ವಚನಗಳ ಪ್ರಕೃತಿ ಮೀಮಾಂಸೆಯಲ್ಲಿ ಪರಂಪರೆ ಮತ್ತು ಆಧುನಿಕತೆ

Main Article Content

ಸವಿತಾ ರವಿಶಂಕರ್

Abstract

ಜಗತ್ತಿನ ಗ್ರಹಿಕೆಯ ಭಾಗವಾಗಿರುವ ರೂಪಕದ ಹಿನ್ನಲೆಯಲ್ಲಿ ಪ್ರಕೃತಿ ಸೌಂದರ್ಯ ಪ್ರಜ್ಞೆ ಅಕ್ಕನ ವಚನಗಳಲ್ಲಿ ಹೇಗೆ ಅಭಿವ್ಯಕ್ತಗೊಂಡಿದೆ ಎಂಬುದು ನನ್ನ ಇವತ್ತಿನ ಆಸಕ್ತಿಯ ಭಾಗ. ರೂಪಕ ಎಂದರೆ ಅಲಂಕಾರ, ಅಲಂಕಾರ ಎಂದರೆ ಸೌಂದರ್ಯ, ಸೌಂದರ್ಯ ಎಂದರೆ ಪ್ರಕೃತಿ. ಪ್ರಕೃತಿಯಲ್ಲಿ ಅವಳು ಕಂಡುಕೊಂಡ ಬದುಕು ಆ ಬದುಕೇ ಭಕ್ತಿಯಾದ ಬಗೆ ಅಕ್ಕನಲ್ಲಿ ಮುಖ್ಯವಾದದ್ದು. ಪ್ರಕೃತಿ ಅವಳ ಭಾವನೆಗಳ ಸಂವಹನ ಮಾಧ್ಯಮ. ಪ್ರಕೃತಿಯನ್ನು ಮೂರು ಭಾಗವನ್ನಾಗಿ ಮಾಡಿಕೊಂಡು ಅಕ್ಕನ ವಚನಗಳಲ್ಲಿ ನೋಡಬಯಸುತ್ತೇನೆ.
ಮರ, ಬೆಟ್ಟ, ಪ್ರಾಣಿ, ಪಕ್ಷಿಗಳ ಹಿನ್ನಲೆಯಲ್ಲಿ ಅವಳ ವಚನಗಳನ್ನು ಗುರುತಿಸುವ ಪ್ರಯತ್ನವಿದೆ. ಅಂದರೆ ಪರಿಸರದೊಂದಿಗಿನ ಚಲನೆ. (ಅರಿವಿನ ಕದಳಿಯೇ ಆಗುವ ಪ್ರಕೃತಿ)
ದೇಹ, ಇಂದ್ರಿಯಗಳ ಒಡನಾಟಗಳಲ್ಲಿನ ಅನುಸಂಧಾನದ ವಚನಗಳು. (ದೇಹ, ಇಂದ್ರಿಯಗಳು ಪ್ರಕೃತಿ ಮೀಮಾಂಸೆಯಾಗುವ ವಚನಗಳು)
ಸಮಾಜ, ಸಂಸ್ಕೃತಿ ಕುರಿತ ನಿಲುವುಗಳಲ್ಲಿನ ದ್ವಂದ್ವಗಳ ಬಗೆಹರಿಸಿದ ತಾಣ ವಚನಗಳು. ಅದನ್ನು ಪ್ರಕೃತಿಯ ಮೂಲಕ ಸಮೀಕರಿಸಿಕೊಳ್ಳುವುದೋ ಹೋಲಿಸಿಕೊಳ್ಳುವುದೋ ವಚನಗಳಲ್ಲಿ ಅಕ್ಕ ಕೈಗೊಳ್ಳುವುದನ್ನು ಗುರುತಿಸಲು ಪ್ರಯತ್ನಿಸಿದೆ.
(ಪ್ರಕೃತಿ ಮೀಮಾಂಸೆಯ ಮಾನುಷ ಲೋಕ)
ಈ ಮೇಲಿನ ವಿಭಾಗೀಕರಣದಲ್ಲಿ ಅಕ್ಕಳ ಸೌಂದರ್ಯಪ್ರಜ್ಞೆ ಭಾಷೆಯ ನೆಲೆಯಲ್ಲಿ ಮೊದಲಿಗೆ ಗುರುತಿಸಬಹುದು. ಅವಳ ಭಾವ ಅನುಭಾವಗಳ ವಿಶ್ಲೇಷಣೆ ತನಗೆ ಸ್ಪಷ್ಟಗೊಳಿಸಿಕೊಳ್ಳುವ ನೆಲೆಗಳು ಕಾವ್ಯಾತ್ಮಕ, ಉಪಮೆ, ರೂಪಕಗಳಲ್ಲಿ ಅಡಗಿರುವುದು ಕಾಣುತ್ತೇವೆ. ತತ್ವ ಚಿಂತನೆ, ಪರಂಪರೆಯ ಮುಂದುವರೆದ ಭಾಗದ ವಿವೇಚನೆಗಳು, ಜಿಜ್ಞಾಸೆಗಳು, ಸಿದ್ಧಾಂತರೀತಿಯ ವಿಚಾರಗಳು ಗದ್ಯಾತ್ಮಕವಾಗಿ ವಚನಗಳಲ್ಲಿ ಹರಿದಿರುವುದು ಕಾಣುತ್ತೇವೆ.
ಈ ಲೇಖನದಲ್ಲಿ ಕಾವ್ಯಾತ್ಮಕವಾದ ಕೆಲವು ವಚನಗಳನ್ನು ಆರಿಸಿಕೊಂಡು ಪ್ರಕೃತಿಯ ಸೌಂದರ್ಯ ಪ್ರಜ್ಞೆಯ ಮೂರು ಮುಖಗಳು ಅವಳಿಗೆ ಏನೆಲ್ಲ ಆಗಿತ್ತು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು ಬಯಸುತ್ತೇನೆ.

