ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು

Main Article Content

ಗೀತಾಲಕ್ಷ್ಮಿ ಎಸ್.ಎನ್.

Abstract

ʼʼವಚನಕಾರರು ಮೌಲ್ಯಗಳಿಗಾಗಿಯೇ ಬದುಕಿದವರು”. ನೆಡೆ-ನುಡಿಯ ಸಮನ್ವಯದ ಅಗತ್ಯತೆಯನ್ನು ಸಾರಿದ್ದಾರೆ. ನಮ್ಮ ನುಡಿಯು ಸತ್ಯಶುದ್ಧವಾಗಿರಬೇಕು, ಪಾರದರ್ಶಕವಾಗಿರಬೇಕು, ಪ್ರಕಾಶಮಾನವಾಗಿರಬೇಕು. ಮನವನ್ನು ಮುಟ್ಟುವಂತಿರಬೇಕು. ಸಕಲಜೀವಿಗಳಲ್ಲಿ ಮನುಷ್ಯ ಮಾತ್ರ ಜೀವನ ಮೌಲ್ಯಗಳನ್ನಳವಡಿಸಿಕೊಳ್ಳಲು ಸಾಧ್ಯ. ಮೌಲ್ಯಗಳಿಂದಲೇ ಜೀವನ ಸಾರ್ಥಕವಾಗುತ್ತದೆ. ಈ ಹಿನ್ನಲೆಯಲ್ಲಿ ಮೌಲ್ಯಗಳು, ಬದುಕಿಗೆ ಅನಿವಾರ್ಯವಾಗಿವೆ. ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ ಇಂತಹ ಅನೇಕ ಜೀವನ ಮೌಲ್ಯಗಳನ್ನು ವಚನಕಾರರಲ್ಲಿ ಕಾಣಬಹುದಾಗಿದೆ. ಕಾಯಕ, ದಾಸೋಹ, ಸಾಮಾಜಿಕನ್ಯಾಯದಂತಹ ಮೌಲ್ಯಗಳನ್ನು ಶರಣರು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಜೀವ ಎಷ್ಟು ಮುಖ್ಯವೋ ಜೀವನವೂ ಅಷ್ಟೇ ಮುಖ್ಯ, ಜೀವನ ಎಷ್ಟು ಮುಖ್ಯವೋ ಜೀವನ ಮೌಲ್ಯಗಳೂ ಅಷ್ಟೇ ಮುಖ್ಯವಾಗಿವೆ. ಶರಣರು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ದುಡಿಮೆಯೇ ಪರಿಪೂರ್ಣತೆಯ ಮಾರ್ಗವೆಂದು ತಿಳಿಸಿ ದುಡಿಮೆಯ ಗೌರವವನ್ನು ಹೆಚ್ಚಿಸಿದರು. ಕಾಯಕದ ಶ್ರಮ ಸಂಸ್ಕೃತಿಯನ್ನು ದೈವತ್ವಕ್ಕೇರಿಸಿ ಅದನ್ನೊಂದು ಜೀವನ ಮೌಲ್ಯವನ್ನಾಗಿ ಮಾಡಿದರು. ಕಾಯಕವೇ ಪ್ರತಿಯೊಬ್ಬರ ಜೀವನದ ಕರ್ತವ್ಯವಾಗಬೇಕು. ಈ ಕಾಯಕದಲ್ಲಿ ಮೇಲು ಕೀಳುಗಳಿರುವುದಿಲ್ಲ. ಮಾನವನಲ್ಲಿ ಸುಪ್ತವಾಗಿರುವ ವಿವಿಧ ಕ್ರಿಯಾಶಕ್ತಿಯನ್ನು ಉತ್ತಮಗೊಳಿಸಿ, ಅದರಿಂದ ತನಗೂ ಉಳಿದವರಿಗೂ ಸೊಗಸುಂಟಾಗುವಂತೆ ಮಾಡುವ ಕಲೆಯೇ ಕಾಯಕ. ಸಮಾಜಮುಖಿ ಚಿಂತನೆಯು ಒಂದು ಪ್ರಮುಖ ಜೀವನ ಮೌಲ್ಯವನ್ನಾಗಿ ಮಾಡಿದರು. ಅಂತರಂಗದ ಸಂಸ್ಕಾರವಿಲ್ಲದೆ ಬಾಹ್ಯವಾಗಿ ಮಾಡುವ ಎಲ್ಲ ಉಪಚಾರಗಳೂ ವ್ಯರ್ಥವೇ. ಬಹಿರಂಗ ಆಚರಣೆಗಿಂತ ಅಂತರಂಗದ ಸಂಸ್ಕಾರ ಮುಖ್ಯ ಎಂದು ವಿವರಿಸುವ ಮೂಲಕ ಮಾನವನ ಜೀವನ ಈ ಎಲ್ಲಾ ರೀತಿಯ ಜೀವನಮೌಲ್ಯವನ್ನು ಅಗತ್ಯವಾಗಿ ಹೊಂದಿರಬೇಕು. 

Article Details

Section

Research Articles

Author Biography

ಗೀತಾಲಕ್ಷ್ಮಿ ಎಸ್.ಎನ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಿ.ಬಿ. ಭಂಡಾರಿ ಜೈನ್ ಕಾಲೇಜು, ವಿ.ವಿ. ಪುರಂ, ಬೆಂಗಳೂರು. 

 

References

ನಾರಾಯಣ ಪಿ.ವಿ., (2014), ವಚನ ಸಮಸ್ತ, ಸಪ್ನ ಬುಕ್‌ ಹೌಸ್‌, ಬೆಂಗಳೂರು.

ನಾಗರಾಜ್ ಕಿ.ರಂ., (2017), ವಚನ ಕಮ್ಮಟ, ಸಪ್ನ ಬುಕ್‌ ಹೌಸ್‌, ಬೆಂಗಳೂರು.

ಮುಗಳಿ ರಂ.ಶ್ರೀ., (1953), ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್‌ ಹೌಸ್‌, ಮೈಸೂರು.

ಚಿದಾನಂದ ಮೂರ್ತಿ ಎಂ., (2013), ವಚನ ಸಾಹಿತ್ಯ, ಸಪ್ನ ಬುಕ್‌ ಹೌಸ್‌, ಬೆಂಗಳೂರು.

ವೀರಣ್ಣ ರಾಜೂರ, (1993), ಶಿವಶರಣೆಯರ ವಚನ ಸಂಪುಟ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.