ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪರಂಪರೆ ಹಾಗೂ ಡಿಜಿಟಲೀಕರಣ

Main Article Content

ನವೀನ್ ಕುಮಾರ್ ಸಿ.

Abstract

ಈ ಲೇಖನವು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪರಂಪರೆಯ ಪಾತ್ರ ಹಾಗೂ ಡಿಜಿಟಲೀಕರಣದ ಪರಿಣಾಮವನ್ನು ವಿಶ್ಲೇಷಿಸುತ್ತದೆ. ಕನ್ನಡ ಸಾಹಿತ್ಯವು ಶತಮಾನಗಳ ಹಿಂದಿನ ಸಂಸ್ಕೃತಿಯ ಪ್ರತಿರೂಪವಾಗಿದ್ದು, ಆಧ್ಯಾತ್ಮಿಕತೆ, ನೈತಿಕತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ವರ್ಣಿಸಿಕೊಂಡು ಬಂದಿದೆ. ಆದರೆ ಇತ್ತೀಚಿನ ಡಿಜಿಟಲ್ ಯುಗದಲ್ಲಿ ಈ ಪರಂಪರೆಯು ಹೊಸ ತಂತ್ರಜ್ಞಾನಗಳೊಡನೆ ಹೊಂದಾಣಿಕೆಯಾಗುತ್ತಿರುವುದು ಗಮನಾರ್ಹವಾಗಿದೆ. ಇ-ಪುಸ್ತಕಗಳು, ಆಡಿಯೋ ಪುಸ್ತಕಗಳು, ಡಿಜಿಟಲ್ ಗ್ರಂಥಾಲಯಗಳು, ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಹಿತ್ಯದ ಪಠನ ಮತ್ತು ಪ್ರಸಾರ ಕ್ರಮದಲ್ಲಿ ಸಂವೇದನಾಶೀಲ ಬದಲಾವಣೆಗಳು ಉಂಟಾಗಿವೆ. ಈ ಬೆಳವಣಿಗೆಗಳು ಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸಿದರೂ, ಅದರ ಮೂಲ ಪರಂಪರೆಯ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿ ಉಳಿದಿದೆ. ಈ ಅಧ್ಯಯನವು ಪರಂಪರೆ ಮತ್ತು ಆಧುನಿಕತೆಯ ನಡುವಿನ ತಾತ್ವಿಕ ಅನ್ವೇಷಣೆಯೊಂದಿಗೆ, ಡಿಜಿಟಲೀಕರಣದ ಪ್ರಭಾವವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಪರಂಪರೆ ಎಂದರೆ ಪೂರಕವಾಗಿ ಬೆಳೆದ ಮಾನವೀಯ ಸಾಂಸ್ಕೃತಿಕ ಮೌಲ್ಯಗಳು, ಬದುಕಿನ ಶೈಲಿ ಮತ್ತು ಜ್ಞಾನ ಪರಂಪರೆಯ ಸಂಕೇತವಾಗಿದೆ. ಕಾಲಚಕ್ರದ ಬದಲಾವಣೆಯ ಶಕ್ತಿಯಾದ ಆಧುನಿಕತೆ, ಪರಂಪರೆಯ ಮೌಲ್ಯಗಳನ್ನು ಪ್ರಶ್ನಿಸುವುದು, ಹೊಸ ತಳಹದಿಗಳನ್ನು ಸೃಜಿಸುವುದು ಸೇರಿದಂತೆ ವಿವಿಧ ಬಗೆಯ ಪ್ರಭಾವಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಅಧ್ಯಯನದಲ್ಲಿ, ವಿಶೇಷವಾಗಿ ಕನ್ನಡ ಸಾಹಿತ್ಯದ ಕ್ಷೇತ್ರವನ್ನು ಆಧಾರವಾಗಿ ತೆಗೆದುಕೊಂಡು, 21ನೇ ಶತಮಾನದಲ್ಲಿ ಡಿಜಿಟಲ್ ತಂತ್ರಜ್ಞಾನದ ಪ್ರವೇಶವು ಸಾಹಿತ್ಯದ ಸ್ವರೂಪ, ಪ್ರಪಂಚ, ಪ್ರಸರಣ ಮತ್ತು ಗ್ರಹಿಕೆಯಲ್ಲಿ ತಂದುಕೊಂಡಿರುವ ಬದಲಾವಣೆಗಳನ್ನು ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ನವೀನ್ ಕುಮಾರ್ ಸಿ.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಕಲಾ ಮತ್ತು ಮಾನವಿಕ ವಿಭಾಗ, ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್, ಬೆಂಗಳೂರು.

References

ಭೈರಪ್ಪ ಎಸ್.ಎಲ್., (1998), ಸಾರ್ಥ, ಸಪ್ನಾ ಬುಕ್ ಹೌಸ್, ಬೆಂಗಳೂರು.

ಮುದ್ರಾಡಿಕೆ ಎಸ್., (2022), ಡಿಜಿಟಲ್ ಯುಗದ ಕನ್ನಡ ಸಾಹಿತ್ಯ, ಪತ್ರಿಕಾ ಪ್ರಪಂಚ, ಬೆಂಗಳೂರು.

ವೆಂಕಟೇಶಮೂರ್ತಿ ಎಚ್.ಎಸ್., (2009), ನವೋದಯ ಸಾಹಿತ್ಯ ಚಿಂತನೆ, ಪ್ರಜಾವಾಣಿ ಪ್ರಕಾಶನ, ಬೆಂಗಳೂರು.

Ministry of Education, Government of India, National Digital Library of India (www.ndl.iitkgp.ac.in).

ರಾಘವೇಂದ್ರ ಎಸ್., (2021), ಸಾಹಿತ್ಯ ಮತ್ತು ತಂತ್ರಜ್ಞಾನ: ಒಂದು ಅಧ್ಯಯನ, ಶ್ರೇಷ್ಠ ಪ್ರಕಾಶನ, ಬೆಂಗಳೂರು.