Article Details

Section

Research Articles

Author Biography

ಸವಿತಾ ರವಿಶಂಕರ್

ಕನ್ನಡ ಸಹಾಯಕ ಪ್ರಾಧ್ಯಾಪಕರು, ಕಲಾ ಮತ್ತು ಮಾನವಿಕ ವಿಭಾಗ, ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್, ಬೆಂಗಳೂರು.

How to Cite

ಸವಿತಾ ರವಿಶಂಕರ್. (2025). ವಚನಗಳ ಪ್ರಕೃತಿ ಮೀಮಾಂಸೆಯಲ್ಲಿ ಪರಂಪರೆ ಮತ್ತು ಆಧುನಿಕತೆ. ಅಕ್ಷರಸೂರ್ಯ (AKSHARASURYA), 7(03), 173 to 182. https://aksharasurya.com/index.php/latest/article/view/1201

References

ಕಲಬುರ್ಗಿ ಎಂ.ಎಂ., (2016), ಬಸವಯುಗ ಮಹಾಸಂಪುಟ–1. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ನಾರಾಯಣ ಪಿ.ವಿ., (2018), ಅಕ್ಕನ ವಚನಗಳು ( ವಚನಗಳ ಆಯ್ಕೆ ಮತ್ತು ಟಿಪ್ಪಣಿಗಳು), ಅಂಕಿತ ಪುಸ್ತಕ, ಬೆಂಗಳೂರು.

ಆಶಾದೇವಿ ಎಂ.ಎಸ್.‌, (2021), ನಡುವೆ ಸುಳಿವ ಆತ್ಮ: ಸ್ತ್ರೀಸಂಕಥನದ ಚಹರೆಗಳು, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ.

ಚಿದಾನಂದಮೂರ್ತಿ ಎಂ., (2013), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ: ವಚನ ಸಾಹಿತ್ಯ (ಸಂಪುಟ-5), ಸ್ವಪ್ನ ಬುಕ್ ಹೌಸ್‌, ಬೆಂಗಳೂರು.

ಚಂದ್ರಶೇಖರ ಟಿ.ಆರ್., (2004), ವಚನ ಸಂಸ್ಕೃತಿಯ ಸಾಮಾಜಿಕ ಆಯಾಮಗಳು, ಸಿವಿಜಿ ಪ್ರಕಾಶನ, ಬೆಂಗಳೂರು.

Most read articles by the same author(s)