ಸಂಶೋಧನಾ ನೀತಿಶಾಸ್ತ್ರ ಮತ್ತು ಕೃತಿಚೌರ್ಯ.

Authors

  • MANJUNATH R. P.

Abstract

ಪ್ರಕೃತಿಯಲ್ಲಿರುವ ಎಲ್ಲವೂ ನಿಸರ್ಗಮಯವೇ ಆಗಿರುವಾಗ ಸ್ವಂತದ್ದು ಅಥವಾ ಮಾನವ ನಿರ್ಮಿತ ಎಂಬುವುದೆಲ್ಲವೂ ಮಿಥ್ಯಸತ್ಯ. ನಾವೇನೇದರೂ ಕಂಡು ಹಿಡಿದರೆ, ಬರೆದರೆ, ನಿರ್ಮಿಸಿದರೆ ಅದರ ಒಡೆತನವನ್ನು ಬಹುಬೇಗ ಪಡೆದುಕೊಳ್ಳಲು ಕಾತಾರದಿಂದ ಪ್ರಯತ್ನಿಸುತ್ತೇವೆ.ಅದರ ಮೇಲೆಲ್ಲ ನಮ್ಮ ಹೆಸರುನಮೂದಿಸಿ ಸಂತಸ ಪಡುತ್ತೇವೆ. ಆದರೆ ನಿಸ್ವಾರ್ಥಪರವಾದ ಪ್ರಕೃತಿ ಎಲ್ಲವನ್ನೂ ಮಾನವನಿಗೆ ಕೊಡುಗೆ ನೀಡಿಯೂ ಎಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿದಿರುವುದು ನಿಜಕ್ಕೂ ಆಧರಣಿಯವಾದುದ್ದಾಗಿದೆ.

ಇಂದು ಮಾನವನಿಂದಾದ್ದು ಎಂಬುವುದೆಲ್ಲವೂ ಪ್ರಕೃತಿಯಿಂದ ನಾವು ಮಾಡಿರುವ ಕೃತಿಚೌರ್ಯವಾಗಿದೆ. ನಮ್ಮ ನಮ್ಮ ಆವಿಷ್ಕಾರಗಳ ಆವಿಷ್ಕಾರಕ್ಕೆ ಪೇಟೆಂಟ್/ಲೈಸನ್ಸ್ ಪಡೆದು ಬೀಗುತ್ತೇವೆ.ಆದರೆ ಅವೆಲ್ಲವೂ ಈಗಾಗಲೇ ಪ್ರಕೃತಿಯಲ್ಲಿ ಲೀನವಾಗಿರುವುದನ್ನು ನಾವು ಈಗೀಗ ಅವಿಸ್ಕರಿಸುತ್ತಾ ಇದ್ದೇವೆ. ಆಗಂತಾ ಮನುಷ್ಯನ ಸ್ವಂತಿಕೆ ಏನು ಇಲ್ಲವೇ? ಎಂದು ಪ್ರಶ್ನಿಸಬಹುದು. ಇದೆ! ಅದುವೇ ಅವನ ಸೃಜನಾತ್ಮಕ ಶಕ್ತಿ ಎಂದು ಹೇಳಬಹುದು. ಅದರ ಮೂಲಕವೇ ಅಕ್ಷರಗಳನ್ನು ಪದಗಳಾಗಿಸಿ, ಪದಗಳನ್ನು ವಾಖ್ಯೆಗಳನ್ನಾಗಿಸಿ ಪದಗಳಿಗಳಿಂದಲೇ ಸಾಹಿತ್ಯವನ್ನಾಗಿಸುವ ಚಾಕಚಕ್ಯತೆಗೆ ಕ್ರಿಯಾತ್ಮಕತೆ/ಸೃಜನಾತ್ಮಕತೆಎಂದು ಹೆಸರು. ಈ ಮೂಲಕವೇ ಸೃಷ್ಠಿಯಾದ ಬರಹವನ್ನು ಅವನ ಸ್ವಂತದ್ದು ಎನ್ನಬಹುದಾಗಿದೆ.

ಆದರೆ ಮಾನವ ನಿರ್ಮಿತ ಎನಿಸಿದ ಬರಹಗಳನ್ನು ಕದ್ದು ತಮ್ಮದೆಂದು ತೋರಿ ಬೀಗುವ ಬಿನ್ನಾಣರಿಗೆ ‘ಕೃತಿಚೋರರು’ ಎಂಬ ನಾಮಾಂಕಿತವನ್ನು ಇರಿಸಲಾಗಿದೆ. ಆದರೆ ಈ ಕರ‍್ಯ ಮಹಾಪಾಪ. ಈಗೀಗಂತೂ ಇಂತಃ ಪ್ರಕರಣಗಳು ವಿಶ್ವವ್ಯಾಪಿಯಾಗಿವೆ. ಇದನ್ನು ವಿರೋಧಿಸುವ ಸಲುವಾಗಿಯೆ ಪ್ರಪಂಚದ ಎಲ್ಲ ದೇಶಗಳ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಕಾನೂನಿನ ಮೂಲಕವೇ ನ್ಯಾಯ ಪಡಿಯುವ ವ್ಯವಸ್ಥೆ ರೂಪಿಸಲಾಗಿದೆ. ಆ ನಿಟ್ಟಿನಲ್ಲಿ ಇತ್ಯರ್ಥವಾದ ಅನೇಕ ಪ್ರಕರಣ ಉದಾಹರಣೆಗಳನ್ನು ನಾವಿಲ್ಲಿ ದರ್ಶೀಸಿದೆವು.

Downloads

Published

05.05.2023

How to Cite

MANJUNATH R. P. (2023). ಸಂಶೋಧನಾ ನೀತಿಶಾಸ್ತ್ರ ಮತ್ತು ಕೃತಿಚೌರ್ಯ. AKSHARASURYA, 2(05), 134–146. Retrieved from https://aksharasurya.com/index.php/latest/article/view/126

Issue

Section

Article