ಸದಾಶಿವರಾಯನ ಕಾರ್ಯಕರ್ತ: (ಅಳಿಯ) ರಾಮರಾಜಯ್ಯ
Keywords:
ವಿಜಯನಗರ, ಸದಾಶಿವದೇವರಾಯ, ಅಳಿಯ ರಾಮರಾಯ, ಶಾಸನ, ರಾಮರಾಜಯ್ಯ, ರಾಮರಾಜದೇವ, ಬಯಕಾರ ರಾಮಪ್ಪಯ್ಯAbstract
ವಿಜಯನಗರ ಸಾಮ್ರಾಜ್ಯ ಜಗದ್ವಿಖ್ಯಾತಗೊಂಡದ್ದು ಮೊದಲು ಸಂಗಮ ಅರಸ ಪ್ರೌಢದೇವರಾಯನ ಕಾಲದಲ್ಲಿ ನಂತರ ಮತ್ತೆ ಅದು ಉಚ್ಛ್ರಾಯಸ್ಥಿತಿ ತಲುಪಿದ್ದು ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ಎಂಬುದು ಅನೇಕ ಶಾಸನಗಳು ವಿದೇಶಿ ಪ್ರವಾಸಿಗರ ಬರವಣಿಗೆಗಳಿಂದ ತಿಳಿದು ಬರುತ್ತದೆ. ಇದಕ್ಕೆ ಕಾರಣ ಆ ಅರಸರು ನೇಮಿಸಿಕೊಂಡಿದ್ದ ಮಂತ್ರಿಗಳು ಮತ್ತು ಸೇನಾ ದಂಡನಾಯಕರು ಎಂದು ತಿಳಿದು ಬರುತ್ತದೆ. ಒಂದು ಸಾಮ್ರಾಜ್ಯ ಉನ್ನತಿ ಮತ್ತು ಅವನತಿ ಕಾಣಲು ಆ ಸಾಮ್ರಾಜ್ಯದ ಸೇನೆಯ ಮುಂದಾಳತ್ವವಹಿಸುವ ದಂಡಾನಾಯಕರನ್ನು ಅವಲಂಬಿಸಿದೆ. ಅಂಥ ಸೇನಾದಂಡನಾಯಕರಲ್ಲಿ ಅಳಿಯ ರಾಮರಾಯನೂ ಒಬ್ಬ. ಈತನನ್ನು ಅಖಂಡ ಬಳ್ಳಾರಿ ಜಿಲ್ಲೆಯ ಶಾಸನಗಳು ಅಳಿಯ ರಾಮರಾಜಯ್ಯ, ಅಳಿಯ ರಾಮರಾಜ ಅರಸು, ರಾಮರಾಜ ಮಹಾಅರಸು ಎಂದು ಕರೆದಿವೆ. ಶಾಸನಗಳಲ್ಲಿ ಬರುವ ಅಳಿಯ ರಾಮರಾಜ ಮತ್ತು ರಾಮರಾಜ ಮಹಾಅರಸು ಇಬ್ಬರೂ ಒಬ್ಬನೇ ಎಂದು ಪ್ರಸ್ತುತ ಸಂಶೋಧನಾ ಲೇಖನದಲ್ಲಿ ಕಂಡುಕೊಳ್ಳಲಾಗಿದೆ.
References
ದೇವರಕೊಂಡಾರೆಡ್ಡಿ ಮತ್ತು ಇತರರು (ಸಂ). (1998). ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.