ಅಕ್ಕಮಹಾದೇವಿಯ ವಚನಗಳು : ಕಾವ್ಯಸೌಂದರ್ಯ ತತ್ವ ಚಿಂತನೆ
Abstract
ಅನುಭವ ಮಂಟಪದ ಅನುಭಾವಗೋಷ್ಠಿಯಲ್ಲಿ ಮಹಾದೇವಿಯಕ್ಕಗಳೇ ವಯಸ್ಸಿನಿಂದ ಚಿಕ್ಕವರು. ಇಪ್ಪತ್ತಕ್ಕಿಂತಲೂ ಕಡಿಮೆ ವಯಸ್ಸು ಅವರಿಗೆ ಆಗ ಚೆನ್ನಬಸವಣ್ಣನವರೊಬ್ಬರು ಮಾತ್ರ ಅಕ್ಕನವರ ಸಮವಯಸ್ಸಿನವರಾಗಿರಬಹುದು. ವಯಸ್ಸಿನಲ್ಲಿ ಕಿರಿಯರಾಗಿ ಅನುಭಾವದಲ್ಲಿ ಹಿರಿಯರಾಗಿ ಉಡುತಡಿಯ ಮಹಾದೇವಿಯವರು ಎಲ್ಲರಿಗೂ ‘ಅಕ್ಕ’ಗಳಾದರು. ಅದರಂತೆ ಅವರು ವಚನಕಾವ್ಯರಚನೆಯಲ್ಲಿಯೂ ‘ಅಕ್ಕ’ಗಳಾಗಿದ್ದಾರೆ. ಹೀಗಾಗಿ “ವಚನಸಾಹಿತ್ಯವು ಕನ್ನಡ ನುಡಿ ವಿಶ್ವಸಾಹಿತ್ಯಕ್ಕೆ ಕೊಟ್ಟ ಅಪೂರ್ವ ಕಾಣಿಕೆ”(ಬಸವಣ್ಣನವರ ಷಟ್ ಸ್ಥಳದ ವಚನಗಳು; ಸಂ.: ಪ್ರೊ. ಶಿ.ಶಿ. ಬಸವನಾಳ ಪ್ರಸ್ತಾವನೆ ಪುಟ ೧) ಎಂದು ಲಿಂ. ಪ್ರೊ. ಬಸವನಾಳರು ಹೇಳಿದುದು ದಿಟ; ವಿಶ್ವ ಸಾಹಿತ್ಯಕ್ಕೆ ಕಾಣಿಕೆಯಾದ ಆ ವಚನ ಸಾಹಿತ್ಯದಲ್ಲಿ ಮಹಾದೇವಿಯಕ್ಕಗಳ ಸ್ಥಾನ ಉನ್ನತವಾಗಿದೆ.