ತತ್ವಪದ ಸಾಹಿತ್ಯದ ಉಗಮ ಮತ್ತು ಭಾಷೆ

Main Article Content

ಡಿ. ಕೆ. ನಟರಾಜ
ಗಂಗರೇವಯ್ಯ ಎಸ್. ಸಿ.

Abstract

ತತ್ವಪದಗಳು ಸಮಾಜದಲ್ಲಿ ಮಾನವನ ದೇಹವನ್ನು ಮುಖ್ಯ ನೆಲೆಯಾಗಿ ಮಾಡಿಕೊಂಡು ಆಧ್ಯಾತ್ಮಿಕ ವಿಚಾರಗಳನ್ನು ಸಾಂಕೇತಿಕವಾಗಿ ನಿರೂಪಿಸುತ್ತವೆ. ಹನ್ನೆರಡನೇ ಶತಮಾನದ ವಚನಕಾರರಿಂದ ಆರಂಭವಾದ ಈ ಪರಂಪರೆಗೆ ಹದಿನಾರನೇ ಶತಮಾನದ ನಿಜಗುಣ ಶಿವಯೋಗಿಗಳು ಭದ್ರ ಬುನಾದಿ ಹಾಕಿದರು. ತತ್ವಪದ ಸಾಹಿತ್ಯವು ಪಂಡಿತರ ಮತ್ತು ರಾಜರ ಆಶ್ರಯದಿಂದ ಹೊರಬಂದು, ಜನಸಾಮಾನ್ಯರ, ದುಡಿಯುವ ವರ್ಗದ ಕಾವ್ಯವಾಗಿ ಬೆಳೆಯಿತು. ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪನಂತಹ ತತ್ವಪದಕಾರರು ಸಂಸಾರದಲ್ಲಿದ್ದುಕೊಂಡೇ ಜಾತಿ, ಮೂಢನಂಬಿಕೆಗಳನ್ನು ವಿರೋಧಿಸಿ ಸಹಬಾಳ್ವೆಯ ಮಾರ್ಗ ತೋರಿದರು. ಜೈನ, ವಚನ ಮತ್ತು ದಾಸ ಸಾಹಿತ್ಯಗಳಂತೆ ತತ್ವಪದ ಸಾಹಿತ್ಯವು ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆ ಹಾಗೂ ಭಕ್ತಿ ಚಳುವಳಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿದೆ.

Article Details

Section

Research Articles

Author Biographies

ಡಿ. ಕೆ. ನಟರಾಜ

ಕನ್ನಡ ಸಹ ಪ್ರಾಧ್ಯಾಪಕರು, ಸರ್ಕಾರಿ ಆರ್.ಸಿ.ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.

ಗಂಗರೇವಯ್ಯ ಎಸ್. ಸಿ.

ಸಂಶೋಧನಾ ವಿದ್ಯಾರ್ಥಿ, ಹಂಪಿ ಕನ್ನಡ ವಿಶ್ವವಿದ್ಯಾಲಯ.

How to Cite

ಡಿ. ಕೆ. ನಟರಾಜ, & ಗಂಗರೇವಯ್ಯ ಎಸ್. ಸಿ. (2023). ತತ್ವಪದ ಸಾಹಿತ್ಯದ ಉಗಮ ಮತ್ತು ಭಾಷೆ. ಅಕ್ಷರಸೂರ್ಯ (AKSHARASURYA), 2(05), 171 to 177. https://aksharasurya.com/index.php/latest/article/view/134

References

ತತ್ವಪದ ಸಾಹಿತ್ಯ ಅಧ್ಯಯನ, ಡಾ. ಅಮರೇಶ ನುಗಡೋಣಿ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2017.

ತತ್ವಪದಗಳ ಭಾಷೆ ಮತ್ತು ಬಂಧ, ಡಾ. ಚಂದ್ರಶೇಖರನಂಗಲಿ, ಕನ್ನಡ ಸಂಘ, ಕ್ರೈಸ್ಟ್ ಕಾಲೇಜು, ಬೆಂಗಳುರು, 1998.

ಭಾಷೆಯ ಸುತ್ತ-ಮುತ್ತ, ಕೆ. ವಿ. ನಾರಾಯಣ, ಕ್ರೈಸ್ಟ್ ಕಾಲೇಜು, 2000.

ಕನ್ನಡ ಭಾಷಾ ಸ್ವರೂಪ, ಕುವೆಂಪು ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, 1997.

Most read articles by the same author(s)