ಕನ್ನಡ ಕಥಾ ಸಾಹಿತ್ಯದಲ್ಲಿ ಸ್ತ್ರೀ ದೇಹ, ಲೈಂಗಿಕತೆ ಮತ್ತು ಆತ್ಮ ನಿರ್ಧಾರ: ಎಮ್. ಎಸ್. ವೇದಾ ಹಾಗೂ ಬಿ. ಟಿ. ಜಾಹ್ನವಿ ಅವರ ಕೃತಿಗಳ ವಿಶ್ಲೇಷಣಾತ್ಮಕ ಅಧ್ಯಯನ
Main Article Content
Abstract
ಕನ್ನಡ ಸಣ್ಣ ಕಥೆಯ ಬೆಳವಣಿಗೆಯಲ್ಲಿ ಮಹಿಳೆಯರ ಅಭಿವ್ಯಕ್ತಿ ಮಹತ್ವದ ಸಂಗತಿ. ನವೋದಯ ಸಂದರ್ಭದಲ್ಲಿ ಮಹಿಳೆಯರ ಅಭಿವ್ಯಕ್ತಿ ಪ್ರತಿಭಟನಾತ್ಮಕ ನೆಲೆಯಿಂದಲೇ ಪ್ರಾರಂಭವಾಗಿದೆ. ಹೆಣ್ಣಿನ ಚಿತ್ರವನ್ನು ಮತ್ತು ಮೂಲ ಹಕ್ಕುಗಳಿಂದ ಹೆಣ್ಣು ವಂಚಿತಳಾಗಿದ್ದನ್ನು, ಆದರ್ಶ ಮತ್ತು ಸಂಪ್ರದಾಯಗಳ ಒತ್ತಡಗಳಲ್ಲಿ ಅನುಭವಿಸುವ ಹಿಂಸೆಗಳನ್ನು ಕುರಿತು ಕಥೆಗಾರ್ತಿಯರು ಕಥೆಗಳಲ್ಲಿ ಪ್ರತಿಭಟನಾತ್ಮಕ ನೆಲೆಯಿಂದಲೇ ತಮ್ಮ ನೋವನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಪ್ರಗತಿಶೀಲ ಸಂದರ್ಭದಲ್ಲಿ ಮಹಿಳೆಯರ ಶೋಷಣೆ, ಲೈಂಗಿಕತೆ ಮತ್ತು ಕಾಮ ಮೂಲ ಶೋಷಣೆಯ ವಿಷಯಗಳ ಮೇಲೆ ಮಹಿಳೆಯ ವ್ಯಕ್ತಿತ್ವ ಮತ್ತು ಅಸ್ತಿತ್ವದ ಶೋಧ ನಡೆಯಿತು. ನವ್ಯದ ಆದಿಯಲ್ಲಿ ಅಸ್ತಿತ್ವವಾದ ಚಿಂತನೆಗಳು ಒಂದು ಬಗೆಯ ಆಂತರ್ಯದ ಮೂಲಕವೇ ಅವರ ಜಗತ್ತಿನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುವ ಕ್ರಮವನ್ನು ಸಾಹಿತ್ಯ ಅಭಿವ್ಯಕ್ತಿಯಲ್ಲಿ ಹುಟ್ಟು ಹಾಕಿದವು. ಗಂಡಿನ ಅನ್ಯಾಯವನ್ನು ಧಿಕ್ಕರಿಸುವ ಎದೆಗಾರಿಕೆ ಹಾಗೂ ಸಂಪ್ರದಾಯ ಶರಣತೆಯ ನಿರಾಕರಣೆಯನ್ನು ಲೇಖಕಿಯರಾದ ಎಮ್. ಎಸ್. ವೇದಾ ಹಾಗೂ ಬಿ. ಟಿ. ಜಾಹ್ನವಿ ಅವರ ಕತೆಗಳಲ್ಲಿ ಕಾಣಬಹುದಾಗಿದೆ. ನಂತರ ದಲಿತ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಪುರುಷ ನಿರ್ಮಿಸಿದ ಚೌಕಟ್ಟನ್ನು ದಾಟಿ ಸಮಾನತೆಗಾಗಿ ಬಂಡೇಳುವ ಪಾತ್ರಗಳು ಬಿ. ಟಿ. ಜಾಹ್ನವಿ ಅವರ ಕಥೆಗಳಲ್ಲಿ ನಿರ್ಮಾಣಗೊಂಡಿರುವುದನ್ನು ಕಾಣಬಹುದಾಗಿದೆ. ದಲಿತಬಂಡಾಯ ಸಾಹಿತ್ಯದ ಧ್ಯೇಯ ಶೋಷಿತಪರ ಕಾಳಜಿಯಾಗಿದೆ. ಮಹಿಳೆಯರು ಜಾಗೃತಗೊಂಡು ತಾವು ಅನುಭವಿಸುವ ಶೋಷಣೆಯನ್ನು ಪ್ರತಿಭಟಿಸಬೇಕೆನ್ನುವುದನ್ನು ತಮ್ಮ ಕಥೆಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಸಮಾನತೆಗಾಗಿ ಬಂಡೇಳುವ ಪ್ರತಿಗಾಮಿಗಳಾಗಿ, ಶೋಷಿತ ಮಹಿಳೆಯನ್ನು ಅವರ ಕಥೆಗಳಲ್ಲಿ ಜೀವಂತವಾಗಿ ಮೂಡಿಸಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕರೀಗೌಡ ಬೀಚನಹಳ್ಳಿ (ಸಂ), (2020), ಸ್ವಾತಂತ್ರ್ಯೋತ್ತರ ಕನ್ನಡ ಕಥೆಗಳು, ಸಾಹಿತ್ಯ ಅಕಾಡೆಮಿ, ನವದೆಹಲಿ.
ಅಮೂರ ಜಿ.ಎಸ್., (2012), ಕನ್ನಡ ಕಥನ ಸಾಹಿತ್ಯ, ಸಣ್ಣಕಥೆ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
ವೇದಾ ಎಂ.ಎಸ್., (2010), ಪ್ರೀತಿ ಮತ್ತು ಸಾವು, ಸಂವಹನ ಪ್ರಕಾಶನ, ಮೈಸೂರು.
ವೇದಾ ಎಂ.ಎಸ್., (2010), ಮುಳ್ಳ ಮನೆಯ ಮೇಲೆ, ಸಂವಹನ ಪ್ರಕಾಶನ, ಮೈಸೂರು.
ಜಾಹ್ನವಿ ಬಿ.ಟಿ., (2023), ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ, ಕೌದಿ ಪ್ರಕಾಶನ, ಬೆಂಗಳೂರು.
ಪ್ರಭಾವತಿ ಎಸ್.ವಿ., (2002), ಕನ್ನಡ ಮಹಿಳಾ ಸಾಹಿತ್ಯದಲ್ಲಿ ಸ್ತ್ರೀವಾದೀ ನೆಲೆಗಳು, ರವಿ ಪ್ರಿಂಟರ್ಸ್, ಬೆಂಗಳೂರು.