ಕರ್ನಾಟಕ ಜಾನಪದ ಸಂಸ್ಕೃತಿ: ಅವಲೋಕನ

Main Article Content

ಎಸ್. ಎಂ. ಗೋಪಿ

Abstract

ಕರ್ನಾಟಕದ ಜಾನಪದ ಅಧ್ಯಯನದ ಐತಿಹಾಸಿಕ ಹೆಜ್ಜೆಗುರುತುಗಳು ಮತ್ತು ಅದರ ವಿಕಾಸವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ೧೯ನೇ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರಾದ ಅಬ್ಬೆ ಡುಬಾಯ್, ಕಿಟೆಲ್, ಫ್ಲೀಟ್ ಮುಂತಾದವರಿಂದ ಆರಂಭವಾದ ಜಾನಪದ ಸಂಗ್ರಹ ಕಾರ್ಯವು, ತದನಂತರ ಮಾಸ್ತಿ, ಬಿ.ಎಂ.ಶ್ರೀ, ಬೇಂದ್ರೆ ಮತ್ತು ಹಲಸಂಗಿ ಗೆಳೆಯರ ಮೂಲಕ ದೇಶೀಯ ರೂಪ ಪಡೆದುಕೊಂಡಿತು. 'ಗರತಿಯ ಹಾಡು', 'ಹುಟ್ಟಿದ ಹಳ್ಳಿ ಹಳ್ಳಿಯ ಹಾಡು', 'ನಾಡಪದಗಳು' ಮೊದಲಾದ ಪ್ರಾತಿನಿಧಿಕ ಕೃತಿಗಳು ಕನ್ನಡ ಜಾನಪದ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದವು. ೧೯೯೦ರ ದಶಕದ ನಂತರ ಜಾನಪದ ಅಧ್ಯಯನವು ಕೇವಲ ಸಂಗ್ರಹಣೆಯಾಗಿ ಉಳಿಯದೆ, ದಲಿತ, ಬಂಡಾಯ, ಸ್ತ್ರೀವಾದಿ ಮತ್ತು ಅಂತರ್‌ಶಾಸ್ತ್ರೀಯ ನೆಲೆಗಳಲ್ಲಿ ವಿಸ್ತಾರಗೊಂಡ ಬಗೆಯನ್ನು ಇಲ್ಲಿ ದಾಖಲಿಸಲಾಗಿದೆ.

Article Details

Section

Research Articles

Author Biography

ಎಸ್. ಎಂ. ಗೋಪಿ

ಕನ್ನಡ ಸಹಾಯಕ ಪ್ರಾಧ್ಯಾಪಕ, ಸ್ನಾತಕೋತ್ತರ ಕೇಂದ್ರ, ರಾಮನಗರ, ಬೆಂಗಳೂರು ವಿಶ್ವವಿದ್ಯಾಲಯ.

How to Cite

ಎಸ್. ಎಂ. ಗೋಪಿ. (2023). ಕರ್ನಾಟಕ ಜಾನಪದ ಸಂಸ್ಕೃತಿ: ಅವಲೋಕನ. ಅಕ್ಷರಸೂರ್ಯ (AKSHARASURYA), 2(04), 18 to 22. https://aksharasurya.com/index.php/latest/article/view/103

References

ಜಾನಪದ ಅಧ್ಯಯನದ ಸಂಕ್ಷಿಪ್ತ ಇತಿಹಾಸ - ಡಾ.ನಂ.ತಪಸ್ವೀಕುಮಾರ್

ಕರ್ನಾಟಕ ಸಂಶೋಧನಾ ಜಾನಪದ ಸಂ.ಪ್ರೊ.ಅಂಬಳಿಕೆ ಹಿರಿಯಣ್ಣ

ದಕ್ಷಿಣ ಕರ್ನಾಟಕದ ಜಾನಪದ ಕಾವ್ಯ ಪ್ರಕಾರಗಳು - ಡಾ.ಜೀ.ಶಂ.ಪರಮಶಿವಯ್ಯ

ಜಾನಪದ ಅಧ್ಯಯನ ಡಾ.ದೇ.ಜ.ಗೌ

ಹೊನ್ನ ಬಿತ್ತೇವು ಹೊಲಕ್ಕೆಲ್ಲ - ಕರ್ನಾಟಕ ಜಾನಪದ ಅಕಾಡೆಮಿ (ಸ್ಮರಣ ಸಂಚಿಕೆ)

Most read articles by the same author(s)