿ ಭಾರತೀಯ ಸ್ತ್ರೀಯರ ಮನೋಭಾವ, ಜೀವನಶೈಲಿಯಲ್ಲಿ ಮೇಲ್ನೋಟಕ್ಕೆ ಸಾಕಷ್ಟು ಬದಲಾವಣೆಯಾಗಿದೆ ಎಂಬಂತೆ ಕಂಡರೂ ಜಾನಪದ ಗರತಿ ಮತ್ತು ಆಧುನಿಕ ಮಹಿಳೆಯ ಸಾಮ್ಯತೆಗಳಿರುವುದನ್ನು ಕಾಣುತ್ತೇವೆ. ಮನೆಯ ನಾಲ್ಕು ಗೋಡೆಗೆ ಸೀಮಿತಳಾಗಿದ್ದ ಮಹಿಳೆಯ ಮನರಂಜನೆಯ ಒಂದು ಅಂಶವಾಗಿದ್ದ ಜನಪದ ಕ್ರೀಡೆಗಳಲ್ಲೂ ಮಹಿಳೆಯರನ್ನು ಕೇವಲ ಒಳಾಂಗಣ ಆಟಕ್ಕೆ ಮಾತ್ರ ಮೀಸಲಿರಿಸಿದರು. ಹೆಣ್ಣುಮಕ್ಕಳ ಆಟಗಳನ್ನು ಆಟಗಳೆಂದು ಕರೆಯುತ್ತಿದ್ದರೆ ಹೊರತು ಕ್ರೀಡೆಗಳೆಂದಲ್ಲ. ಇಂದಿನ ಮಹಿಳೆ ಕುಟುಂಬದ ಆರ್ಥಿಕ ಪ್ರಗತಿ, ಮಕ್ಕಳ ಶ್ರೇಯೋಭಿವೃದ್ಧಿ, ತನ್ನ ಅಸ್ಮಿತೆ, ಸ್ವಾವಲಂಬಿ ಬದುಕಿಗೋಸ್ಕರ ಆರ್ಥಿಕ ಸ್ವಾತಂತ್ರ್ಯವನ್ನು ಪಡೆದಿರುವ ಮಹಿಳೆ ಪುರುಷನಿಗೆ ಸರಿಸಮಾನವಾಗಿ ದುಡಿಯುತ್ತಿರುವುದರಿಂದ ಮಕ್ಕಳ ಆರೈಕೆಗೋಸ್ಕರ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದಾಳೆ.

Article Details

Section

Research Articles

Author Biography

ಮೋಹನ ಬೆಣಚಮರ್ಡಿ

ಉಪನ್ಯಾಸಕರು, ಕನ್ನಡ ವಿಭಾಗ, ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸವದತ್ತಿ.

How to Cite

ಮೋಹನ ಬೆಣಚಮರ್ಡಿ. (2025). ಜಾನಪದ ಗರತಿ ಮತ್ತು ಆಧುನಿಕ ಮಹಿಳೆ. ಅಕ್ಷರಸೂರ್ಯ (AKSHARASURYA), 8(02), 253 to 258. https://aksharasurya.com/index.php/latest/article/view/1413

References

ಶಾಂತಾ ಇಮ್ರಾಪುರ, (2001), ಧರ್ಮ- ಮಹಿಳೆ ಮತ್ತು ಸಮಾಜ, ಚೇತನಾ ಪ್ರಕಾಶನ, ಧಾರವಾಡ.

ಗಾಯತ್ರಿ ನಾವಡ, (1997), ವಿರಚನೆ, ಎನ್.ಆರ್.ಎ.ಎಮ್.ಎಚ್ ಪ್ರಕಾಶನ, ಕೋಟೇಶ್ವರ.

Most read articles by the same author(s)