ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಭಾಷೆಗೆ ಇರುವ ಸವಾಲುಗಳು

Main Article Content

ಗೌರಮ್ಮ ಟಿ. ರಾಜು

Abstract

ನಮ್ಮ ಹಿರಿಯರನೇಕರು ಈ ನಾಡುನುಡಿಗಳನ್ನು ಕಟ್ಟಿ ಬೆಳೆಸಿದ್ದಾರೆ. ಈ ಕಟ್ಟುವ ಕೆಲಸವನ್ನು ಇಂದಿನವರು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಈ ಕೆಲಸ ಸತತವಾಗಿ ನಡೆಯಬೇಕಾಗಿರುವಂಥದ್ದು. ನಮ್ಮ ಭಾಷೆಸಾಹಿತ್ಯಗಳ ಅಭಿವೃದ್ಧಿಗಾಗಿ ಕನ್ನಡ ನಾಡಿನ ಸರ್ವಾಂಗೀಣ ಬೆಳವಣಿಗೆಗಾಗಿ ನಾವೆಲ್ಲರೂ ಸಂಕಲ್ಪ ಬಲದಿಂದ ದುಡಿಯಬೇಕಾಗಿದೆ. ಭಾಷೆ ಬೆಳೆದರೆ ಸಂಸ್ಕೃತಿಯೂ ಬೆಳೆಯುತ್ತದೆ. ಶ್ರೀಮಂತ ಭಾಷೆಯಲ್ಲಿ ಮಾತ್ರವೇ ವಿಚಾರಗಳು ಸ್ಪಂದಿಸಬಲ್ಲವು. ಸಮಾಜದ ಆರೋಗ್ಯ ಪಾಲನೆಯಲ್ಲಿ ಭಾಷೆಯದೂ ಮಹತ್ವದ ಪಾಲಿದೆ. ಕರ್ನಾಟಕದಲ್ಲಿ ಕನ್ನಡವೇ ಮುಖ್ಯ. ನಾವು ಎಲ್ಲಿಯೇ ಇರಲಿ ಕನ್ನಡಿಗರು ನಮ್ಮ ರಾಜ್ಯದ ವಿಮಾನ ನಿಲ್ದಾಣ, ರೈಲ್ವೆ, ಅಂಚೆ ಕಛೇರಿ ಮತ್ತು ಬ್ಯಾಂಕ್ ಇತರ ಕೇಂದ್ರ ಕಛೇರಿಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ನಾವು ಮೊದಲು ಕನ್ನಡಿಗರಾಗಬೇಕು. ನಮ್ಮ ವ್ಯವಹಾರ ಕನ್ನಡದಲ್ಲಿರಬೇಕು. ನಮ್ಮ ಕಲಿಕೆ ಮಾತೃಭಾಷೆಯಲ್ಲಿರಬೇಕು.

Article Details

Section

Research Articles

Author Biography

ಗೌರಮ್ಮ ಟಿ. ರಾಜು

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ನಿಟ್ಟೆ ಡೀಮ್ಡ್‌ ಟು ಬಿ ಯೂನಿವರ್ಸಿಟಿ, ಯಲಹಂಕ, ಬೆಂಗಳೂರು.

How to Cite

ಗೌರಮ್ಮ ಟಿ. ರಾಜು. (2025). ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಭಾಷೆಗೆ ಇರುವ ಸವಾಲುಗಳು. ಅಕ್ಷರಸೂರ್ಯ (AKSHARASURYA), 8(02), 63 to 69. https://aksharasurya.com/index.php/latest/article/view/1392

References

ತಿಪ್ಪೇರುದ್ರಸ್ವಾಮಿ ಎಚ್., (2016), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಡಿ.ವಿ.ಕೆ ಮೂರ್ತಿ ಪ್ರಕಾಶನ, ಕೃಷ್ಣಮೂರ್ತಿಪುರಂ, ಮೈಸೂರು04

ಕೃಷ್ಣಯ್ಯ ಎಂ.ಎಚ್., (1999) ಸಂಕ್ಷಿಪ್ತ ಕನ್ನಡ ಭಾಷೆ ಚರಿತ್ರೆ, ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.

Most read articles by the same author(s)