ತತ್ವಪದಗಳ ಪಾರಂಪರಿಕತೆ ಮತ್ತು ಆಧುನಿಕತೆ

Main Article Content

ಗೌರಮ್ಮ ಟಿ. ರಾಜು

Abstract

ಕನ್ನಡ ಸಾಹಿತ್ಯ ತನ್ನ ಸೃಜನಶೀಲ ಶಕ್ತಿಯಿಂದ ಹಾಗೂ ಕಲ್ಪನಾಶೀಲ ಆಯಾಮಗಳಿಂದ ಸಮೃದ್ಧವಾಗಿರುವುದರ ಜೊತೆಗೆ ಈ ಲೋಕ ಮತ್ತು ಆ ಲೋಕಗಳ ಅನುಭವವನ್ನು ಹಾಗೂ ದೈವ ಪರವಾದ ನಂಬಿಕೆಗಳನ್ನು ಒಳಗೊಂಡ ಆಧ್ಯಾತ್ಮಿಕ ಸಂಗತಿಗಳನ್ನು ಜೀವದ್ರವ್ಯವಾಗಿಸಿಕೊಂಡ ವಿಶಿಷ್ಟ ಮೌಲಿಕತೆಯನ್ನು ಕೂಡ ಪಡೆದಿದೆ. ಕನ್ನಡ ಜನಪದ ಸಾಹಿತ್ಯ ಕೂಡ ಇದಕ್ಕೆ ಹೊರತಾಗಿಲ್ಲ. ದೈನಂದಿನ ಜೀವನಾನುಭವಗಳನ್ನು ಅತ್ಯಂತ ಹೃದಯಂಗಮವಾಗಿ ತಮ್ಮದೇ ಆದ ವಿಶಿಷ್ಟ ಅಭಿವ್ಯಕ್ತಿ ಕ್ರಮದಲ್ಲಿ ಸಾದರಪಡಿಸುವ ಜನಪದ ಕವಿಗಳು ಭಕ್ತಿ, ವೈರಾಗ್ಯ, ಅನುಭವ ಹಾಗೂ ಅನುಭಾವಗಳನ್ನು ತುಂಬಾ ಸಮರ್ಥವಾಗಿ ಮತ್ತು ಸಹೃದಯರ ಮನದಲ್ಲಿ ನೆಟ್ಟು ನಿಲ್ಲುವಂತೆ ಸಂಗೀತ ಮತ್ತು ಭಾಷೆಗಳ ಸಮ್ಮಿಲನದೊಡನೆ ಪ್ರಕಟಿಸಿದ್ದಾರೆ.

Article Details

Section

Research Articles

Author Biography

ಗೌರಮ್ಮ ಟಿ. ರಾಜು

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಯಲಹಂಕ, ಬೆಂಗಳೂರು.

How to Cite

ಗೌರಮ್ಮ ಟಿ. ರಾಜು. (2025). ತತ್ವಪದಗಳ ಪಾರಂಪರಿಕತೆ ಮತ್ತು ಆಧುನಿಕತೆ. ಅಕ್ಷರಸೂರ್ಯ (AKSHARASURYA), 7(03), 80 to 92. https://aksharasurya.com/index.php/latest/article/view/1191

References

ಮೀನಾಕ್ಷಿ ಬಾಳಿ, (2017), ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯರ ತತ್ವಪದಗಳು, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.

ವಿಜಯಶ್ರೀ ಸಬರದ, (1997), ಗುರು ಶಿಷ್ಯರ ತತ್ವಪದಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

Most read articles by the same author(s)