ತತ್ವಪದಗಳ ಪರಂಪರೆ ಮತ್ತು ಜಾತಿಯ ಕಲ್ಪನೆ

Main Article Content

ಡಿ. ಕೆ. ನಟರಾಜ
ಗಂಗರೇವಯ್ಯ ಎಸ್. ಸಿ.

Abstract

ಕನ್ನಡ ನಾಡಿನ ಜೀವಂತ ಪರಂಪರೆಯಾಗಿರುವ ತತ್ವಪದಗಳು ಸಮಾಜದ ಜಾತಿ, ಧರ್ಮ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸುತ್ತವೆ. ಭಾರತೀಯ ಶ್ರಮಣಧಾರೆಗಳ ಪ್ರಭಾವವನ್ನು ಒಳಗೊಂಡಿರುವ ಈ ಅನುಭಾವ ಸಾಹಿತ್ಯವು, ಎಲ್ಲರಿಗೂ ಮುಕ್ತಿಯ ಸಮಾನ ಹಕ್ಕಿದೆ ಎಂದು ಸಾರುತ್ತದೆ. ಸಿದ್ಧ ಮತ್ತು ಗುರು ಪರಂಪರೆಗೆ ಸೇರಿದ ಸಾಧಕರು ದೇಹವನ್ನೇ ಸಾಧನೆಯ ವೇದಿಕೆಯನ್ನಾಗಿಸಿಕೊಂಡು, ಜ್ಞಾನಮಾರ್ಗದ ಮೂಲಕ ಸತ್ಯದ ಅನುಸಂಧಾನ ನಡೆಸುತ್ತಾರೆ. ಈ ಪಂಥದಲ್ಲಿ ಕುಲ, ಜಾತಿ, ಸೂತಕ ಮತ್ತು ಲಿಂಗ ಅಸಮಾನತೆಗೆ ಯಾವುದೇ ಸ್ಥಾನವಿಲ್ಲ; ಬದಲಾಗಿ ವಿಶ್ವಕುಟುಂಬಿಯ ಮನೋಭಾವ ಎದ್ದು ಕಾಣುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನೂ ಒಳಗೊಳ್ಳುವ ಈ ಪರಂಪರೆಯು, ತತ್ವಪದಗಳ ಮೂಲಕ ಸಾಮಾಜಿಕ ಅಸಮಾನತೆಗಳನ್ನು ನಿರಾಕರಿಸಿ ಮನುಷ್ಯರೆಲ್ಲರೂ ಸಮಾನರು ಎಂಬ ತಾತ್ವಿಕತೆಯನ್ನು ಬಲವಾಗಿ ಪ್ರತಿಪಾದಿಸಿದೆ.

Article Details

Section

Research Articles

Author Biographies

ಡಿ. ಕೆ. ನಟರಾಜ

ಕನ್ನಡ ಸಹ ಪ್ರಾಧ್ಯಾಪಕರು, ಸರ್ಕಾರಿ ಆ‌ರ್.ಸಿ.ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ರೇಸ್‌ಕೋರ್ಸ್‌ ರಸ್ತೆ, ಬೆಂಗಳೂರು.

ಗಂಗರೇವಯ್ಯ ಎಸ್. ಸಿ.

ಸಂಶೋಧನಾ ವಿದ್ಯಾರ್ಥಿ, ಹಂಪಿ ಕನ್ನಡ ವಿಶ್ವವಿದ್ಯಾಲಯ.

How to Cite

ಡಿ. ಕೆ. ನಟರಾಜ, & ಗಂಗರೇವಯ್ಯ ಎಸ್. ಸಿ. (2023). ತತ್ವಪದಗಳ ಪರಂಪರೆ ಮತ್ತು ಜಾತಿಯ ಕಲ್ಪನೆ. ಅಕ್ಷರಸೂರ್ಯ (AKSHARASURYA), 2(06), 29 to 35. https://aksharasurya.com/index.php/latest/article/view/141

References

ತನ್ನ ತಾನು ತಿಳಿದ ಮೇಲೆ, ಡಾ. ಮೀನಾಕ್ಷಿಬಾಳಿ, ಶ್ರೀ ವೀರೇಶ್ವರ ಪ್ರಕಾಶನ, 2006, ಶ್ರೀ ಮಡಿವಾಳೇಶ್ವರ ಮಠ, ಕಡಕೋಳ.

ಶಿಶುನಾಳ ಶರೀಪರ ಗೀತೆಗಳು, ಡಾ. ಶಿವಾನಂದ ಗುಬ್ಬಣ್ಣನವರ (ಸಂ), ಅಕ್ಷರ ಪ್ರಕಾಶನ, ಧಾರವಾಡ, 2002.

ಕಡಕೋಳ ಮಡಿವಾಳಪ್ಪನವರು, ಎಲ್. ಬಿ. ಕೆ. ಅಲ್ಪಾಳ, ಕನ್ನಡ ಸಾಹಿತ್ಯ ಪರಿಷತ್ತು, 2018.

ಎಲ್ಲ ಜಾತಿಯ ಮರಗಳ ಕಾಡು, ತತ್ವಪದಕಾರರು, ಅಭಿನವ ಪ್ರಕಾಶನ, ರಾಜಾಜಿನಗರ, ಬೆಂಗಳೂರು, 1995.

Most read articles by the same author(s)