ಮೈಸೂರು ಸಂಸ್ಥಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್
Main Article Content
Abstract
ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದಾದ್ಯಂತ ಶೋಷಿತರ, ಬಡವರ ಹಾಗೂ ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದರು. ತಮ್ಮ ಜೀವನದ ಕೊನೆಯ ದಿನಗಳನ್ನು ಬೌದ್ಧಧರ್ಮದ ಪ್ರಸಾರಕ್ಕಾಗಿ ಮೀಸಲಿಟ್ಟ ಅವರು, ದಕ್ಷಿಣ ಭಾರತದಲ್ಲಿ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಬೌದ್ಧಯಾನವನ್ನು ಕೈಗೊಳ್ಳಲು ಮೈಸೂರು ಸಂಸ್ಥಾನವನ್ನು ಆಯ್ಕೆ ಮಾಡಿಕೊಂಡರು. ಮೈಸೂರು ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು ಬೆಂಗಳೂರಿನಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕಾಗಿ ಐದು ಎಕರೆ ಜಾಗವನ್ನು ದಾನವಾಗಿ ನೀಡಿದರು. ಅಂಬೇಡ್ಕರರ ಈ ಬೌದ್ಧಿಕ ಮತ್ತು ಸಾಂಸ್ಕೃತಿಕ ಚಳವಳಿಯು ಸಮಾನತೆ, ಭ್ರಾತೃತ್ವ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಒಳಗೊಂಡಿತ್ತು. ಕರ್ನಾಟಕ ಮತ್ತು ಮೈಸೂರು ಸಂಸ್ಥಾನದೊಡನೆ ಅವರಿಗಿದ್ದ ಒಡನಾಟ, ಹಾಗೂ ಭೀಮಯಾನದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
Dr. B. R. AMBEDKAR LIFE AND MISSION; DHANANJAY KEER; BOMBAY POPULAR PRAKASHAN, BOMBAY; First published: 1954.
ಸರ್ ಸಾಹೇಬರು(ಸಿದ್ದಪ್ಪ ಕಂಬಳಿಯವರು); ಪಾಟೀಲ ಪುಟ್ಟಪ್ಪ; ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯ ಸಂಸ್ಥಾನಮಠ: ಗದಗ: 1982.
Dr. Babasaheb Ambedkar; Vasnat Moon; Translated from Marathi to English-Asha Damle; National Book Trust, New Delhi; 1991.
ಕುವೆಂಪು ಸಮಗ್ರ ಗದ್ಯ-ಸಂಪುಟ-2; ಸಂ. ಡಾ. ಕೆ. ಸಿ. ಶಿವಾರೆಡ್ಡಿ; ಕನ್ನಡ ವಿಶ್ವವಿದ್ಯಾಲಯ, ಹಂಪಿ; 2004.
ಕುವೆಂಪು ಸಮಗ್ರ ಕಾವ್ಯ-ಸಂಪುಟ-2; ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ; 2013.
ವಚನ ವೈಭವ; ಶಂಕರ ಮ.ಪಾಟೀಲ; ಸಂಗಮ ಪ್ರಕಾಶನ, ಕೊಲ್ಲಾಪುರ, ಮಹಾರಾಷ್ಟ್ರ 2013.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಮೈಸೂರು ಸಂಸ್ಥಾನದಲ್ಲಿ ದಲಿತರು; ಡಾ.ಎನ್.ಚಿನ್ನಸ್ವಾಮಿ ಸೋಸಲೆ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ; 2013.
Dr. BabaSaheb Ambedkar Writings and Speeches; Volume 17-part-01; First Edition by Education Department, Govt. of Maharashtra: Re-printed by Dr. Ambedkar Foundation: 2014.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು; ಸಂಪುಟ 1-22; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು: ಪರಿಷ್ಕೃತ ಮುದ್ರಣ: 2015.